ಆನೆಮಡುವಿನಕೆರೆಗೆ ನೀರು: ಸೋಮಣ್ಣ ಮನವೊಲಿಕೆ ಬಳಿಕ ಹೋರಾಟಕ್ಕೆ ಅಲ್ಪವಿರಾಮ

ಚಾಮರಾಜನಗರ, ಜೂ. 9: ತಾಲೂಕಿನ ಆನೆಮಡುವಿನಕೆರೆಗೆ ಪೋಷಕ ನಾಲೆಯನ್ನು ನಿರ್ಮಿಸಿ ಕೆರೆಯನ್ನು ಉಡಿಗಾಲದ ಚಿಕ್ಕ ಮೋರಿಯಿಂದ ಆನೆಮಡುವಿನಕೆರೆಗೆ ಗುರುತ್ವಾಕರ್ಷಣೆಯಲ್ಲಿ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು. ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದ ರೈತರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾಡಿರುವ ಮನವಿಗೆ ಸ್ಪಂದಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ. ಆದರೆ, ಉಡಿಗಾಲ ಗ್ರಾಮದಲ್ಲಿ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಬುಧವಾರವೂ ಹೋರಾಟವನ್ನು ಮುಂದುವರಿಸಿದ್ದ ರೈತರು ಮಧ್ಯಾಹ್ನ ಸ್ಥಳದಿಂದ ಅಡುಗೆ ಸಿದ್ಧಪಡಿಸಿ, ಊಟ ಮಾಡಿದ್ದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಬುಧವಾರ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಧರಣಿ ನಿರತ ರೈತರ ಮನವೊಲಿಸಲು ಯತ್ನಿಸಿದರು.

ಗುರುತ್ವಾಕರ್ಷಣೆ ಮೂಲಕವೇ ನೀರು ಹರಿಸಬೇಕೆಂದು ಪಟ್ಟು ಹಿಡಿದ ರೈತರು

ಸರ್ಕಾರ 3 ಕೋಟಿ ರೂ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವುದನ್ನು ಬಿಟ್ಟು, ಕಾಣದ ಕೈಗಳ ಒತ್ತಡಕ್ಕೆ ಮಣಿದು ಪೈಪ್ ಲೈನ್ ಮೂಲಕ ನೀರು ಹರಿಸಲು ಯತ್ನಿಸಿದ್ದಾರೆ. ಗುರುತ್ವಾಕರ್ಷಣೆ ಮೂಲಕವೇ ನೀರು ಹರಿಸಬೇಕು ಎಂದು ಪಟ್ಟು ಹಿಡಿದಿರುವ ಉಡಿಗಾಲ ಗ್ರಾಮ ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಭಾನುವಾರದಿಂದ ಚಳವಳಿ ಆರಂಭಿಸಿದ್ದರು.

ಮಂಗಳವಾರ ಉಡಿಗಾಲದಿಂದ ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದು ಹಗಲು ರಾತ್ರಿ ಧರಣಿ ಆರಂಭಿಸಿದ್ದರು. ಬುಧವಾರವೂ ಹೋರಾಟವನ್ನು ಮುಂದುವರಿಸಿದ್ದ ರೈತರು ಮಧ್ಯಾಹ್ನ ಸ್ಥಳದಿಂದ ಅಡುಗೆ ಸಿದ್ಧಪಡಿಸಿ, ಊಟ ಮಾಡಿದ್ದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಬುಧವಾರ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಧರಣಿ ನಿರತ ರೈತರ ಮನವೊಲಿಸಲು ಯತ್ನಿಸಿದರು.

Farmers Stop Protest in Chamarajanagar After Speaking With Minister V Somanna

ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಿ ಸೋಮಣ್ಣ ಮನವಿ:

ರೈತರು ತಮ್ಮ ಬೇಡಿಕೆಯನ್ನು ಮುಂದಿಟ್ಟಾಗ, ಚುನಾವಣೆ ಇರುವುದರಿಂದ ಈಗ ಏನು ಮಾಡಲು ಸಾಧ್ಯವಿಲ್ಲ. ನೀತಿ ಸಂಹಿತೆ ಮುಕ್ತಾಯ ಆದ ಬಳಿಕ ಅಧಿಕಾರಿಗಳನ್ನು ಕರೆದುಕೊಂಡು ಬಂದು ಉಡಿಗಾಲದಲ್ಲಿ ಸಭೆಯನ್ನು ನಡೆಸಲಾಗುವುದು. ಅಲ್ಲಿಯವೆರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಜಿಲ್ಲಾಡಳಿತ ಭವನದ ಮುಂದೆ ನಡೆಸುತ್ತಿದ್ದ ಧರಣಿಯನ್ನು ಕೈ ಬಿಟ್ಟರು. ಉಡಿಗಾಲದಲ್ಲಿ ಮುಂದುವರಿಸುವುದಾಗಿ ಸಚಿವರ ಗಮನಕ್ಕೆ ತಂದರು.

Farmers Stop Protest in Chamarajanagar After Speaking With Minister V Somanna

ಕಬ್ಬು ಬೆಳಗಾರರ ಸಂಘದ ಮೈಸೂರು ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮೂಕಹಳ್ಳಿ ಮಹಾದೇವಸ್ವಾಮಿ, ಉಪಾಧ್ಯಕ್ಷ ಹಾಲಿನ ನಾಗರಾಜ್, ಹಾಡ್ಯ ರವಿ, ಹೆಗ್ಗೋಠಾರ ಶಿವಸ್ವಾಮಿ, ಕುರಬೂರು ಸಿದ್ದೇಶ್, ಗೌಡಹಳ್ಳಿ ಷಡಕ್ಷರಿ ಹಾಗೂ ಉಡಿಗಾಲ ಗ್ರಾಮ ಘಟಕದ ಮಂಜುನಾಥ್, ಪದಾಧಿಕಾರಿಗಳು, ಅಚ್ಚುಕಟ್ಟು ಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರೊಂದಿಗೆ ಮಾತನಾಡಿದರು. ಬಿಜೆಪಿ ಮುಖಂಡ ಮಲ್ಲೇಶ್, ಜಿಲ್ಲಾಘಟಕದ ಅಧ್ಯಕ್ಷ ಆರ್.ಸುಂದರ್ ಇತರರು ಇದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+