ಅಪ್ಪ ಎನ್ನದಿದ್ದಕ್ಕೆ ಮಗಳನ್ನೇ ಕೊಂದ; 6 ತಿಂಗಳ ನಂತರ ಜಿಗಣಿಯಲ್ಲಿ ಸಿಕ್ಕಿಬಿದ್ದ
ಚಾಮರಾಜನಗರ, ಮಾರ್ಚ್ 9: ಮಗಳನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಆರು ತಿಂಗಳ ನಂತರ ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ತಾಲ್ಲೂಕಿನ ರಾಮಾಪುರದ ಕೆಂಡಯ್ಯ ನಾಗರಾಜು ಎಂಬಾತನೇ ಮಗಳನ್ನು ಕೊಂದು ಪರಾರಿಯಾದವನು. ಈತನ ಹೆಂಡತಿ ರಾಜೇಶ್ವರಿ ತನ್ನ ಆರು ವರ್ಷದ ಮಗಳಾದ ಪೂರ್ಣಿಮಾ ಕಾಣೆಯಾಗಿದ್ದಾಳೆಂದು ಸೆ.23, 2019ರಂದು ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ರಾಮಾಪುರ ಪಿಐ ಮನೋಜ್‌ಕುಮಾರ್ ನೇತ್ರತ್ವದ ತಂಡ ಕಾಣೆಯಾಗಿದ್ದ ಮಗುವನ್ನು ಪತ್ತೆ ಹಚ್ಚಲು ವಿವಿಧ ರೀತಿಯಲ್ಲಿ ತನಿಖೆ ಕೈಗೂಂಡಿದ್ದರು.

ಕೊನೆಗೆ ಬಾಲಕಿಯ ತಂದೆ ಮಗಳು ಕಾಣೆಯಾಗಿರುವ ಬಗ್ಗೆ ಆರು ತಿಂಗಳಿನಿಂದ ವಿಚಾರಿಸಲು ಬಾರದಿದ್ದುದನ್ನು ಗಮನಿಸಿ ಹಾಗೂ ರಾಜೇಶ್ವರಿ ತನ್ನ ಗಂಡನ ವಿರುದ್ಧ ಹೇಳಿದ ಕೆಲ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬಾಲಕಿಯ ತಂದೆ ಕೆಂಡಯ್ಯನಾಗರಾಜುವನ್ನು ಬೆಂಗಳೂರು ಜಿಲ್ಲೆ ಆನೆಕಲ್ ತಾಲೂಕು ಜಿಗಣಿ ಬಳಿ ಪತ್ತೆ ಹಚ್ಚಿದ್ದರು.
Recommended Video
ನಂತರ ತನಿಖೆ ಕೈಗೊಂಡಾಗ ತನ್ನ ಕುಟುಂಬದಲ್ಲಿ ಕೆಲ ಕಹಿ ಘಟನೆಗಳಿಂದ, ತನ್ನ ಮಗಳೇ ತನ್ನನ್ನು ಅಪ್ಪ ಎಂದು ಕರೆಯದೆ ಬೇರೆ ಯಾರನ್ನೋ ಅಪ್ಪ ಎಂದು ಕರೆಯುತ್ತಿದ್ದುದಕ್ಕೆ ಬೇಸತ್ತು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಲೆ ನಡೆದ ಸ್ಥಳದ ಮಹಜರು ನಡೆಸಲಾಗಿದೆ.












Click it and Unblock the Notifications