Heavy Rain: ಚಾಮರಾಜನಗರದಲ್ಲಿ ವರುಣಾರ್ಭಟ: ರಸ್ತೆಗಳಲ್ಲಿ ತುಂಬಿ ಹರಿದ ನೀರು, ಜನ ಜೀವನ ಅಸ್ತವ್ಯಸ್ತ
ವಾಯುಭಾರ ಕುಸಿತದಿಂದ ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಶುಕ್ರವಾರ ಸಂಜೆ ಒಂದು ಗಂಟೆಗೂ ಹೆಚ್ಚ ಕಾಲ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಬಿರುಗಾಳಿ,ಗುಡುಗಿನ ಆರ್ಭಟದೊಟ್ಟಿಗೆ ಮಳೆ ಆರಂಭವಾಗಿ ಎಡಬಿಡದೇ ಜೋರು ಮಳೆಯಾಗಿದೆ. ಚಾಮರಾಜನಗರದ ಎಲ್ಲಾ ರಸ್ತೆಗಳಲ್ಲೂ ಹೊಳೆಯಂತೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು.

ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಮರ ತೆರವು ಕಾರ್ಯಾಚರಣೆ ಮುಗಿಯುವ ತನಕವೂ ಸರಕು ತುಂಬಿದ ಲಾರಿ ಮತ್ತು ಸಾರಿಗೆ ಬಸ್ ಗಳು ಸಂಚರಿಸಲು ಪ್ರಯಾಸ ಪಡಬೇಕಾಯಿತು.
ಭಾರಿ ಮಳೆಗೆ ಕುಸಿದ ಮನೆ
ನಿರಂತರ ಮಳೆಗೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಲಕ್ಷ್ಮೀ ಎಂಬುವರ ಮನೆ ಕುಸಿದಿದೆ. ಸದ್ಯ, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications