ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಶಿಕ್ಷಕನ ಮನೇಲಿ ಕೋಟಿ ಮೌಲ್ಯದ ಆಸ್ತಿ ಪತ್ತೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್, 22: ಭ್ರಷ್ಠಾಚಾರ ನಿಗ್ರಹ ದಳವು ನಗರದ ಶಿಕ್ಷಕನ ಮನೆ ಮೇಲೆ ಹಠಾತ್ತಾಗಿ ದಿಢೀರ್ ದಾಳಿ ನಡೆಸಿ ಆಸ್ತಿ, ಚಿನ್ನಾಭರಣ ಸೇರಿದಂತೆ ಆದಾಯಕ್ಕೂ ಮೀರಿ ಸುಮಾರು 1.09 ಕೋಟಿ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

It raid high school teacher have Rs 1.9 crore of property

ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಹಂಡ್ರಕಳ್ಳಿ ರೇಚಣ್ಣ ಎಂಬಾತನೇ ಎಸಿಬಿ ದಾಳಿಗೆ ಸಿಕ್ಕಿ ಬಿದ್ದ ಶಿಕ್ಷಕ, ಮಿತಿ ಮೀರಿದ ಆಸ್ತಿ, ಭವ್ಯವಾದ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಎಸಿಬಿ ಡಿ.ವೈಎಸ್ ಪಿ ಪ್ರಭಾಕರ್‍ ಸಿಂಧೆ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಅವರೊಂದಿಗೆ ಸಿಬ್ಬಂದಿ ಗುರುವಾರ ಬೆಳ್ಳಂಬೆಳಗ್ಗೆ ಚಾಮರಾಜನಗರ ಶಂಕರಪುರ ಬಡಾವಣೆಯಲ್ಲಿ ರೇಚಣ್ಣ ವಾಸವಿರುವ ಮನೆಯ ಮೇಲೆ ದಾಳಿ ನಡೆಸಿ ರಹಸ್ಯವಾಗಿ ಮಾಹಿತಿ ಸಂಗ್ರಹಿಸಿದರು.[ಐಟಿ ದಾಳಿ : ಟೀ ಮಾರೋನ ಬಳಿ ಸಿಕ್ಕಿದ್ದು ಬರೊಬ್ಬರಿ 400 ಕೋಟಿ!]

It raid high school teacher have Rs 1.9 crore of property

ಮೂರು ಮನೆಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಆದಾಯಕ್ಕೂ ಮೀರಿದ ಆಸ್ತಿ, ಚಿನ್ನಾಭರಣಗಳನ್ನು ಇರುವುದು ಪತ್ತೆ ಹಚ್ಚಿದ್ದು, ಸುಮಾರು 1.09 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.

It raid high school teacher have Rs 1.9 crore of property

ಇದರೊಂದಿಗೆ ಹಂಡ್ರಕಳ್ಳಿ ಗ್ರಾಮದಲ್ಲೂ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ ಇಷ್ಟು ಸಾಲದು ಎನ್ನುವಂತೆ ಆಲೂರಿನಲ್ಲಿನ ರೇಚಣ್ಣರವರ ಮಾವನ ಮನೆಯ ಮೇಲೂ ಸಹ ದಾಳಿ ನಡೆಸಿದ್ದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

English summary
The IT department have raided the chamaraj nagar high school teacher rechanna have Rs 1.9 crore in cash, bullion, jewellery and property papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X