Karnataka election 2023: ಮೂಡ್ಲುಪುರ ಗ್ರಾಮದಲ್ಲಿ ಮತ ಚಲಾವಣೆ ಮಾಡಿದ ಕೆಂಡಸಂಪಿಗೆ ಚಿತ್ರದ ನಟ
ಚಾಮರಾಜನಗರ, ಮೇ,10: ರಾಜ್ಯ ವಿಧಾನಸಭೆಗೆ ಮತದಾನ ಆರಂಭವಾಗಿದ್ದು, ಕೆಂಡಸಂಪಿಗೆ ಚಿತ್ರದ ನಟ ವಿಕ್ಕಿ ವರುಣ್ ಅವರು ಚಾಮರಾಜನಗರ ತಾಲೂಕಿನ ಮೂಡ್ಲುಪುರದಲ್ಲಿ ಮತದಾನ ಮಾಡಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ವಿಕ್ಕಿ ವರುಣ್ ಅವರು ಮೂಡ್ಲುಪುರ ಗ್ರಾಮದ ಮತಗಟ್ಟೆ ಸಂಖ್ಯೆ 97ರಲ್ಲಿ ಮೊದಲ ಮತದಾನ ಮಾಡುವ ಮೂಲಕ ಮತದಾನ ಜಾಗೃತಿ ಸಾರಿದರು.

ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯಲ್ಲಿರುವ ಕದನ ಕಲಿಗಳು ಮತದಾನ ಮಾಡಲಿದ್ದಾರೆ. ಹಾಗಾದರೆ ಯಾವ ಅಭ್ಯರ್ಥಿಗಳು ಯಾವ ಕ್ಷೇತ್ರದಿಂದ ಮತದಾನ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮತ ಚಲಾವಣೆ ಮಾಡಲಿರುವ ಅಭ್ಯರ್ಥಿಗಳು
ಮತ್ತೊಂದೆಡೆ ಚಾಮರಾಜನಗರದ ವಿ.ಎಚ್.ಪಿ ಶಾಲೆಯಲ್ಲಿ ವಿ.ಸೋಮಣ್ಣ ಮತ್ತು ಪತ್ನಿ ಶೈಲಜಾ ಅವರು 8:30ಕ್ಕೆ ಮತದಾನ ಮಾಡಲಿದ್ದಾರೆ. ಮತ್ತೊಂದೆಡೆ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯಲ್ಲಿ ಮತದಾನ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಯಳಂದೂರಿನ ಉಪ್ಪಿನಮೋಳೆ ಗ್ರಾಮದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಮೋಳೆಯಲ್ಲಿ ಮಕ್ಕಳೊಟ್ಟಿಗೆ ಮತದಾನ ಮಾಡಲಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಶಾಸಕ ನಿರಂಜನ್, ಆಲಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಮತದಾನ ಮಾಡಲಿದ್ದಾರೆ.
ಕೊಳ್ಳೇಗಾಲದ 1ನೇ ವಾರ್ಡ್‌ನಲ್ಲಿ ಶಾಸಕ ಮಹೇಶ್, ಚಾಮರಾಜನಗರದ ಆಲೂರು ಗ್ರಾಮದಲ್ಲಿ ಎ.ಆರ್.ಕೃಷ್ಣಮೂರ್ತಿ, ಹನೂರಿನ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ಕಾಮಗೆರೆ ಮತ್ತು ಕಾಂಗ್ರೆಸ್ ಶಾಸಕ ನರೇಂದ್ರ ಅವರು ದೊಡ್ಡಿಂದುವಾಡಿ ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications