ಬಂಡೀಪುರದ ನಿರ್ಬಂಧಿತ ಪ್ರದೇಶದಲ್ಲಿ ಕುಡಿದು ಮೋಜು ಮಸ್ತಿ; ಫೋಟೋ ವೈರಲ್‌

ಚಾಮರಾಜನಗರ, ಅಕ್ಟೋಬರ್‌, 07: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿರುವ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಯುವಕರು ಕುಡಿದು ಮೋಜು ಮಸ್ತಿ ಮಾಡಿದ್ದಾರೆ. ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆಯಲ್ಲಿ ಯುವಕರು ಮೋಜು ಮಸ್ತಿ ಮಾಡುತ್ತಿರುವ ಫೋಟೋಗಳು ವೈರಲ್‌ ಆಗಿವೆ.

ಕೆಲ ತಿಂಗಳ ಹಿಂದೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗಿದ್ದು, ಹಿರೀಕೆರೆ ತುಂಬಿ ಕೋಡಿ ಬಿದ್ದಿತ್ತು. ಇಲ್ಲಿನ ವೈಭವವನ್ನು ಸವಿಯಲು ಹಂಗಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಲೇ ಇರುತ್ತಾರೆ. ಪ್ರವಾಸಿಗರು ಇಲ್ಲಿನ ಕೆರೆ ಕೋಡಿ ಕಂಡು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಇದಕ್ಕೆ ಗ್ರಾಮಸ್ಥರು ಬಾಗೀನವನ್ನೂ ಅರ್ಪಿಸಿದ್ದಾರೆ. ಇದರ ಮಧ್ಯೆಯೇ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆಗೆ ಪುಂಡರ ಗುಂಪೊಂದು ಆಗಮಿಸಿ ಮದ್ಯವನ್ನು ಸೇವಿಸುವುದಲ್ಲದೇ ಹುಚ್ಚಾಟವನ್ನು ಮೆರೆದಿದ್ದಾರೆ.

ಪುಂಡರ ಪುಂಡಾಟದ ಫೋಟೋ ವೈರಲ್‌!

Drunken fun in restricted areas of Bandipur; photos viral

ಕೆರೆ ಅಭಯಾರಣ್ಯ ವ್ಯಾಪ್ತಿಗೆ ಬರುವ ಕಾರಣದಿಂದ ಅರಣ್ಯ ಇಲಾಖೆ ವತಿಯಿಂದ ಪ್ರವೇಶ ದ್ವಾರದಲ್ಲಿ ಗೇಟ್ ಇರಿಸಲಾಗಿದೆ. ಅನುಮತಿ ಪಡೆದ ನಂತರವಷ್ಟೆ ಒಳಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಕೆಲ ಪ್ರವಾಸಿಗರು ಕೆರೆ ವೀಕ್ಷಣೆ ನೆಪದಲ್ಲಿ ರಾಜಾರೋಷವಾಗಿ ಕೆರೆಯ ಕೋಡಿ ಸ್ಥಳದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದು, ಇದೀಗ ಮದ್ಯ ಸೇವನೆ ಮಾಡಿದ ಪುಂಡರ ಪುಂಡಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೋಜು, ಮಸ್ತಿಗೆ ಅವಕಾಶ ಕೊಟ್ಟವರು ಯಾರು?

Drunken fun in restricted areas of Bandipur; photos viral

ಗೋಪಾಲಸ್ವಾಮಿ ಬೆಟ್ಟದ ವಲಯ ವ್ಯಾಪ್ತಿಗೆ ಬರುವ ಹಿರೀಕೆರೆ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ಈ ಹಿನ್ನೆಲೆ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಲಾಗಿದೆ. ಹೀಗಿದ್ದರೂ ಕೂಡ ಪುಂಡರಿಗೆ ಮೋಜುಮಸ್ತಿ ಮಾಡಲು ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಬಂಡೀಪುರ ಅಭಯಾರಣ್ಯದ ವಾಹನಗಳನ್ನು ಹೊರತುಪಡಿಸಿದ ಹಿರೀಕೆರೆ ಸೂಕ್ಷ್ಮ ಪರಿಸರ ವಲಯದಲ್ಲಿ ಖಾಸಗಿ ವ್ಯಕ್ತಿಗಳ ಬೈಕ್, ಕಾರು ಸೇರಿದಂತೆ ಇನ್ನಿತರ ವಾಹನಗಳು ತೆರಳಲು ಅವಕಾಶವಿಲ್ಲ. ಆದರೆ ಅಧಿಕಾರಿಗಳ ಕೃಪಕಟಾಕ್ಷದಿಂದ ಕೆಲವರು ತಮ್ಮ ವಾಹನದ ಸಮೇತ ಬೀಡುಬಿಟ್ಟು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಹಿರೀಕೆರೆಯಲ್ಲಿ ಕೆಲವರು ಈಜಾಡಿರುವುದು ಹಾಗೂ ಮದ್ಯ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಸಿಬ್ಬಂದಿಯಿಂದ ಮಾಹಿತಿ ಪಡೆದು ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಗೋಪಾಲಸ್ವಾಮಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+