ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿ-ಯಾವೆಲ್ಲ ಪ್ರಾಣಿಗಳನ್ನ ಕಣ್ತುಂಬಿಕೊಂಡ್ರು.?
ಚಾಮರಾಜನಗರ, ಆಗಸ್ಟ್, 28: ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಾಜಿ ಖ್ಯಾತ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದರು. ಇನ್ನೂ ಈ ವೇಳೆ ಯಾವೆಲ್ಲ ಸುಂದರ ದೃಶ್ಯಗಳನ್ನು ವೀಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬುಧವಾರ (ಆಗಸ್ಟ್ 28) ಸಂಜೆ ಸಫಾರಿ ನಡೆಸಿರುವ ಕುಂಬ್ಳೆ ಬಂಡೀಪುರದ ಸತ್ಯದ್ಭುತ ಕಾನನವನ್ನು ಕಣ್ತುಂಬಿಕಿಕೊಂಡಿದ್ದಾರೆ. ಇನ್ನು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅನಿಲ್ ಕುಂಬ್ಳೆ ಭೇಟಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಅನಿಲ್ ಕುಂಬ್ಳೆ ಹಾಗೂ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಕುಟುಂಬ, ಸ್ನೇಹಿತರ ಜೊತೆ ಸಫಾರಿ ನಡೆಸಿದ್ದು, ಈ ವೇಳೆ ಹುಲಿ, ಕಾಡೆಮ್ಮೆ, ಆನೆ, ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಕಣ್ತುಂಬಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
'ಕಾನು' ಗ್ರಂಥಾಲಯ ಆರಂಭ: ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆದಿವಾಸಿಗಳ ಅಧ್ಯಯನ ಮಾಡಲು ಎದುರಾಗುವ ವಿಷಯ ವಸ್ತು ಕೊರತೆ ನೀಗಿಸಲು, ಆದಿವಾಸಿಗಳಲ್ಲಿ ಸಂಶೋಧನಾತ್ಮಕ ಲೇಖನ ಬರೆಯುವ ಸಂಸ್ಕೃತಿ ಹುಟ್ಟುಹಾಕಲು ಬಿಳಿಗಿರಿರಂಗನ ಬೆಟ್ಟದಲ್ಲಿ 'ಕಾನು' ಎಂಬ ಗ್ರಂಥಾಲಯವನ್ನು ಆರಂಭ ಮಾಡಲಾಗಿದೆ. ಹಾಗಾದರೆ ಇಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂದು ಇಲ್ಲಿ ತಿಳಿಯಿರಿ.
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಮಾರಿಗುಡಿ ಪಕ್ಕದ ಆದಿವಾಸಿ ಆರೋಗ್ಯ ಸಂಪನ್ಮೂಲ ಕೇಂದ್ರದ ಆವರಣದಲ್ಲಿ 'ಕಾನು' ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಆದಿವಾಸಿ ಸಮುದಾಯದ ಸಮಾನ ಮನಸ್ಕರು ಒಗ್ಗೂಡಿ ದಕ್ಷಿಣ ಭಾರತದ ಆದಿವಾಸಿ ಜ್ಞಾನ ಕೇಂದ್ರದ ಮೂಲಕ ಈ ಗ್ರಂಥಾಲಯವನ್ನು ಸ್ಥಾಪನೆ ಮಾಡಿದ್ದು, ಇಂದು ಇದು ಸ್ಥಳೀಯ ಆದಿವಾಸಿಗಳಿಂದ ಉದ್ಘಾಟನೆಯಾಗಿದೆ.
ಆದಿವಾಸಿಗಳು ಸಮಾಜದ ಪ್ರಾಚೀನ ಸಮುದಾಯ ಆಗಿದ್ದರೂ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಸಮಾಜದ ಕಟ್ಟಕಡೆಯ ಜನಾಂಗವಾಗಿ ಉಳಿದುಬಿಟ್ಟಿದ್ದಾರೆ. ಇವರ ಜೀವನ, ಸಂಸ್ಕೃತಿ, ಆಚಾರ, ವಿಚಾರಗಳು ವಿಭಿನ್ನವಾಗಿವೆ. ಅಧ್ಯಯನಕ್ಕೆ ಆಸಕ್ತಿದಾಯಕ ಆಗಿರುವ ಆದಿವಾಸಿಗಳ ಕುರಿತು ಸಂಶೋಧಕರಿಗೆ ರಾಜ್ಯದಲ್ಲಿ ಎಲ್ಲೂ ಸಹ ಒಂದೇ ಕಡೆ ವಿಷಯ ವಸ್ತುಗಳು ಸಿಗುವುದಿಲ್ಲ.
ದಕ್ಷಿಣ ಭಾರತದಲ್ಲಿ ಆದಿವಾಸಿಗಳ ಕುರಿತು ಅಧ್ಯಯನ ನಡೆದಿರುವುದು ಮತ್ತು ಆದಿವಾಸಿಗಳಲ್ಲಿರುವ ಬೆರಳೆಣಿಕೆಯಷ್ಟು ಬರಹಗಾರರನ್ನು ಪ್ರೋತ್ಸಾಹಿಸಿ ಲೇಖನಗಳನ್ನು ಬರೆಸಿರುವುದೂ ಕಡಿಮೆ. ಈ ಕೊರಗನ್ನು ನೀಗಿಸಲು ಮತ್ತು ಆದಿವಾಸಿಗಳಲ್ಲಿ ಅಕ್ಷರ ಸಂಸ್ಕೃತಿಯನ್ನು ಉತ್ತೇಜಿಸಲು ಬಿಳಿಗಿರಿರಂಗನಬೆಟ್ಟದಲ್ಲಿ ಕಾನು ಗ್ರಂಥಾಲಯವನ್ನು ಸ್ಥಾಪನೆ ಮಾಡಲಾಗಿದೆ.
1,200ಕ್ಕೂ ಹೆಚ್ಚು ಪುಸ್ತಕಗಳ ಲಭ್ಯ: ಕಾನು ಹೆಸರಿನ ಗ್ರಂಥಾಲಯದಲ್ಲಿ ದಕ್ಷಿಣ ಭಾರತದ ಆದಿವಾಸಿಗಳ ಕುರಿತು ಅಧ್ಯಯನ ಮಾಡುವವರಿಗೆ ಸಂಶೋಧನಾತ್ಮಕ ಲೇಖನಗಳು, ಪುಸ್ತಕಗಳು ಸಿಗಲಿವೆ. ಶಿಕ್ಷಣ, ಆರೋಗ್ಯ, ಅರಣ್ಯ, ಅರಣ್ಯ ಕಾಯ್ದೆ, ಜೀವನ ನಿರ್ವಹಣೆ, ಸಂಸ್ಕೃತಿ, ಭಾಷೆ ಇನ್ನಿತರೆ ವಿಷಯಗಳ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.












Click it and Unblock the Notifications