Get Updates
Get notified of breaking news, exclusive insights, and must-see stories!

Chamarajanagar Dasara 2024: ದೀಪಾಲಂಕಾರದಲ್ಲಿ ಜಗಮಗಿಸಿದ ಚಾಮರಾಜನಗರ

Chamarajanagar Dasara 2024: ಈಗಾಗಲೇ ನಿನ್ನೆ (ಅಕ್ಟೋಬರ್‌ 3) ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಹಾಗೆಯೇ ಚಾಮರಾಜನಗರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಅಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇದು ನೋಡುಗರನ್ನು ತನ್ನತ್ತ ಕೈಬೀಸಿ ಕರೆಯುವಂತಿದೆ.

ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಉದ್ಯಾನವನದ ಬಳಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ದಸರಾ ದೀಪಾಲಂಕಾರಕ್ಕೆ ವಿದ್ಯುತ್ ಗುಂಡಿ ಒತ್ತುವ ಮೂಲಕ ಗುರುವಾರ (ಅಕ್ಟೋಬರ್‌ 03) ಸಂಜೆ ಚಾಲನೆ ನೀಡಿದರು.

Dasara 2024 Chamarajanagar shines bright with lights

ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರ ವ್ಯಾಪ್ತಿಒಯಲ್ಲಿ 8 ಕಿಲೋ ಮೀಟರ್‌ಗೂ ಹೆಚ್ಚು ದೂರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ 10 ವೃತ್ತಗಳಲ್ಲಿ ದೀಪಾಲಂಕಾರ ಜಗಮಗಿಸುತ್ತಿದೆ. ಇಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ದೇವರ ಪ್ರತಿಕೃತಿಗಳಿಗೂ ಅಕರ್ಷಕವಾಗಿ ಬಣ್ಣ-ಬಣ್ಣದ ದೀಪಗಳನ್ನು ಅಳವಡಿಸಲಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣದ ದೀಪಗಳಿಂದ ಬಿಂಬಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬಣ್ಣದ ಬೆಳಕಿನ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ. ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ವಿವಿಧೆಡೆ ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ. ಜಗಮಗಿಸುವ ದೀಪಗಳಿಂದ ನಗರವನ್ನು ಸಿಂಗಾರಗೊಳಿಸಲಾಗಿದ್ದು, ಇದರಿಂದ ಚಾಮರಾಜನಗರ ಕಂಗೊಳಿಸುತ್ತಿದೆ.

ರಾಯಭಾರಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌?: ಚಾಮರಾಜನಗರ ಪ್ರವಾಸೋದ್ಯಮ ಉತ್ತೇಜಿಸಲು ಪುನೀತ್ ರಾಜ್‍ಕುಮಾರ್ ಗಡಿಜಿಲ್ಲೆ ರಾಯಭಾರಿಯಾಗಿದ್ದರು. ಇದೀಗ ತಮ್ಮನ ಸ್ಥಾನ ತುಂಬಲು ಅಣ್ಣ ಶಿವರಾಜ್ ಕುಮಾರ್ ರಾಯಭಾರಿ ಆಗಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.

ದಸರಾ ಉದ್ಘಾಟನೆಗೆ ಶಿವರಾಜ್ ಕುಮಾರ್ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಜಿಲ್ಲಾ ದಸರಾದಲ್ಲಿ ಶಿವರಾಜ್ ಕುಮಾರ್ ಅವರನ್ನು ಚೆಲುವ ಚಾಮರಾಜನಗರ ರಾಯಭಾರಿಯಾಗಿ ಘೋಷಣೆ ಆಗುವ ಸಾಧ್ಯತೆ ಇದೆ. ಅಣ್ಣಾವ್ರು ಚಾಮರಾಜನಗರದವರಾಗಿದ್ದು, ಈ ಜಿಲ್ಲೆ ಅಂದರೆ ಈಗಲೂ ದೊಡ್ಮನೆಗೆ ಅಕ್ಕರೆ ಜಾಸ್ತಿ. ಇದೇ ಕಾರಣಕ್ಕಾಗಿ ಪುನೀತ್ ಚಾಮರಾಜನಗರದ ರಾಯಭಾರಿ ಆಗಿದ್ದರು. ಇದೀಗ ಶಿವರಾಜ್ ಕುಮಾರ್‌ ಆ ಜವಾಬ್ದಾರಿ ತೆಗೆದುಕೊಳ್ಳುವ ಮಾತಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಫಲಪುಷ್ಪ ಪ್ರದರ್ಶನದ ಥೀಮ್‌ ಏನಿದೆ?: ಇನ್ನು ಅಕ್ಟೋಬರ್ 03ರಂದು ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಫಲಪುಷ್ಪ ಪ್ರದರ್ಶನವೂ ಕೂಡ ಒಂದಾಗಿದೆ. ಹಾಗಾದರೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಥೀಮ್‌ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮೈಸೂರು ದಸರಾ ವಿಶೇಷತೆಗಳಲ್ಲೊಂದಾದ ಫಲಪುಷ್ಪ ಪ್ರದರ್ಶನ ನೋಡುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಮೇಲ್ನೋಟಕ್ಕೆ ಪುಷ್ಪಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಸರ್ಕಾರ ಪಂಚ ಗ್ಯಾರಂಟಿಗಳು ಇಲ್ಲಿ ರಾರಾಜಿಸುತ್ತಿದ್ದು, ಪುಷ್ಪಗಳಲ್ಲಿಯೇ ಭಾರತದ ಸಂವಿಧಾನ, ಸಂಸತ್ತಿನ ಕುರಿತಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ.

ಪುಷ್ಪ ಪ್ರೇಮಿಗಳನ್ನು ಬಗೆ-ಬಗೆಯ ಪುಷ್ಪಗಳು ತನ್ನತ್ತ ಕೈ ಬೀಸಿ ಕರೆಯುತ್ತಿದ್ದರೆ, ವಿವಿಧ ನಮೂನೆಯ ಪುಷ್ಪಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನ ನಡೆಯುತ್ತಿರುವ ಕುಪ್ಪಣ್ಣ ಪಾರ್ಕ್‌ ಅನ್ನು ಒಂದು ಹೊಡೆದರೆ, ಇಲ್ಲಿ ಸಮಾಜಕ್ಕೆ ಅತ್ಯಾದ್ಭುತ ಕೊಡೆಗೆಗಳನ್ನು ನೀಡಿದ ವ್ಯಕ್ತಿಗಳು, ಸಾಧಕರು, ವಚನಾಕಾರರ ಕಲಾಕೃತಿಗಳನ್ನು ಕಾಣಬಹುದಾಗಿದೆ.

ದೇಶದ ಸಂವಿಧಾನದಿಂದ ಆರಂಭವಾಗಿ 12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣ ಸೇರಿದಂತೆ ನೂರಾರು ಶರಣರು ಒಟ್ಟುಗೂಡಿ ಸಮಾಜ ಸುಧಾರಣೆಗಾಗಿ ಚರ್ಚೆ ನಡೆಸುತ್ತಿದ್ದ ಅನುಭವ ಮಂಟಪ, ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ನೋಡುಗರನ್ನು ಸೆಳೆಯುತ್ತಾರೆ.

ಅಷ್ಟೇ ಅಲ್ಲದೆ ಈ ಬಾರಿ ಟಿ-20 ವಿಶ್ವಕಪ್ ಗೆದ್ದ ಭಾರತಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿಶ್ವಕಪ್ ಮಾದರಿ ಕೂಡ ಹೂವಿನಿಂದ ಅರಳಿ ನಿಂತಿದ್ದು, ಕ್ರೀಡಾಭಿಮಾನಿಗಳನ್ನು ತನ್ಮತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪುಷ್ಪಗಳಲ್ಲಿ ಮೂಡಿದ ಪಂಚ ಗ್ಯಾರಂಟಿ: ಇನ್ನು ಕ್ರಿಸ್ತಪೂರ್ವದಲ್ಲಿ ಭಗವಾನ್ ಬುದ್ಧನು ತಮ್ಮ ಶಿಷ್ಯರ ಜೊತೆ ಕುಳಿತು ಸಂವಾದ ನಡೆಸುತ್ತಿರುವ ದೃಶ್ಯವನ್ನೂ ಕೂಡ ಹೂವಿನಲ್ಲಿ ರೂಪ ಕೊಡಲಾಗಿದೆ. ನಮ್ಮ ದೇಶದ ಹೆಮ್ಮೆಯ ಪಾರ್ಲಿಮೆಂಟ್, ಅದಕ್ಕಾಗಿ ದುಡಿದ ಮಹನೀಯರ ಚಿತ್ರಗಳೂ ಕೂಡ ಪುಷ್ಪ ರೂಪದಲ್ಲಿ ಅನಾವರಣಗೊಂಡು, ದೇಶದ ಸಂವಿಧಾನ, ಸಂಸತ್ತು ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿರುವುದು ಕಂಡು ಬರುತ್ತದೆ.

ಇದೆಲ್ಲದರ ನಡುವೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿ ಮಾದರಿಗಳು ಸರ್ಕಾರಿ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+