ತಮಿಳುನಾಡಿಗೆ ನೀರು ಬಿಟ್ಟಿರುವ ಸಿಎಂಗೆ ಬುದ್ಧಿನೇ ಇಲ್ಲ: ಮೂರನೇ ತರಗತಿ ಬಾಲಕನ ಆಕ್ರೋಶ

ಚಾಮರಾಜನಗರ, ಸೆಪ್ಟೆಂಬರ್‌ 29: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಚಾಮರಾಜನಗರ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಇದೀಮಗ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ. ಇನ್ನು ಪ್ರತಿಭಟನೆ ವೇಳೆ ಮೂರನೇ ತರಗತಿ ಬಾಲಕನೊಬ್ಬ ಸಿಎಂಗೆ ಚೀ..ತೂ..ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

ನನಗೆ ಇರುವಷ್ಟು ಬುದ್ಧಿ ಸಹ ಸಿದ್ದರಾಮಯ್ಯರಿಗೆ ಇಲ್ಲ. ಚಾಮರಾಜನಗರ ಪಾಲಿನ ನೀರನ್ನು ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಟ್ಟಿದೆ. ನಮಗೆ ಪಾತ್ರೆ ತೊಳೆಯಲು ನಿರಲ್ಲದಿದ್ದಾಗ, ತಮಿಳುನಾಡಿಗೆ ನೀರು ಬಿಟ್ಟಿರುವ ಸಿಎಂಗೆ ಬುದ್ಧಿ ಇಲ್ಲ ಎಂದು ಮೂರನೇ ತರಗತಿ ಬಾಲಕ ಹೇಳಿದ್ದಾನೆ.

Cauvery dispute: Third Standard Boy Lashes Out At CM Siddaramaiah

ನನಗೆ ಬುದ್ಧಿ ಇದೆ. ಅವರಿಗೆ ಬುದ್ಧಿ ಇಲ್ಲ. ಕಾವೇರಿ ನೀರು ಬಿಟ್ಟಿದ್ದು, ನನಗೆ ಬೇಜಾರಾಯ್ತು. ಮಳೆ ಇಲ್ಲದಿರುವಾಗ ಕಾವೇರಿ ನೀರು ಕೊಡುವುದು ಹೇಗೆ? ಸಿದ್ದರಾಮಯ್ಯಗೆ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ನನಗೆ, ಅಷ್ಟು ಬುದ್ಧಿ ಇಲ್ವಾ ಅವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕಾವೇರಿ ಹೋರಾಟಕ್ಕಿಳಿದ ಐದು ವರ್ಷದ ಬಾಲಕ

ಇನ್ನು ದಾವಣಗೆರೆಯಲ್ಲೂ ಕೂಡ 5 ವರ್ಷದ ಬಾಲಕ ಕಾವೇರಿ ನೀರಿಗಾಗಿ ಹೋರಾಟಕ್ಕಿಳಿದು ಗಮನ ಸೆಳೆದಿದ್ದಾನೆ. ದಾವಣಗೆರೆಯ ಕೆ.ಬಿ. ಬಡಾವಣೆಯ ಅವಿನಾಶ್ ಹಾಗೂ ಚೈತ್ರಾ ದಂಪತಿ ಪುತ್ರ ಮೇಹಿತ್, ಬೆಳ್ಳಂಬೆಳಿಗ್ಗೆ ತನ್ನ ತಾಯಿಯ ಜೊತೆ ಜಗಳವಾಡಿಕೊಂಡು ಪ್ರತಿಭಟನೆಗೆ ತಯಾರಾಗಿ ಬಂದಿದ್ದಾನೆ. ಜಯದೇವ ವೃತ್ತಕ್ಕೆ ಆಗಮಿಸಿದ ಮೇಹಿತ್ ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಕೂಡಲೇ ನೀರು ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

Cauvery dispute: Third Standard Boy Lashes Out At CM Siddaramaiah

ನಮಗೆ ಭತ್ತ, ಬೇಳೆ ಸೇರಿದಂತೆ ಇತರೆ ಬೆಳೆಯಲು ನೀರಿಲ್ಲ. ಕುಡಿಯಲು ನೀರು ಸರಿಯಾಗಿ ಸಿಗುತ್ತಿಲ್ಲ. ಕಾವೇರಿ ನದಿ ನೀರು ನಮ್ಮದು, ಯಾವುದೇ ಕಾರಣಕ್ಕೂ ನೀರು ಹರಿಸಬೇಡಿ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ. ನಾನು ಟಿವಿಯಲ್ಲಿ ಕಾವೇರಿಗಾಗಿ ಹೋರಾಟ ನಡೆಯುತ್ತಿರುವುದನ್ನು ನೋಡಿದೆ. ನನಗೂ ಹೋರಾಟಕ್ಕೆ ಧುಮಕಬೇಕು ಎಂಬ ಬಯಕೆ ಬಂತು. ಹಾಗಾಗಿ, ಬೆಳಗ್ಗೆಯೇ ಬಂದಿದ್ದೇನೆ. ಕನ್ನಡಪರ ಸಂಘಟನೆಗಳ ಜೊತೆ ನಾನೂ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+