ಜನತಾ ದರ್ಶನದಲ್ಲಿ ಶಾಸಕರ ಬೆಂಬಲಿಗರು ಹಾಗೂ ರೈತರ ನಡುವೆ ಜಟಾಪಟಿ
ಚಾಮರಾಜನಗರ ಜನವರಿ 13: ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರು ಹಾಗೂ ರೈತರ ನಡುವೆ ಮಾತಿನ ಜಟಾಪಟಿ ನಡೆದು ರೈತರು ಸಭೆ ಬಹಿಷ್ಕಾರ ಮಾಡಿದ ಘಟನೆ ಇಂದು ಹನೂರಿನಲ್ಲಿ ನಡೆದಿದೆ.
ಹನೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಾಸಕ ಎಂ.ಆರ್.ಮಂಜುನಾಥ್, ಡಿಸಿ ಶಿಲ್ಪಾನಾಗ್ ಇಂದು ಜನತಾ ದರ್ಶನ ಹಮ್ಮಿಕೊಂಡಿದ್ದರು. ಈ ವೇಳೆ, ನಾಲ್ ರೋಡ್ ರಸ್ತೆಯನ್ನು ದುರಸ್ತಿ ಪಡೆಸುವಂತೆ ರೈತ ಮುಖಂಡ ಗೌಡೇಗೌಡ ಮನವಿ ಮಾಡಿದರು.

ಅನುದಾನ ಬಿಡುಗಡೆಯಾಗಿದ್ದು ರಸ್ತೆ ಸರಿಪಡಿಸಲಾಗುವುದು ಎಂದು ಶಾಸಕ ಮಂಜುನಾಥ್ ಉತ್ತರ ಕೊಡುತ್ತಿದ್ದ ವೇಳೆ ಶಾಸಕರ ಬೆಂಬಲಿಗರಾದ ಮಹಾದೇವಸ್ವಾಮಿ, ಜವಾದ್, ಅಮಿನ್ ಎಂಬವರು ಮಧ್ಯ ಪ್ರವೇಶಿಸಿ ನೀವು ಅಂದು ಪ್ರತಿಭಟನೆ ನಡೆಸಿ ಎಂಎಲ್ ಗೆ ಧಿಕ್ಕಾರ ಕೂಗಿಲ್ಲವೇ ಎಂದು ಕೇಳಿದ್ದಕ್ಕೆ ಗರಂ ಆದ ರೈತ ಮುಖಂಡರು ನಾವು ವ್ಯವಸ್ಥೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆಯೇ ಹೊರತು ವ್ಯಕ್ತಿ ವಿರುದ್ಧ ಅಲ್ಲಾ, ನೀವ್ಯಾಕೆ ಇಲ್ಲಿ ಮಾತನಾಡುತ್ತೀರಿ ಎಂದು ಬೆಂಬಲಿಗರನ್ನು ರೈತ ಮುಖಂಡರು ಪ್ರಶ್ನೆ ಮಾಡಿದರು.
ಶಾಸಕರ ಬೆಂಬಲಿಗರು ಹಾಗೂ ರೈತ ಸಂಘದ ನಡುವೆ ಮಾತಿಗೆ ಮಾತು ಬೆಳೆದು ಸಭೆ ಬಹಿಷ್ಕಾರ ಮಾಡಿ ಶಾಸಕ ಹಾಗೂ ಶಾಸಕರ ಬೆಂಬಲಿಗರಿಗೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.












Click it and Unblock the Notifications