ಉಪಚುನಾವಣೆ: ಮುಖ್ಯಮಂತ್ರಿ ಮಗ ಡಾ.ಯತೀಂದ್ರ ಕಾರು ಜಪ್ತಿ
ಇಂದು ಅನುಮತಿ ಪಡೆಯದೇ ಪ್ರಚಾರಕ್ಕೆ ಆಗಮಿಸಿದ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರ ಕಾರನ್ನು ಗುಂಡ್ಲುಪೇಟೆ ಜಪ್ತಿಮಾಡಲಾಗಿದೆ.
ಚಾಮರಾಜನರ, ಏಪ್ರಿಲ್ 1: ಏಪ್ರಿಲ್ 9ರ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಇನ್ನು ಎಂಟೇ ದಿನ ಬಾಕಿ ಉಳಿದಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದೆ.
ಈಗಾಗಲೇ ಚುನಾವಣಾ ಆಯೋಗ ಚುನಾವಣಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಗಗಳನ್ನು ಕೈಗೊಂಡಿದ್ದು, ಇಂದು ಅನುಮತಿ ಪಡೆಯದೇ ಪ್ರಚಾರಕ್ಕೆ ಆಗಮಿಸಿದ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರ ಕಾರನ್ನು ಜಪ್ತಿಮಾಡಿದೆ.[ಉಪಚುನಾವಣೆ - ಚಿರ ಯುವಕರಂತಾದ ಯಡಿಯೂರಪ್ಪ]

ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಗುಂಡ್ಲುಪೇಟೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿದ್ದ ಡಾ.ಯತೀಂದ್ರ ಅವರ ಕಾರನ್ನು ಜಪ್ತಿಮಾಡಿಕೊಂಡಿದ್ದಲ್ಲದೆ, ನಂಜನಗೂಡಿನ ಕಾಂಗ್ರೆಸ್ ಕಚೇರಿ ಬಳಿ ಗೃಹ ಸಚಿವ ಜಿ.ಪರಮೇಶ್ವರ್ ಅವರ ಕಾರನ್ನೂ ತಪಾಸಣೆ ಮಾಡಲಾಯಿತು.[ನಂಜನಗೂಡಲ್ಲಿ ಸಿದ್ದರಾಮಯ್ಯ - ಯಡಿಯೂರಪ್ಪ ಕಾರು ಮುಖಾಮುಖಿ]
ಫಲಿತಾಂಶದ ದಿನವಾದ ಏಪ್ರಿಲ್ 13 ರವರೆಗೂ ಬಿಗಿಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯೋಗದ ಮೇಲಿದೆ. ಅದಕ್ಕೆಂದೇ ಜಿಲ್ಲಾಧಿಕಾರಿ, ಗೃಹ ಮಂತ್ರಿ ಸೇರಿದಂತೆ ಪ್ರತಿಯೊಬ್ಬರ ವಾಹನವನ್ನೂ ತಪಾಸಣೆ ನಡೆಸಲಾಗುತ್ತಿದೆ.












Click it and Unblock the Notifications