ಚಾಮರಾಜನಗರ ದಸರಾ: ಕೇವಲ 14 ನಿಮಿಷದಲ್ಲಿ 13 ಕೆ.ಜಿ.ಯಷ್ಟು ಹಾಲು ಕರೆದ ಯುವ ರೈತನಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?
ಚಾಮರಾಜನಗರ, ಅಕ್ಟೋಬರ್, 19: ನಾಡಹಬ್ಬ ದಸರಾ ಅಂಗವಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಪಶು ವೈದ್ಯಕೀಯ ಇಲಾಖೆ ವತಿಯಿಂದ ಗರಿಷ್ಠ ಹಾಲು ಕರೆಯುವ ಸ್ಪರ್ಧೆ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಚಾರದ ಕೊರತೆಯಿಂದಾಗಿ ಜಿಲ್ಲೆಯ 12 ರೈತರು ಮಾತ್ರ ತಮ್ಮ ಹಸುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ ಹಾಗು ತೃತೀಯ ಬಹುಮಾನ 5 ಸಾವಿರ ರೂಪಾಯಿ ಪಶು ಇಲಾಖೆಯಿಂದ ನೀಡಿದೆ.

ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಮೇಲಾಜಿಪುರದ ನವೀನ, ಕಾಗಲವಾಡಿಯ ಮುರುಗೇಶ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಮೂಡಲಪುರದ ಬಸವರಾಜ ಪಡೆದುಕೊಂಡರು.
ಮೇಲಾಜಿಪುರದ ನವೀನ್ ಎಂಬವವರು 14 ನಿಮಿಷದಲ್ಲಿ 13.200 ಕೆ.ಜಿ.ಹಾಲನ್ನು ಕರೆದು ಮೊದಲ ಸ್ಥಾನ ಪಡೆದು 15 ಸಾವಿರ ನಗದು ಪುರಸ್ಕಾರಕ್ಕೆ ಪಾತ್ರರಾದರು. ಕಾಗಲವಾಡಿ ಗ್ರಾಮದ ಶಿವಪ್ಪ 8.200 ಕೆ.ಜಿ. ಹಾಲನ್ನು ಕರೆದು ದ್ವೀತಿಯ ಸ್ಥಾನ, ಮೂಡಲಪುರ ಗ್ರಾಮದ ಬಸವಣ್ಣ 7.850 ಕೆ.ಜಿ. ಹಾಲು ಕರೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.
ರೈತರಿಗೆ ಪ್ರೊತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ರಾಸುಗಳ ಆರೋಗ್ಯ ಶಿಬಿರ, ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು. ಬರದ ಬೇಗೆಯಿಂದ ಅನ್ನದಾತರು ಕಂಗಾಲಾಗಿದ್ದು, ಶೀಘ್ರದಲ್ಲೇ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಪಶು ಇಲಾಖೆ ಉಪನಿರ್ದೇಶಕ ಹನುಮೇಗೌಡ ತಿಳಿಸಿದರು.
ಶಿವಣ್ಣ ಹಾಡಿಗೆ ಕುಳಿದು ಕುಪ್ಪಳಿಸಿದ ಯುವ ಸಮೂಹ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಬುಧುವಾರ ವಿಧ್ತುಕ್ತ ಚಾಲನೆ ದೊರೆಕಿತು. ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ (ಅಕ್ಟೋಬರ್ 18) ಆರಂಭವಾದ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ನವರಾತ್ರಿ ಶುರುವಾಗಿದೆ. ಎಲ್ಲರೂ ಖುಷಿಪಡಿ. ಘೋಸ್ಟ್ ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಓದುವಾಗ ಓದಿ, ಜಾಲಿ ಆಗಿರುವಾಗ ಜಾಲಿ ಆಗಿರಿ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಳಿಕ ಶಿವರಾಜ್ ಕುಮಾರ್ ಅವರು " ಕಾಲ್‌ಮಿ ಓಜಿ ಒರಿಜಿನಲ್ ಗ್ಯಾಂಗ್ ಸ್ಟಾರ್" ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸಿದರು. "ಆಕಾಶವೇ ಬೀಳಲಿ ಎಂದು ನಾನೆಂದು ನಿನ್ನವನು" ಗೀತೆ ಹಾಡಿ ರಂಜಿಸಿದರು. ನಂತರ ಆನಂದ ಸಿನಿಮಾದ "ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ" ಎಂಬ ಗೀತೆ ಹಾಡಿದರು.
ಇದಕ್ಕೂ ಮುನ್ನ ನಟ ಶರಣ್ ಗೀತಾ ಸಿನಿಮಾದ ಜೊತೆಯಲಿ ಜೊತೆಜೊತೆಯಲಿ ಹಾಗೂ ಅಧ್ಯಕ್ಷ ಸಿನಿಮಾ ಟೈಟಲ್ ಸಾಂಗ್ ಮತ್ತು ರ‍್ಯಾಂಬೋ ಸಿನಿಮಾದ ಚುಟು ಚುಟು ಗೀತೆ ಹಾಡಿದರು. ಈ ವೇಳೆ ನಟರಾದ ಅಜಯ್ ರಾವ್, ರಿಷಿ ಭಾಗವಹಸಿದ್ದರು.
ಗಾಯಕಿ ಐಶ್ವರ್ಯ ರಂಗರಾಜನ್ ಅವರು ಏಕ್ ಲವ್ ಏ ಸಿನಿಮಾದಿಂದ "ಡೇಟ್ ಮಾಡೋಣ ಮೀಟ್ ಮಾಡೋಣ" ಹಾಡು ಆಡಿ ಸಭಿಕರನ್ನು ರಂಜಿಸಿದರು. ದಿವ್ಯ ರಾಮಚಂದ್ರನ್ ಅವರು 'ಜೋಕೆ ನಾನು ಬಳ್ಳಿಯ ಮಿಂಚು' ಗೀತೆ ಹಾಡಿದರು. ಗಾಯಕ ವ್ಯಾಸರಾಜ್ ಸೋಸಲೆ ಬಂದ ಚಕ್ರವರ್ತಿ' ಗೀತೆಗೆ ಯುವಸಮೂಹ ಹುಚ್ಚೆದ್ದು ಕುಣಿದರು. ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಸಾಧುಕೋಕಿಲ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ನಗೆಯ ಕಚಕುಳಿ ಇಟ್ಟರು.
ರಾಧಿಕಾ ನಾರಾಯಣ್ ತಂಡದಿಂದ ಪುಷ್ಪಕ ವಿಮಾನ ಸಿನಿಮಾದ "ಜಿಲ್ಕ ಜಿಲ್ಕ" ಗೀತೆಗೆ ನೃತ್ಯ ಪ್ರದರ್ಶನ ನೀಡಿ ಧೂಳೆಬ್ಬಿಸಿತು. ನಾನು ವಿದ್ಯಾವಿಕಾಸ ಕಾಲೇಜಿನಲ್ಲಿ ಓದಿರುವ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಕಾಂತಾರ, ಜೇಮ್ಸ್, ಯುವರತ್ನ ಸಿನಿಮಾಗಳ ವಿವಿಧ ಗೀತೆಗಳಿಗೆ ನೃತ್ಯ ನೀಡಿ ಸಭಿಕರನ್ನು ಕುಣಿಯುವಂತೆ ಮಾಡಿದರು. ಬಳಿಕ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಪ್ರದರ್ಶಿಸಿ ಗೊಂಬೆ ಹೇಳುತ್ತೈತೆ ಗೀತೆಗೆ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.












Click it and Unblock the Notifications