ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಪೇದೆ ಸಂಪರ್ಕ: ಚಾಮರಾಜನಗರದಲ್ಲಿ 38 ಜನರ ಬಿಡುಗಡೆ

|
Google Oneindia Kannada News

ಚಾಮರಾಜನಗರ, ಮೇ 8: ಬೆಂಗಳೂರು ಪೊಲೀಸ್‌ ಪೇದೆಯ ಜೊತೆ ಪ್ರಾಥಮಿಕ ಸಂಪರ್ಕಲ್ಲಿದ್ದ ಸಂಪಕದಲ್ಲಿದ್ದ ಎನ್ನಲಾದ ಚಾಮರಾಜನಗರ ಜಿಲ್ಲೆಯ ಎಲ್ಲಾ 38 ಜನರನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ.

Recommended Video

ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡ ಡಿಕೆಶಿ | DK Shivakumar | Oneindia Kannada

ಚಾಮರಾಜನಗರ ಜಿಲ್ಲಾ ಕ್ವಾರಂಟೈನ್ ಕೇಂದ್ರದಲ್ಲಿದ್ದ ಎಲ್ಲಾ 38 ಜನರ ಬಿಡುಗಡೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಗುರುವಾರ ಪೊಲೀಸ್‌ ಪೇದೆಯ ಜೊತೆ ಪ್ರಾಥಮಿಕ ಸಂಪಕ೯ದಲ್ಲಿದ್ದ 16 ಜನರನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿತ್ತು.

ಇಂದು ಶುಕ್ರವಾರ ಉಳಿದ 22 ಜನರ ವರದಿ ನೆಗೆಟಿವ್ ಬಂದಿದ್ದರಿಂದ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಚಾಮರಾಜನಗರ ಜಿಲ್ಲೆ ಕೊರೊನಾ ವೈರಸ್ ಮುಕ್ತವಾಗಿ ಹಸಿರು ವಲಯದಲ್ಲಿದೆ.

Contact With Police: Release Of 38 People In Chamarajanagar

ಕಳೆದೆರಡು ದಿನಗಳಿಂದ ಜಿಲ್ಲೆಯ ಜನರಲ್ಲಿ ಮೂಡಿಸಿದ್ದ ದೂರವಾಗಿ, ಗಡಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಚಾಮರಾಜನಗರ ಜಿಲ್ಲಾಡಳಿತವು ಹನೂರು ತಾಲ್ಲೂಕಿನ ಬೆಳತ್ತೂರು ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಮೂಲಕ ಕ್ವಾರಂಟೈನ್ ಜನರನ್ನು ಕಳುಹಿಸಿದೆ ಎಂದು ಆರೋಗ್ಯ ಇಲಾಖಾ ಮೂಲಗಳು ಮಾಹಿತಿ ನೀಡಿವೆ.

English summary
All 38 people in the Chamarajanagar district, who were in the primary contact with the Bangalore Police, have been released from the Quarantine Center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X