ಕೊರೊನಾವೈರಸ್ ಕಡಿವಾಣಕ್ಕಾಗಿ ದೇವರಿಗೆ ಮೊರೆಯಿಟ್ಟ ಗ್ರಾಮಸ್ಥರು
ಚಾಮರಾಜನಗರ, ಜುಲೈ.21: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆಯು ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಮಹಾಮಾರಿಯಿಂದ ತಮ್ಮ ಹಳ್ಳಿಯನ್ನು ರಕ್ಷಿಸುವಂತೆ ಗ್ರಾಮಸ್ಥರು ಇದೀಗ ದೇವರ ಮೊರೆ ಹೋಗಿದ್ದಾರೆ.
Recommended Video
ಚಾಮರಾಜನಗರದ ಹರದನಹಳ್ಳಿ ಗ್ರಾಮಸ್ಥರು ಕೊರೊನಾವೈರಸ್ ನ್ನು ಹಿಮ್ಮೆಟ್ಟಿಸಲು ಗ್ರಾಮದೇವತೆ ಮೊರೆ ಹೋಗಿದ್ದು, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ. ಈ ಹಿಂದೆ ಪ್ಲೇಗು, ಕಾಲರಾ, ಸಿಡುಬು, ಮಲೇರಿಯಾ, ಇನ್ನಿತರ ಮಾರಣಾಂತಿಕ ಕಾಯಿಲೆಗಳು ಆವರಿಸುತ್ತಿದ್ದ ಸಂದರ್ಭದಲ್ಲೂ ಗ್ರಾಮದೇವತೆಗೆ ಮೊರೆ ಇಡುತ್ತಿದ್ದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಇದೀಗ ಕೊರೊನಾವೈರಸ್ ಎಂಬ ಮಹಾಮಾರಿಯು ಹರಡುತ್ತಿರುವುದು ಆತಂಕಗೊಂಡ ಗ್ರಾಮಸ್ಥರು ಮತ್ತೆ ಗ್ರಾಮದೇವತೆಯ ಸನ್ನಿಧಿಗೆ ಧಾವಿಸಿ ಬಂದಿದ್ದಾರೆ. ಕೊರೊನಾವೈರಸ್ ಹಾಗೂ ಲಾಕ್ ಡೌನ್ ಪರಿಣಾಮದಿಂದ ಗ್ರಾಮಗಳಲ್ಲಿ ನಡೆಯಬೇಕಾಗಿದ್ದ ಕೊಂಡೋತ್ಸವ, ಮಾರಿಹಬ್ಬ, ಗ್ರಾಮದೇವತೆ ಹಬ್ಬ ರದ್ದಾಗಿತ್ತು.

ಗ್ರಾಮದೇವತೆ ಮುನಿಸಿನಿಂದ ಕೊವಿಡ್-19 ಪ್ರಕರಣ ಹೆಚ್ಚು:
ಚಾಮರಾಜನಗರ ಜಿಲ್ಲೆಯಲ್ಲಿ ಮೊದಲಿಗಿಂತ ಇತ್ತೀಚಿಗೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಗ್ರಾಮಗಳಲ್ಲಿ ನಡೆಯಬೇಕಾಗಿದ್ದ ಕೊಂಡೋತ್ಸವ, ಮಾರಿಹಬ್ಬ, ಗ್ರಾಮದೇವತೆ ಹಬ್ಬ ರದ್ದಾಗಿರುವ ಹಿನ್ನೆಲೆ ಗ್ರಾಮದೇವತೆ ಮುನಿಸಿಕೊಂಡಿದ್ದಾಳೆ. ಇದರಿಂದಾಗಿಯೇ ಗ್ರಾಮಗಳಿಗೂ ಕೊರೊನಾವೈರಸ್ ಸೋಂಕು ವ್ಯಾಪಿಸುತ್ತಿದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಗ್ರಾಮದೇವತೆಯ ಕೋಪವನ್ನು ತಣಿಸುವುದಕ್ಕಾಗಿ ಹರದನಹಳ್ಳಿ ಗ್ರಾಮಸ್ಥರು ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಮದೇವತೆ ಕಂಡಾಯ, ಗದ್ದುಗೆ ಪೂಜೆ, ಮೆರವಣಿಗೆ ನಡೆಸಿದರು. ಕೊರೊನಾವೈರಸ್ ಸೋಂಕಿನಿಂದ ಗ್ರಾಮವನ್ನು ಮುಕ್ತಗೊಳಿಸುವಂತೆ ಶ್ರದ್ದಾ ಭಕ್ತಿಯಿಂದ ಪೂಜಾ ಮೆರವಣಿಗೆಗಳನ್ನು ನಡೆಸಿದರು.












Click it and Unblock the Notifications