ಕರ್ನಾಟಕದಲ್ಲಿ ಖಾತೆ ತೆರದ ಬಿಎಸ್ಪಿ, ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಗೆಲುವು
ಚಾಮರಾಜನಗರ, ಮೇ 15: ಕರ್ನಾಟಕದಲ್ಲಿ ಕೊನೆಗೂ ಆನೆ ನಡಿಗೆ ಆರಂಭವಾಗಿದೆ. ರಾಜ್ಯದಲ್ಲಿ ಖಾತೆ ತೆರೆಯುವ ಬಹುಜನ ಸಮಾಜವಾದಿ ಪಕ್ಷದ ಬಹುದಿನಗಳ ಕನಸು ಕೊನೆಗೂ ನೆರವೇರಿದ್ದು, ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್ ಮಹೇಶ್ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ರಾಜ್ಯ ಬಿಎಸ್ಪಿಯ ಅಧ್ಯಕ್ಷರಾಗಿದ್ದ ಮಹೇಶ್ ಕೊಳ್ಳೇಗಾಲದಲ್ಲಿ ಗೆಲ್ಲುವ ಫೇವರಿಟ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿ ಬಿ. ರಾಚಯ್ಯ ಪುತ್ರ ಎ.ಆರ್. ಕೃಷ್ಣಮೂರ್ತಿಯವರನ್ನು ಸೋಲಿಸಿದ್ದಾರೆ.
ಸತತ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ ಕೊಳ್ಳೇಗಾಲದಲ್ಲಿ ಸೋತಿದ್ದ ಎನ್ ಮಹೇಶ್ 2013ರಲ್ಲಿ ಕಾಂಗ್ರೆಸಿನ ಎಸ್ ಜಯಣ್ಣ ವಿರುದ್ಧ 10 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಈ ಬಾರಿ ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಗೆಲ್ಲಲೇಬೇಕೆಂಬ ಛಲದಲ್ಲಿ ಹೊರಟಿದ್ದರು. ಅದರಂತೆ ಅವರು ಇಲ್ಲಿ ಗೆಲುವು ಸಾಧಿಸಿದ್ದಾರೆ.












Click it and Unblock the Notifications