ಚಾಮರಾಜನಗರ; ಗರ್ಭಿಣಿ ಮಗಳ ನೋಡಲು ಬಂದ ತಂದೆ ನೀರುಪಾಲು
ಚಾಮರಾಜನಗರ, ಏಪ್ರಿಲ್ 21: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಗಳನ್ನು ನೋಡಲು ಲಾಕ್ ಡೌನ್ ನಡುವೆಯೇ ಪೊಲೀಸರ ಕಣ್ತಪ್ಪಿಸಿ ಹೋದ ತಂದೆಯೊಬ್ಬರು ಸಾವನ್ನಪ್ಪಿರುವ ಘಟನೆ ತಮಿಳುನಾಡು ಗಡಿಯಲ್ಲಿ ನಡೆದಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಪಳ್ಳಿಪಾಲ್ಯ ನಿವಾಸಿ ಪೆರುಮಾಳ್(60) ಮೃತ ದುರ್ದೈವಿ. ಪೆರುಮಾಳ್ ಅವರ ಮಗಳು ಸುಮತಿ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಪುದೂರು ಗ್ರಾಮದಲ್ಲಿದ್ದರು. ಅವರು 9 ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ದಿನ ಹತ್ತಿರ ಬಂತೆಂದು ಶನಿವಾರ ಮೆಟ್ಟೂರು ಆಸ್ಪತ್ರೆಗೆ ದಾಖಲಾಗಿದ್ದರು.

ಮಗಳನ್ನು ನೋಡಬೇಕೆಂದು ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಣ್ತಪ್ಪಿಸಿ ಪೆರುಮಾಳ್ ಹೊರಟಿದ್ದರು. ಮೆಟ್ಟೂರು ತಲುಪಲು ಪಾಲಾರ್ ಹಳ್ಳಕ್ಕೆ ಇಳಿದ ವೇಳೆ ಮಾರ್ಗ ಮಧ್ಯೆ ಈಜಲಾಗದೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿನ್ನೆ ಸಂಜೆ ತಮಿಳುನಾಡಿನ ಬರಗೂರು ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಸಿಕ್ಕಿದ್ದು, ಪ್ರಕರಣ ದಾಖಲಾಗಿದೆ.












Click it and Unblock the Notifications