ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಿಂದ ಸಮಸ್ಯೆಗೆ ಪರಿಹಾರ ಸಿಗುತ್ತಾ?
ಚಾಮರಾಜನಗರ, ಏಪ್ರಿಲ್ 22: ಚಾಮರಾಜನಗರಕ್ಕೆ ಕಾಲಿಡಲು ಸಿಎಂಗಳು ಭಯಪಡುತ್ತಿದ್ದ ಕಾಲವೊಂದಿತ್ತು. ಅಂತಹದೊಂದು ಮೌಢ್ಯವನ್ನು ತೊಡೆದು ಹಾಕಿದ ಕೀರ್ತಿ ಸಿಎಂ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಮುಖ್ಯಮಂತ್ರಿಯಾದ ಬಳಿಕ ಹಲವು ಬಾರಿ ಚಾಮರಾಜನಗರಕ್ಕೆ ಬಂದು ಹೋಗಿದ್ದಾರೆ. ಇದೀಗ ಇಡೀ ಸಚಿವ ಸಂಪುಟದ ಸಚಿವರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ಸಂಪುಟ ಸಭೆ ಜಿಲ್ಲೆಯಲ್ಲಿಯೇ ನಡೆಯುತ್ತಿರುವುದರಿಂದ ಸಮಸ್ಯೆಗಳಿಗೆಲ್ಲ ಮುಕ್ತಿ ಸಿಗುತ್ತಾ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಆದರೆ ಅಂತಹದೊಂದು ನಿರೀಕ್ಷೆಯನ್ನು ಜನ ಮಾಡುತ್ತಿರುವುದಂತು ಸತ್ಯ.
ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳಾದವರು ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತುಗಳು ಈ ಹಿಂದೆ ಸದ್ದು ಮಾಡುತ್ತಿತ್ತು. ಹೀಗಾಗಿ ಕೆಲವು ಸಿಎಂಗಳು ಬಂದಿರಲಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಚಾಮರಾಜನಗರದ ನೆಲದಲ್ಲಿ ನಿಂತು ಅಬ್ಬರಿಸಿದ್ದರು. ಇದೆಲ್ಲವೂ ಮೌಢ್ಯ ಎಂದಿದ್ದರು. ಈಗಲೂ ಅದನ್ನೇ ಹೇಳುತ್ತಾ ಹಲವು ಕಾರ್ಯಕ್ರಮಗಳ ಸಲುವಾಗಿ ಬಂದು ಭಾಷಣ ಮಾಡಿ ಹೋಗಿದ್ದಾರೆ. ಇದೀಗ ಏ.24ರಂದು ಸಚಿವ ಸಂಪುಟದ ಸಭೆಯನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸಲು ಮುಂದಾಗಿದ್ದು, ಈ ಸಂಬಂಧ ಸರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯ ಹಿಂದಿನ ಉದ್ದೇಶಗಳು ಏನಿವೆಯೋ ಗೊತ್ತಿಲ್ಲ. ಆದರೆ ಜಿಲ್ಲೆಯ ಜನರಲ್ಲಿ ಮಾತ್ರ ಬೆಟ್ಟದಷ್ಟು ಕುತೂಹಲಗಳಿದ್ದು, ಮೂಲಸೌಕರ್ಯಗಳಿಲ್ಲದೆ ಬದುಕಿಗಾಗಿ ಹೋರಾಡುತ್ತಿರುವ ಜನರಿಗೆ ನಾಳೆಯಿಂದ ಎಲ್ಲವೂ ಸರಿಹೋಗಿ ಬಿಡುತ್ತದೆಯೇನೋ ಎಂಬ ನಿರೀಕ್ಷೆಯಂತು ಇದ್ದೇ ಇದೆ. ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೊಂದಿಲ್ಲ.
ಸರ್ಕಾರಕ್ಕೆ ಮಾಹಿತಿ ನೀಡಿದ ಜಿಲ್ಲಾಡಳಿತ
ಈಗಾಗಲೇ ಚಾಮರಾಜನಗರ ನಿಸರ್ಗ ಸೌಂದರ್ಯ, ಪ್ರವಾಸೋದ್ಯದಿಂದ ಶ್ರೀಮಂತಿಕೆ ಹೊಂದಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದ್ದು, ಅಗತ್ಯ ಸೌಲಭ್ಯಗಳು ತಳಮಟ್ಟದ ಜನತೆಯನ್ನು ತಲುಪಿಲ್ಲ. ಬುಡಕಟ್ಟು ಜನಾಂಗವನ್ನು ಜಿಲ್ಲೆಯು ಹೊಂದಿದ್ದು, ಅವರಿಗೆ ಮೂಲ ಸೌಕರ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಕೆಲಸವಂತು ಆಗಿಲ್ಲ. ಹೀಗಾಗಿಯೇ ಇನ್ನು ಕೂಡ ವಿದ್ಯುದ್ದೀಪ, ಶುದ್ಧ ಕುಡಿಯುವ ನೀರು, ರಸ್ತೆ ಸೌಲಭ್ಯವಿಲ್ಲದೆ ಬದುಕು ಪರಿಸ್ಥಿತಿಯಿದೆ. ಮೂಲಗಳ ಮಾಹಿತಿಯಂತೆ ಈಗಾಗಲೇ ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಜಿಲ್ಲೆಯಲ್ಲಿರುವ ಪ್ರಮುಖ ಸಮಸ್ಯೆಗಳ ವಿವರವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಪ್ರಸ್ತಾವನೆಯನ್ನು ಕಳುಹಿಸುವಂತೆ ಸೂಚಿಸಲಾಗಿದ್ದು, ಅದರಂತೆ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸರಣಿ ಸಭೆ ನಡೆಸಿ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಬೇಕಾಗಿರುವುದರಿಂದ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸುವುದು, ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡುವುದು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವುದು, ಬುಡಕಟ್ಟು ಜನರಿಗೆ ಅರೋಗ್ಯದ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡುವುದು. ಬೆಟ್ಟಗುಡ್ಡಗಳ ನಡುವೆ ಕಾಡಿನಂಚಿನಲ್ಲಿ ವಾಸಿಸುವವರಿಗೆ ರಸ್ತೆ ಸೌಲಭ್ಯ, ವಿದ್ಯುತ್, ನೀರು ನೀಡುವುದು, ಹಾಡಿ ಪೋಡುಗಳಲ್ಲಿ ಕಿರು ಆರೋಗ್ಯ ಕೇಂದ್ರ ತೆರೆಯುವುದು, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಜನ ವಸತಿ ಹಾಡಿಗಳಲ್ಲಿ ವಾಸ ಮಾಡುವವರಿಗೆ ಸುಗಮ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ, ಶುದ್ದ ಕುಡಿಯುವ ನೀರು ಪೂರೈಕೆ, ವಿದ್ಯುತ್ ಸೌಕರ್ಯ ಮೊದಲಾದವುಗಳನ್ನು ನೀಡುವುದರತ್ತ ಸರ್ಕಾರ ಗಮನಹರಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಮೂಲಸೌಕರ್ಯಗಳ ಅಗತ್ಯತೆ ಬಹಳಷ್ಟಿದೆ
ಜಿಲ್ಲೆಯು ನಿಸರ್ಗ ಸುಂದರತೆಯ ತಾಣವಾಗಿದೆ. ಅರಣ್ಯ ಸಮೃದ್ಧಿ ಇಲ್ಲಿದೆ. ದೇಗುಲ ಬೆಟ್ಟಗಳೆಲ್ಲವೂ ಜನರನ್ನು ಸೆಳೆಯುವಂತಿದ್ದು, ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ಕೆಲಸವಾಗಬೇಕಿದೆ. ಇದು ಸಾಧ್ಯವಾಗಬೇಕಾದರೆ ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವಾಗಬೇಕಿದೆ. ಅದರಲ್ಲೂ ಹೊಗನೇಕಲ್ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತೆ ಮಾಡಬಹುದು. ಪಾಲಾರ್ ಗಡಿಯಿಂದ ಹೊಗನೇಕಲ್ ತನಕ ಸುಗಮ ಸಂಚಾರಕ್ಕೆ ರಸ್ತೆ ನಿರ್ಮಾಣದ ಅವಶ್ಯಕತೆಯಿದೆ.

ಅರಣ್ಯ ಪ್ರದೇಶಗಳಿಂದ ಕೂಡಿರುವ ಕಾರಣ ರೈತರು ಮತ್ತು ವನ್ಯಪ್ರಾಣಿಗಳ ಸಂಘರ್ಷವಂತು ನಡೆಯುತ್ತಲೇ ಇರುತ್ತದೆ. ಕಾಡು ಪ್ರಾಣಿಗಳು ಕಾಡಿನಿಂದ ನಾಡಿನ ಕಡೆಗೆ ಬಾರದಂತೆ ಶಾಶ್ವತ ಯೋಜನೆಗಳನ್ನು ತರಬೇಕಾಗಿದೆ. ಅಷ್ಟೇ ಅಲ್ಲದೆ ಕಾಡಂಚಿನ ಜನರಿಗೆ ಶಿಕ್ಷಣದ ಅಗತ್ಯತೆ ಕಂಡು ಬರುತ್ತಿದ್ದು ಶಿಕ್ಷಣದಿಂದ ದೂರ ಸರಿಯುತ್ತಿರುವ ಆದಿವಾಸಿ ಮಕ್ಕಳಿಗೆ ಶಿಕ್ಷಣಕೊಡಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ರೈತರು ವನ್ಯ ಪ್ರಾಣಿಗಳ ಉಪಟಳ, ದರ ಕುಸಿತ ಸೇರಿದಂತೆ ಹಲವು ತೊಂದರೆಗಳನ್ನು ಎದುರಿಸುತ್ತಿದ್ದು ಅವರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತೀರ್ಮಾನವನ್ನು ಸಂಪುಟ ಸಭೆ ಮಾಡಬೇಕಿದೆ.
ಜಿಲ್ಲೆ ಅಭಿವೃದ್ಧಿಯಾದರೆ ಅಷ್ಟೇ ಸಾಕು!
ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸಂಪುಟ ಸಭೆಯ ಉದ್ದೇಶವನ್ನು ಹೇಳಲಿದೆ. ನಿಜವಾಗಿಯೂ ಜಿಲ್ಲೆಯ ಕಾಳಜಿಯಿಂದ ಸಚಿವ ಸಂಪುಟದ ಸಭೆಯನ್ನು ನಡೆಸಿದ್ದೇ ಆದರೆ ಮತ್ತು ಸಭೆಯ ಉದ್ದೇಶಗಳು ಈಡೇರಿದ್ದೇ ಆದರೆ ನಿಜಕ್ಕೂ ಎಲ್ಲರೂ ಖುಷಿಪಡುವ ಸಂಗತಿಯಾಗಲಿದೆ. ಆದರೆ ರಾಜಕೀಯ ಕಾರಣಕ್ಕಾಗಿ ಸಭೆ ನಡೆಸಿ ಅದರಿಂದ ಜಿಲ್ಲೆಗೆ ಯಾವುದೇ ಅನುಕೂಲಗಳು ಆಗದೇ ಹೋದರೆ ಸರ್ಕಾರವನ್ನು ಜನ ಕ್ಷಮಿಸಲಾರರು. ಸದ್ಯಕ್ಕೆ ಹತ್ತಾರು ನಿರೀಕ್ಷೆ ಮತ್ತು ಕುತೂಹಲ ಇದ್ದದ್ದೇ ಆದರೆ ಸರ್ಕಾರದ ತೀರ್ಮಾನಗಳೇನು ಎಂಬುದನ್ನು ತಿಳಿಯಬೇಕಾದರೆ ಸಂಪುಟ ಸಭೆಯ ತನಕ ಕಾಯಲೇ ಬೇಕಾಗಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications