ಕೊಳ್ಳೇಗಾಲ: ಪುತ್ರನ ಜೊತೆ ಬಂದು ಮತ ಚಲಾಯಿಸಿದ ಶಾಸಕ ಎನ್‌.ಮಹೇಶ್‌

ಚಾಮರಾಜನಗರ, ಮೇ, 10: ರಾಜ್ಯ ವಿಧಾನಸಭೆ ಚುನವಾಣೆಯ ಮತದಾನ ಆರಂಭವಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಐಎಸ್‌ಸಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಸ್‌.ಮಹೇಶ್ ಮತ ಚಲಾವಣೆ ಮಾಡಿದ್ದಾರೆ.

ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮತಗಟ್ಟೆ ಸಂಖ್ಯೆ 121ರಲ್ಲಿ ಎನ್‌.ಮಹೇಶ್ ಮತದಾನ ಮಾಡಿದರು. ಈ ವೇಳೆ ಶಾಸಕ ಎನ್‌.ಮಹೇಶ್‌ ಅವರಿಗೆ ಪುತ್ರ ಅರ್ಜುನ್ ಸಾಥ್ ನೀಡಿದರು.

n mahesh

ಮತ ಚಲಾಯಿಸಿದ 74 ವರ್ಷದ ವಿಶೇಷಚೇತನ

ಹಾಗೆಯೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ವೃದ್ಧರು, ಯುವ ಮತದಾರರು ಮತದಾನ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡುತ್ತಿದ್ದಾರೆ. ಚಾಮರಾಜನಗರದ 74 ವರ್ಷದ ಮಧುಸೂಧನ್‌ ಎನ್ನುವ ಹೆಸರಿನ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್‌ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಚಾಮರಾಜನಗರದ ಹರ್ಷಿತಾ ಎಂಬ ಹೊಸ ವೋಟರ್ ಬೆಳಗ್ಗೆ 7 ಗಂಟೆಗೆ ಬಂದು ಮತದಾನ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಜಿಲ್ಲೆಯ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದ್ದು, ಮತದಾರರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.

ಮತ್ತೊಂದೆಡೆ ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದ ಮತದಾನ ಕೆಲ ಕಾಲ ಸ್ಥಗಿತವಾಗಿದೆ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣವಾಗಿದೆ. ಮತದಾನ ಅರ್ಧ ತಾಸು ತಡವಾದ್ದರಿಂದ ಮತ ಹಾಕಲು ಬಂದವರು ಅರ್ದ ಗಂಟೆ ಕಾದು ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಉಳಿದೆಡೆ ಬಿರುಸಿನ ಮತದಾನ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+