• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ ವೈರಸ್ ಸೋಂಕು!

|
Google Oneindia Kannada News

ಚಾಮರಾಜನಗರ, ಜೂನ್ 09 : ಕೊರೊನಾ ವೈರಸ್ ಸೋಂಕು ಮುಕ್ತ ಜಿಲ್ಲೆ ಎಂಬ ಚಾಮರಾಜನಗರದ ಹಣೆಪಟ್ಟಿ ಕಳಚಿದೆ. ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಸೋಂಕು ಕಾಲಿಟ್ಟಿದೆ.

ಮಹಾರಾಷ್ಟ್ರದಿಂದ ವಾಪಸ್ ಆಗಿದ್ದ 25 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಮಂಗಳವಾರ ಸಂಜೆ ಪ್ರಕಟವಾಗು ಬುಲೆಟಿನ್‌ನಲ್ಲಿ ಚಾಮರಾಜನಗರ ಜಿಲ್ಲೆ ಸೇರ್ಪಡೆಯಾಗಲಿದೆ.

 ಕೊರೊನಾ ದೂರವುಳಿಸಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ ಕೊರೊನಾ ದೂರವುಳಿಸಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ

ಮಾರ್ಚ್‌ ತಿಂಗಳಿನಿಂದ ಇಲ್ಲಿಯ ತನಕ ಚಾಮರಾಜನಗರದಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿರಲಿಲ್ಲ. ಆದ್ದರಿಂದ ಜಿಲ್ಲೆಯನ್ನು ಕೊರೊನಾ ಸೋಂಕು ಮುಕ್ತ ಎಂದು ಘೋಷಣೆ ಮಾಡಲಾಗಿತ್ತು.

ಮೈಸೂರು, ಚಾಮರಾಜನಗರ ರೈತರಿಗೆ ಸಂಕಷ್ಟ ತಂದ ಕೊರೊನಾ ಮೈಸೂರು, ಚಾಮರಾಜನಗರ ರೈತರಿಗೆ ಸಂಕಷ್ಟ ತಂದ ಕೊರೊನಾ

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ನಂಬಿಕೆ ರಾಜಕಾರಣಿಗಳಲ್ಲಿ ಇದೆ. ಕೊರೊನಾ ಸೋಂಕಿಗೆ ಚಾಮರಾಜನಗರ ಎಂದರೆ ಭಯ ಎಂಬ ಸ್ಟೇಟಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

ಸೋಮವಾರ ಸಂಜೆಯ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿನ ಸೋಂಕಿತರ ಸಂಖ್ಯೆ 5760. ಇವುಗಳಲ್ಲಿ 3175 ಸಕ್ರಿಯ ಪ್ರಕರಣಳಿವೆ. ಹೊರ ರಾಜ್ಯದಿಂದ ಆಗಮಿಸುತ್ತಿರುವವರಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ವರದಿಗಳಿಂದ ತಿಳಿಯುತ್ತಿದೆ.

ಜೂನ್ 8ರ ಸೋಮವಾರ 308 ಹೊಸ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಇವುಗಳಲ್ಲಿ ಹೊರ ರಾಜ್ಯದಿಂದ ಬಂದ 277 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಹೊರ ರಾಜ್ಯದಿಂದ ಬಂದವರಿಂದಲೇ ಚಾಮರಾಜನಗರಕ್ಕೆ ಈಗ ಸೋಂಕು ಬಂದಿದೆ.

English summary
Chamarajanagar district of Karnataka reported first case of Coronavirus. A 25-year old returnee from Maharashtra has tested positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X