ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಚಾಮರಾಜನಗರ, ಆಗಸ್ಟ್ 16: ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ಬಳಿಯ ಜಮೀನೊಂದರಲ್ಲಿ ನಡೆದಿದೆ.

ಗುಂಡ್ಲುಪೇಟೆ ನಗರದ ಸೆಂಟ್ ಜಾನ್ಸ್ ಸ್ಕೂಲ್ ಬಳಿಯ ಜಮೀನೊಂದರಲ್ಲಿ ಇಂದು ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಮೃತರು ಓಂಕಾರ್ (38), ಪತ್ನಿ ನಿಖಿತಾ (28), ಪುತ್ರ ಆರ್ಯ ( 5), ಭಟ್ಟಾಚಾರ್ಯ (70), ಹೇಮಾ ( 55 ) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದಟ್ಟಗಹಳ್ಳಿಯ ನಿವಾಸಿಗಳಾಗಿದ್ದು ಮೇಲ್ನೋಟಕ್ಕೆ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ಮೈಸೂರಿನಿಂದ ಬಂದ ಕುಟುಂಬ ಗುಂಡ್ಲುಪೇಟೆಯ ನಂದಿ ಲಾಡ್ಜ್ ನಲ್ಲಿ ಓಂ ಪ್ರಕಾಶ್ ಎಂಬುವರ ಹೆಸರಲ್ಲಿ ರೂಂ ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು. ಬೆಳಗಿನ ಜಾವ ಐವರು ಗುಂಡ್ಲುಪೇಟೆ ಹೊರವಲಯಕ್ಕೆ ಬಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Five Members Of Family Committed Suicide By Shooting Themselves In Gundlupete

ಮೃತರ ಕುಟುಂಬಸ್ಥರು ಕೆಲ ವರ್ಷಗಳ ಹಿಂದೆ ಡಾಟಾಬೇಸ್ ಕಂಪನಿ ನಡೆಸುತ್ತಿದ್ದರು. ಕಳೆದೆರೆಡು ವರ್ಷಗಳಿಂದ ಹಣಕಾಸಿನ ಸಮಸ್ಯೆಗೆ ಸಿಲುಕಿ ಕಂಪನಿ ಮುಚ್ಚಿದ್ದಾರೆ. ಎರಡು ವರ್ಷಗಳಿಂದ ಸಾಲದ ಸುಳಿಗೆ ಮನನೊಂದಿದ್ದರು ಎನ್ನಲಾಗುತ್ತಿದೆ. ಮೃತರ ಕುಟುಂಬಸ್ಥರು ಮೂಲತಃ ತುಮಕೂರು ಕಡೆಯವರು. ಕೃತ್ಯಕ್ಕೆ ನಿಖರ ಕಾರಣ ತಿಳಿಯಬೇಕಿದೆ.

ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+