India
  • search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರಕ್ಕೆ ರಾಯಭಾರಿಯಾಗಲು ಸಿದ್ಧ: ಶಿವರಾಜ್ ಕುಮಾರ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ: ಬೈರಾಗಿ ಚಿತ್ರದ ಪ್ರಮೋಷನ್ ಗಾಗಿ ಮಂಗಳೂರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಮರಾಜನಗರ ಮತ್ತು‌ ಕೊಳ್ಳೇಗಾಲ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟರು. ಮೊದಲಿಗೆ ಕೊಳ್ಳೇಗಾಲದ ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್‌ ಹೀರೋರನ್ನು ಶಾಸಕ ಎನ್.ಮಹೇಶ್ ಬರಮಾಡಿಕೊಂಡರು.

ಶಿವರಾಜ್ ಕುಮಾರ್ ಜೊತೆ ಕಾಫಿ ಸೇವಿಸಿ ಪುನೀತ್ ಪುತ್ತಳಿ ನಿರ್ಮಾಣ ಬಗ್ಗೆ ಚರ್ಚಿಸಿದ ಶಾಸಕ ಮಹೇಶ್ ಭರಚುಕ್ಕಿ ಜಲಪಾತದಲ್ಲಿ ಪುನೀತ್ ಪುತ್ಥಳಿ ಮುಂದಾಗಿರುವುದಾಗಿ ಶಾಸಕರು ತಿಳಿಸಿದ್ದಕ್ಕೇ ಹ್ಯಾಟ್ರಿಕ್ ಹೀರೋ ಶಿವಣ್ಣ ಸಂತಸ ವ್ಯಕ್ತಪಡಿಸಿದರು.

ಅಪ್ಪು-ಅಪ್ಪು ಎಂದು ಕೂಗುತ್ತಿದ್ದ ಯುವಕನಿಗೆ ಶಿವಣ್ಣನಿಂದ ಬುದ್ದಿಮಾತುಅಪ್ಪು-ಅಪ್ಪು ಎಂದು ಕೂಗುತ್ತಿದ್ದ ಯುವಕನಿಗೆ ಶಿವಣ್ಣನಿಂದ ಬುದ್ದಿಮಾತು

ಶಿವರಾಜ್ ಕುಮಾರ್ ಕಾಣಲು ನೂರಾರು ಅಭಿಮಾನಿಗಳು ಸೇರಿ ಅಪ್ಪು... ಅಪ್ಪು ಎಂದು ಘೋಷಣೆ ಕೂಗಿದರು. ಈ ವೇಳೆ ಹಾಡು ಹೇಳಿ ರಂಜಿಸಿದ ಶಿವರಾಜ್ ಕುಮಾರ್ ' ಪುನೀತ್ ನನ್ನ‌ ರಕ್ತ ಹಂಚಿಕೊಂಡು ಹುಟ್ಟಿರುವ ತಮ್ಮ, ಆತನಿಗೆ ನಾನು ಕೊಡುವಷ್ಟು ಗೌರವ, ಪ್ರೀತಿ ಇನ್ಯಾರು ಕೊಡಲ್ಲ ಎಂದರು. ಇನ್ನು ಶಿವಣ್ಣ ಬರುತ್ತಿದ್ದಂತೆ ಅಭಿಮಾನಿ ಸಾಗರವೇ ಹರಿದು ಬಂದಿದ್ದರಿಂದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಅನಿವಾರ್ಯವಾಗಿ ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಿದರು.

 ಜಿಲ್ಲೆಯ ರಾಯಭಾರಿಯಾಗಲು ಸಿದ್ಧ

ಜಿಲ್ಲೆಯ ರಾಯಭಾರಿಯಾಗಲು ಸಿದ್ಧ

ಕೊಳ್ಳೇಗಾಲದ ಬಳಿಕ ಚಾಮರಾಜನಗರಕ್ಕೆ ಬಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ, "ಚಿತ್ರಕ್ಕೆ ಪ್ರೋತ್ಸಾಹ, ಉತ್ತಮ ವಿಮರ್ಶೆ ಬರುತ್ತಿದೆ. ಜನರು ಈ ಮಟ್ಟಿಗೆ ಬೆಂಬಲ, ಪ್ರೋತ್ಸಾಹ ನೀಡಿದರೆ ಮತ್ತಷ್ಟು ವಿಭಿನ್ನ ಚಿತ್ರಗಳನ್ನು ಮಾಡಲು ಪ್ರೇರಣೆ ಸಿಕ್ಕಂತಾಗಲಿದೆ, ಒಳ್ಳೆಯ ಸಂದೇಶ, ಮನರಂಜನೆ ಇರುವ ಚಿತ್ರ ಬೈರಾಗಿಯಾಗಿದೆ," ಎಂದರು. ಈ ವೇಳೆ ಚಾಮರಾಜನಗರ ರಾಯಭಾರಿ ಆಗುವ ಅವಕಾಶ ಬಂದರೇ ಒಪ್ಪಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ಚಾಮರಾಜನಗರ ನಮ್ಮ ಊರು, ರಾಯಭಾರಿಯಾಗುವ ಭಾಗ್ಯ ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಎಂದು ಘೋಷಿಸಿದರು.

ತಂದೆಗಾಗಿ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯತಂದೆಗಾಗಿ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

 ಅಭಿಮಾನಿ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ

ಅಭಿಮಾನಿ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ

ಕಳೆದ ಐದು ವರ್ಷದಿಂದ ತಾನು ಮಾಡುವ ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಬೇಕೆಂಬ ಆಸೆ ಕೊನೆಗೂ ಈಡೇರಿದ ಘಟನೆ ಚಾಮರಾಜನಗರದಲ್ಲಿ ನಡೆಯಿತು‌.
ಚಿತ್ರದ ಪ್ರಮೋಷನ್‌ಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಂದಿದ್ದ ವೇಳೆ ನಗರದ ಅಪ್ಪಟ್ಟ ಅಭಿಮಾನಿ ಮಂಜು ಅವರ ಟೀ ಅಂಗಡಿಗೆ ಬಂದು ಚಹಾ ಕುಡಿದು ಅಭಿಮಾನಕ್ಕೆ ಚಹಾದ ಸ್ವಾದಕ್ಕೆ ಮನಸೋತರು.

ಟೀ ಅಂಗಡಿಯ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದು 2016 ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಕಾರ್ಯಾಕ್ರಮದ ಭರಾಟೆ ನಡುವೆ ಭೇಟಿ ಕೊಡಲಾಗಿರಲಿಲ್ಲ. ಪ್ರೀ ರಿಲೀಸ್ ಈವೆಂಟ್ ಸಮಯದಲ್ಲೂ ಅಭಿಮಾನಿ ಆಸೆ ಈಡೇರಿರಲ್ಲ, ಆದ್ದರಿಂದ ಇಂದು ಅಭಿಮಾನಿ ಟೀ ಅಂಗಡಿಗೆ ಭೇಟಿಕೊಟ್ಟು ಚಹಾ ಸೇವಿಸಿದ್ದಾರೆ‌.

 ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಶಿವಣ್ಣ

ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಶಿವಣ್ಣ

ನಗರದ ಶ್ರೀಭ್ರಮರಾಂಬ ಚಿತ್ರಮಂದಿರದಲ್ಲಿ ಬೈರಾಗಿ ಚಿತ್ರದ ನಾಯಕ ನಟ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳೊಂದಿಗೆ ಬೈರಾಗಿ ಚಿತ್ರ ವೀಕ್ಷಿಸಿದರು. ಬೈರಾಗಿ ಚಿತ್ರದ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಿತ್ರ ಪ್ರದರ್ಶನ ಯಾತ್ರೆ ನಗರದ ಭ್ರಮರಾಂಬ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಚಿತ್ರ ಮಂದಿರದ ಮಾಲೀಕರು, ಅಭಿಮಾನಿಗಳು ಉದ್ದನೆಯ ಸರಪಟಾಕಿ ಸಿಡಿಸಿ, ಶಿವಣ್ಣಗೆ ಜೈಕಾರ ಹಾಕಿ, ಪುಷ್ಷವೃಷ್ಟಿ ಸುರಿಸುವ ಮೂಲಕ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡರು.
ಅಭಿಮಾನಿಗಳು, ಪೇಕ್ಷಕರೊಂದಿಗೆ ಬೈರಾಗಿ ಚಿತ್ರವನ್ನು ಭ್ರಮರಾಂಭ ಚಿತ್ರದ ವಿಐಪಿ ಬಾಲ್ಕನಿಯಲ್ಲಿ ಶಿವಣ್ಣ 20 ನಿಮಿಷಗಳ ಕಾಲ ವೀಕ್ಷಿಸಿ ಖುಷಿಪಟ್ಟರು. ಚಿತ್ರದ ನಿರ್ಮಾಪಕ ಕೃಷ್ಣ ಸಾಥ್ ಶಿವಣ್ಣನಿಗೆ ಸಾಥ್ ನೀಡಿದರು.

 ಹರ್ಷ ವ್ಯಕ್ತಪಡಿಸಿದ ಚಿತ್ರಮಂದಿರ ಮಾಲೀಕ

ಹರ್ಷ ವ್ಯಕ್ತಪಡಿಸಿದ ಚಿತ್ರಮಂದಿರ ಮಾಲೀಕ

ಚಿತ್ರಮಂದಿರದ ಮಾಲೀಕರಾದ ರೇವಂತ್ ಮಾತನಾಡಿ, ಶಿವಣ್ಣ ಹಾಗೂ ಅವರ ಕುಟುಂಬದವರು ಕನ್ನಡ ಚಿತ್ರರಂಗಕ್ಕೆ ಅಭೂತ ಪುರ್ವ ಕೊಡುಗೆ ನೀಡಿದ್ದಾರೆ. ಶಿವಣ್ಣ ಅವರು ನಮ್ಮ ಕರೆಗೆ ಓಗೊಟ್ಟು ನಮ್ಮ ಚಿತ್ರಮಂದಿರಕ್ಕೆ ಪ್ರೀತಿ ಬಂದಿದ್ದಾರೆ. ಇದು ತುಂಬಾ ಖುಷಿ ಆಗುತ್ತಿದೆ. ಈ ಚಿತ್ರ ಶತಮನೋತ್ಸವ ಆಚರಿಸಲಿ ಎಂದು ಆಶಿಸಿದರು.

English summary
shiva Rajkumar visit to Chamarajanagar for promotion his Bairagi movie. He watched movie with producer and fans. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X