ಚಾಮರಾಜನಗರ; ಕುಡಿದ ಮತ್ತಿನಲ್ಲಿ ಸೌದೆಯಿಂದ ಹೊಡೆದು ಹೆಂಡತಿ ಕೊಂದ ಪತಿ
ಚಾಮರಾಜನಗರ, ಜನವರಿ 26: ಕುಡುಕನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಸೌದೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಕಹಳ್ಳಿ ಗ್ರಾಮದ ನಿವಾಸಿ ಶಶಿಕಲಾ (38) ಎಂಬಾಕೆಯೇ ಪತಿ ಸುರೇಶನಿಂದ ಹತ್ಯೆಗೀಡಾದವರು. ಸುರೇಶ ಕುಡುಕನಾಗಿದ್ದು, ಪ್ರತಿದಿನವೂ ಕುಡಿದು ಬಂದು ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದನು.

ನಿನ್ನೆ ಬೆಳಿಗ್ಗೆ ಕೂಡ ಹೆಂಡ ಕುಡಿದು ಮನೆಗೆ ಬಂದ ಈತ ಹೆಂಡತಿಯೊಂದಿಗೆ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋಗಿದ್ದು, ಸುರೇಶ ಪತ್ನಿಯ ತಲೆಗೆ ಸೌದೆಯಿಂದ ಹೊಡೆದಿದ್ದಾನೆ. ಕುಸಿದು ಬಿದ್ದ ಶಶಿಕಲಾ ರಕ್ತಸ್ರಾವದಿಂದ ಒದ್ದಾಡಲು ಆರಂಭಿಸಿದ್ದಾರೆ. ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪತಿ ಸುರೇಶನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications