Wayanad landslide: ವಯನಾಡಿನ ಗುಡ್ಡಕುಸಿತ ಸ್ಥಳಕ್ಕೆ ಗುಂಡ್ಲುಪೇಟೆ ಶಾಸಕ ಭೇಟಿ
ಚಾಮರಾಜನಗರ, ಆಗಸ್ಟ್, 08: ಕೇರಳದ ವಯನಾಡಿನ ಗುಡ್ಡಕುಸಿತ ಸ್ಥಳಕ್ಕೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಭೇಟಿ ನೀಡಿ, ಪರಿಶೀಲನೆ ನಡೆಸುವ ಜೊತೆಗೆ ಸಂತ್ರಸ್ಥ ಕನ್ನಡಿಗರಿಂದ ಮಾಹಿತಿ ಪಡೆದರು.
ವಯನಾಡಿನ ಮುಂಡಕ್ಕೈ, ಚುರಾಲ್ ಮಲೆ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ನೈಜತೆ ಅರಿಯುವ ಜೊತೆಗೆ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಗುಡ್ಡ ಕುಸಿತದಲ್ಲಿ ನಿರಾಶ್ರಿತರಾಗಿರುವ ಚಾಮರಾಜನಗರ ಜಿಲ್ಲೆಯ ಕೆಲ ಮಂದಿಯನ್ನು ಭೇಟಿ ಮಾಡಿ ವೈಯಕ್ತಿಕ ನೆರವಿನ ಚೆಕ್, ವಿವಿಧ ಪರಿಕರಗಳನ್ನು ನೀಡುವ ಜೊತೆಗೆ ಸಾಂತ್ವನ ಹೇಳಿದರು.

ಸಮಸ್ಯೆ ಇದ್ದರೇ ದೂರವಾಣಿ ಮೂಲಕ ತಿಳಿಸಿ, ಕರ್ನಾಟಕ ಸರ್ಕಾರ ಕನ್ನಡಿಗರ ರಕ್ಷಣೆಗೆ ಇರಲಿದ್ದು 100 ಮನೆಗಳನ್ನು ನಿರ್ಮಿಸಿ ಕೊಡಲಿದೆ. ನಿಮ್ಮ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡತಿ ಮೇಘಶ್ರೀ ಕಾರ್ಯಕ್ಕೆ ಭಾರೀ ಮೆಚ್ಚುಗೆ: ದೇವರ ನಾಡು ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ರಾಜ್ಯದ ಬಹುತೇಕ ಮಂದಿ ಅಸುನೀಗಿದ ಘಟನೆ ನಡೆದಿದೆ. ಹಾಗೆಯೇ ಪರಿಹಾರ ಕಾರ್ಯವು ಕೂಡ ನಡೆಯುತ್ತಿದ್ದು, ಇನ್ನು ಈ ಭೀಕರ ಭೂ ಕುಸಿತ ದುರಂತದ ಪರಿಹಾರ ಕಾರ್ಯದಲ್ಲಿ ತೊಡಗಿದವರಲ್ಲಿ ವಯನಾಡಿನ ಜಿಲ್ಲಾಧಿಕಾರಿ ಮೇಘಶ್ರೀಯವರೂ ಒಬ್ಬರು.
ಹಗಲು ಇರುಳೆನ್ನದೆ, ಪರಿಹಾರ ಕಾರ್ಯದಲ್ಲಿ ತೊಡಗಿರುವ ಜಿಲ್ಲಾಧಿಕಾರಿ ಮೇಘಶ್ರೀಯವರು ಕನ್ನಡಿಗರು ಮತ್ತು ಚಿತ್ರದುರ್ಗ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.
ಸರಣಿ ಭೂಕುಸಿತ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ನೂರಾರು ಮಂದಿ ಮಣ್ಣಿನಡಿ ಸಿಲುಕಿ ಪ್ರಾಣ ಬಿಟ್ಟಂತಹ ದುರ್ಘಟನೆ ನಡೆದಿದೆ. ಇನ್ನು ಮಣ್ಣಿನಲ್ಲಿ ಸಿಲುಕಿದ ಹಲವು ಜನರ ರಕ್ಷಣಾ ಕಾರ್ಯಾಚರಣೆಗೆಂದು ಘಟನೆ ನಡೆದ ನಡು ರಾತ್ರಿಯಲ್ಲಿಯೇ ಜಿಲ್ಲಾಧಿಕಾರಿ ಮೇಘಶ್ರೀ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿರುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಎಸ್‌ಬಿಐ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ರುದ್ರಮುನಿ ಮತ್ತು ದಿ.ರುಕ್ಮಿಣಿದೇವಿಯವರ ಪುತ್ರಿಯಾದ ಮೇಘಶ್ರೀಯವರು ಇಂಜಿನಿಯರಿಂಗ್ ಪಧವೀಧರೆ. ಆರಂಭದ ವಿದ್ಯಾಭ್ಯಾಸವನ್ನು ದೊಡ್ಡೇರಿ, ಚಳ್ಳಕೆರೆ, ಚಿತ್ರದುರ್ಗದಲ್ಲಿ ಮುಗಿಸಿ, ಉನ್ನತ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಮುಗಿಸುತ್ತಾರೆ. ನಂತರ ಒಂದೆರಡು ವರ್ಷ ಖಾಸಗಿ ಉದ್ಯೋಗ ಮಾಡಿ ನಂತರ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.
ಪ್ರಾರಂಭದಲ್ಲಿ ತಿರುವನಂತಪುರ ಮುಂತಾದ ಕಡೆ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ ಈಗ್ಗೆ 20 ದಿನಗಳ ಹಿಂದೆ ವಯನಾಡಿಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗುತ್ತಾರೆ. ಸೇವೆಗೆ ಹಾಜರಾದ ಆರಂಭದಲ್ಲೇ ದೊಡ್ಡ ದುರ್ಘಟನೆಯ ಪರಿಹಾರ ಕಾರ್ಯದ ಜವಾಬ್ದಾರಿ ಹೊತ್ತಿರುವ ಮೇಘಶ್ರೀಯವರು ಪ್ರತಿ ನಿಮಿಷವನ್ನು ಭೂ ಕುಸಿತದಡಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಈಗಾಗಲೇ ಭೂ ಕುಸಿತಕ್ಕೆ ಬಲಿಯಾದ ದುರ್ದೈವಿಗಳ ಸಾಮೂಹಿಕ ಅಂತ್ಯ ಸಂಸ್ಕಾರದಲ್ಲೂ ನಿಂತು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಮೇಘಶ್ರೀಯವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸೊಸೆ ಎಂಬುದು ಮತ್ತೊಂದು ವಿಶೇಷತೆಯಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಚೀಫ್ ಸೂಪರಿಂಟೆಡೆಂಟ್ ಆಗಿ ನಿವೃತ್ತರಾಗಿರುವ ತಾಲೂಕಿನ ಹರ್ತಿಕೋಟೆ ಗ್ರಾಮದ ವೀರೇಂದ್ರ ಸಿಂಹರ ಮಗ ಡಾ.ವಿಕ್ರಮಸಿಂಹರ ಪತ್ನಿ ಆಗಿದ್ದಾರೆ. ಇವರಿಗೆ ಧೃತಿ ಮತ್ತು ವಿಸ್ಮಯ ಎಂಬ ಇಬ್ಬರು ಮಕ್ಕಳಿದ್ದಾರೆ.
ಘಟನೆಯ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಮೇಘಶ್ರೀಯವರು ಜುಲೈ 10ರಂದು ವಯನಾಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯ, ಶವಗಳ ಗುರುತು ಪತ್ತೆ, ಸತ್ತವರ ಅಂತ್ಯ ಸಂಸ್ಕಾರ, ಉಳಿದವರಿಗೆ ಪುನರ್ವಸತಿಯಂತಹ ಹತ್ತಾರು ಕಾರ್ಯಗಳಲ್ಲಿ ತೊಡಗಿರುವ ಡಿಸಿ ಮೇಘಶ್ರೀಯವರಿಗೆ ಅಭಿನಂದನೆಗಳ ಸರಮಾಲೆಯೇ ಹರಿದುಬರುತ್ತಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications