ಮುಂದುವರೆದ ಭಾರೀ ಮಳೆ: ಚಾಮರಾಜನಗರ ಜಿಲ್ಲೆಯಲ್ಲಿ ಕೋಡಿ ಬಿದ್ದ ಕೆರೆಗಳು: ಜನರಲ್ಲಿ ಢವ.. ಢವ..

ಚಾಮರಾಜನಗರ, ಅಕ್ಟೋಬರ್‌, 16: ರಾಜ್ಯದಲ್ಲಿ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಎಡಬಿಡದೇ ಮಳೆಯಾಗುತ್ತಿರುವ ಹಿನ್ನೆಲೆ ಕೆರೆಗಳು ತುಂಬಿ ಹರಿದು ಜನ-ಜೀವನ ಅಸ್ತವ್ಯಸ್ತವಾಗಿದೆ.

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಳೆ ಆರ್ಭಟಕ್ಕೆ ಕೆರೆ ತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ಇನ್ನು ಭಾರೀ ಮಳೆಯಿಂದ ಕೆರೆ ನೀರಿನ ಪ್ರಮಾಣ ಹೆಚ್ಚುತ್ತಲ್ಲೇ ಇದೆ. ಪರಿಣಾಮ ಕೋಡಿ ಸರಿಯಿಲ್ಲದ ಕಾರಣ ಏರಿ‌ ಮೇಲೆ ನೀರು ಹರಿಯುತ್ತಿದ್ದು, ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

Heavy Rain Chamarajanagar District s these Lakes full Fill

ಕೆರೆಗಳು ಒಡೆದರೇ ರೈತರು ಬೆಳೆದ ನೂರಾರು ಹೆಕ್ಟೇರ್‌ ಫಸಲು ನಾಶವಾಗುವ ಭೀತಿ ಎದುರಾಗಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಬೇಕೆಂದು ಗ್ರಾಮದ ವೆಂಕಟೇಶ್ ಸೇರಿ ಹಲವರು ಒತ್ತಾಯಿಸಿದ್ದಾರೆ.

ಎರಡನೇ ಬಾರಿ ಕೋಡಿ ಬಿದ್ದ ಕೆರೆಗಳು: ಕೆಲವು ತಿಂಗಳ ಹಿಂದೆಯಷ್ಟೇ ಮುಂಗಾರು ಆರ್ಭಟಕ್ಕೆ ಕೋಡಿ ಬಿದ್ದಿದ್ದ ಕೆರೆಗಳು ಈಗ ಎರಡನೇ ಬಾರಿ ಭರ್ತಿಯಾಗಿ ಕೋಡಿ ಬಿದ್ದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು.

ಕಮರಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್ ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ. ಇನ್ನು, ಕೂತನೂರು ಕೆರೆಯೂ ಕೂಡ ಎರಡನೇ ಬಾರಿ ಕೋಡಿ ಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜಡಿ ಮಳೆಗೆ ಎರಡು ಮನೆ ಗೋಡೆ ಕುಸಿತ: ಚಾಮರಾಜನಗರ ಜಿಲ್ಲೆಯ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ದೈನಂದಿನ ಜನ ಜೀವನ ಅಸ್ತವ್ಯಸ್ತವಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಗೆ ಎರಡು ಮನೆಗಳ ಗೋಡೆ ಕುಸಿತ ಕಂಡಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಚಾಮರಾಜನಗರ ತಾಲೂಕಿನ ತೆಳ್ಳನೂರು, ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ಗ್ರಾಮಗಳಲ್ಲಿ ಮನೆ ಗೋಡೆ ಕುಸಿತವಾಗಿದೆ.

ತೆಳ್ಳನೂರು ಗ್ರಾಮದ ಸುಬ್ಬಮ್ಮ, ಬೇಗೂರಿನ ರತ್ಮಮ್ಮ ಎಂಬುವರ ಮನೆ ಗೋಡೆ ಮಳೆಯಿಂದ ನೆಲಕ್ಕುರುಳಿದೆ. ಇನ್ನು ಮನೆ ಗೋಡೆ ಕುಸಿದು ಮನೆಮಂದಿ ಕಂಗಲಾಗಿದ್ದು, ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಎರಡನೇ ಬಾರಿ ಬಿದ್ದ ಕೆರೆ ಕೋಡಿ: ಮುಂಗಾರು ಆರ್ಭಟಕ್ಕೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಕೋಡಿ ಬಿದ್ದಿದ್ದ ಕಮರಹಳ್ಳಿ‌ ಕೆರೆ ಈಗ ಮತ್ತೊಮ್ಮೆ ಕೋಡಿ ಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ‌.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು. ಕಮರಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್ ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+