ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ!

ಚಾಮರಾಜನಗರ, ಜನವರಿ 07: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದೆಡೆ ಬೆಟ್ಟಿಂಗ್ ನಡೆದಿದ್ದರೆ ಮತ್ತೊಂದೆಡೆ ಸ್ವತಃ ಅಭ್ಯರ್ಥಿಗಳೇ ದೇವರಿಗೆ ಹರಕೆ ಹೊತ್ತಿದ್ದರು. ಇದೀಗ ಹರಕೆ ಹೊತ್ತಿದ್ದ ಅಭ್ಯರ್ಥಿಯೊಬ್ಬರು ಹರಕೆ ತೀರಿಸಲು 160 ಕಿ. ಮೀ. ಪಾದಯಾತ್ರೆ ಹೊರಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್‍ನಿಂದ ಸ್ಪರ್ಧಿಸಿ ಗೆಲುವು ಪಡೆದ ಸೆಲ್ವಂ ಎಂಬುವರೇ ಹರಕೆ ತೀರಿಸಲು ಮೈಸೂರು ಜಿಲ್ಲೆಯ ಕೆ. ಆರ್. ನಗರದಲ್ಲಿರುವ ಡೋರನಹಳ್ಳಿಯ ಸಂತ ಆಂತೋಣಿ ಚರ್ಚ್‍ಗೆ ಪಾದಯಾತ್ರೆ ಹೊರಟಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನಾನು ಗೆದ್ದರೆ ಡೋರನಹಳ್ಳಿಯ ಅಂತೋಣಿ ಚರ್ಚ್‍ಗೆ ಪಾದಯಾತ್ರೆಯಲ್ಲಿ ತೆರಳಿ ಹರಕೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದರು. ಅವರು ಈಗ ಚುನಾವಣೆಯಲ್ಲಿ ಗೆಲುವು ಪಡೆದ ಹಿನ್ನಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ.

 Gram Panchayat Election Candidate Padayatra To Church

ಸೆಲ್ವಂ ಅವರು ತಾವು ಸ್ಪರ್ಧಿಸಿದ್ದ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್‍ನಿಂದಲೇ ಸಂತ ಆಂತೋಣಿಯವರಿಗೆ ಹರಕೆ ತೀರಿಸಲು ಸುಮಾರು 160 ಕಿ. ಲೋ. ಮೀಟರ್ ದೂರಲ್ಲಿರುವ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಡೋರನಹಳ್ಳಿಗೆ ಸಂತಸದಿಂದಲೇ ಪಾದಯಾತ್ರೆ ಮಾಡುತ್ತಿದ್ದಾರೆ.

ಸಂತ ಆಂತೋಣಿಯವರು ನಂಬಿದ ಭಕ್ತರಿಗೆ ಕೈ ಬಿಡುವುದಿಲ್ಲ ಎನ್ನುವುದಕ್ಕೆ ತಾನು ಗೆಲುವು ಸಾಧಿಸಿರೋದೆ ಸಾಕ್ಷಿ ಎಂದು ಸೆಲ್ವಂ ಹೇಳಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+