ಮಾನಸಿಕ ಒತ್ತಡ ಧ್ರುವ ಅವರನ್ನು ಬಲಿ ಪಡೆಯಿತು, ದಲಿತ ರಾಜಕಾರಣಿಗಳಲ್ಲಿ ಇದು ಹೆಚ್ಚು: ಕೊಳ್ಳೇಗಾಲ ಶಾಸಕ
ಚಾಮರಾಜನಗರ, ಮಾರ್ಚ್ 11: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿದ್ದ ಆರ್. ಧ್ರುವನಾರಾಯಣ ಅವರಿಗೆ ಶನಿವಾರ ಬೆಳಗ್ಗೆ ಏಕಾಏಕಿ ಹೃದಯಾಘಾತವಾಗಿದ್ದು,
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ದಿಂದ ಮೈಸೂರಿನಲ್ಲಿ ನಿಧನರಾದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರದ ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಏಕಾಏಕಿ ಸಂಭವಸಿದ ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯಲ್ಲೇ ವಿಧಿವಶರಾಗಿದ್ದಾರೆ.

ಆರ್.ಧ್ರುವನಾರಾಯಣ ಅವರ ಅಗಲಿಕೆಗೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸಂತಾಪ ಸೂಚಿಸಿದ್ದು, ಮಾನಸಿಕ ಒತ್ತಡ ಆರ್.ಧ್ರುವನಾರಾಯಣ್ ಅವರನ್ನು ಬಲಿ ಪಡೆಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಈ ಕೊಳಕು ರಾಜಕಾರಣದಲ್ಲಿ ಮಾನಸಿಕ ಒತ್ತಡ ರಾಜಕಾರಣಿಗಳಿಗೆ ಭಾದಿಸುತ್ತಿದೆ, ಇದು ದಲಿತ ರಾಜಕಾರಣಿಗಳಲ್ಲಿ ಹೆಚ್ಚು, ಒತ್ತಡ ನಿರ್ವಹಣೆ ಬಗ್ಗೆ ನಾವು ಸೋಲುತ್ತಿದ್ದೇವೆ, ಆ ಒತ್ತಡವೇ ಅವರನ್ನು ಬಲಿ ಪಡೆಯಿತು ಎಂದು ಕಂಬನಿ ಮಿಡಿದಿದ್ದಾರೆ.
ಮತದಾರರು, ಕಾರ್ಯಕರ್ತರು ಹಾಗೂ ರಾಜಕೀಯ ಪಕ್ಷಗಳಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ, ಅನಗತ್ಯವಾಗಿ ನಾಯಕರುಗಳ ಮೇಲೆ ಒತ್ತಡ ಹೇರಬೇಡಿ, ವಿಶೇಷವಾಗಿ ದಲಿತ ರಾಜಕಾರಣಿಗಳ ಒತ್ತಡ ಹೇರಬೇಡಿ ಎಂದರು.
ಆರ್.ಧ್ರುವನಾರಾಯಣ ಚುನಾವಣಾ ಸಮಯದಲ್ಲಿ ಮಾತ್ರ ರಾಜಕಾರಣ ಮಾಡುತ್ತಿದ್ದರೇ ಹೊರತು ಉಳಿದ ಸಮಯದಲ್ಲಿ ಅಭಿವೃದ್ಧಿ, ಜನಪರ ಕಾಳಜಿ ಇದ್ದ ವ್ಯಕ್ತಿ. ಯಾವ ಪಕ್ಷವೇ ಆಗಿರಲಿ, ಯಾರೇ ಆಗಲಿ ಅವರ ಕೆಲಸ ಮಾಡಿ ಕೊಡುತ್ತಿದ್ದರು, ಎಲ್ಲರ ಜೊತೆ ಬಾಂಧವ್ಯ ಹೊಂದಿದ್ದರು, ಧ್ರುವನಾರಾಯಣ ಅವರು ಮಾಡಬೇಕೆಂದು ಕೆಲಸವನ್ನು ಅಭಿಮಾನಿಗಳು, ಜನರಾದ ನಾವು ಮಾಡೋಣ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಆರ್.ಧ್ರುವನಾರಾಯಣ ಅವರ ನಿಧನಕ್ಕೆ ಪಕ್ಷ ಬೇಧ ಮರೆತು ರಾಜ್ಯದ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications