ಬಂಡೀಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 27: ಅರಣ್ಯದಿಂದ ಜಮೀನಿಗೆ ನುಗ್ಗಿದ ಕಾಡಾನೆಯೊಂದು ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಸಾವಿಗೀಡಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಜಮೀನಿನಲ್ಲಿ ನಡೆದಿದೆ.

ಹೆಡಿಯಾಲ ವಲಯದ ಅರಣ್ಯ ಪ್ರದೇಶದಿಂದ ಸುಮಾರು 20 ವರ್ಷ ಪ್ರಾಯದ ಕಾಡಾನೆ ಗುರುವಾರ ರಾತ್ರಿ ಮೇವನ್ನರಿಸಿ ನಾಡಿನತ್ತ ಬಂದಿದೆ. ಹೀಗೆ ಬಂದ ಕಾಡಾನೆ ಕಾಡಂಚಿನ ಒಡೆಯನಪುರ ಗ್ರಾಮದ ದೊಡ್ಡ ಮಾದೇಗೌಡ ಎಂಬುವರ ಜಮೀನಿಗೆ ನುಗ್ಗಿದೆ. ಆದರೆ ಜಮೀನಿನ ಮಾಲೀಕರು ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಜಮೀನಿನ ಸುತ್ತ ತಂತಿ ಅಳವಡಿಸಿ, ವಿದ್ಯುತ್ ಹಾಯಿಸಿದ್ದರು.[ಬೀದಿನಾಯಿಗಳ ದಾಳಿಗೆ ಕುರಿಗಳು ಬಲಿ!]

Elephant dies due to electric shock

ಜಮೀನಿಗೆ ನುಗ್ಗುವ ಸಂದರ್ಭದಲ್ಲಿ ಕಾಡಾನೆಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ. ಶುಕ್ರವಾರ ಮುಂಜಾನೆ ವಿಷಯ ಗೊತ್ತಾಗಿದ್ದು, ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.[ಸತ್ತ ಆನೆಯ ದಂತ ಕದ್ದ ಚೋರರ ಬಂಧನ]

ಮರಣೋತ್ತರ ಪರೀಕ್ಷೆ ಬಳಿಕ ಕಳೇಬರದ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂಬಂಧ ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wild elephant dies due to electric shock in Gundlupet taluk, Chamarajanagar district.
Please Wait while comments are loading...