ಗುಂಡ್ಲುಪೇಟೆ: ಬೈಕ್‌ಗೆ ಡಿಕ್ಕಿಯಾಗಿ ಶೆಡ್‌ಗೆ ನುಗ್ಗಿದ ಕಾರು; ಓರ್ವ ಸಾವು, ಇಬ್ಬರಿಗೆ ಗಾಯ
ಚಾಮರಾಜನಗರ, ನವೆಂಬರ್, 22: ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆಬದಿ ಶೆಡ್‌ಗೆ ಕಾರು ನುಗ್ಗಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಸಮೀಪ ಶುಕ್ರವಾರ (ನವೆಂಬರ್ 22) ನಡೆದಿದೆ.
ಕೂತನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬಳಿಕ ಶೆಡ್‌ಗೆ ನುಗ್ಗಿದ ಪರಿಣಾಮ ಕೂತನೂರು ಗ್ರಾಮದವ ನಿಂಗಶೆಟ್ಟಿ(46) ಮೃತಪಟ್ಟಿದ್ದಾರೆ. ಮಹದೇವ ಮತ್ತು ಭೀಮನಬೀಡು ಗ್ರಾಮದ ಮಾದಶೆಟ್ಟಿ ತೀವ್ರವಾಗಿ ಗಾಯಗೊಂಡ್ಡಿದ್ದು, ಇವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಗಿದೆ.

ಮೂವರು ಎಲೆಕೋಸು ಕಟಾವಿಗೆ ಹೋಗಿದ್ದು, ಮನೆಗೆ ಬೈಕ್‌ನಲ್ಲಿ ತೆರಳಲು ರಸ್ತೆ ಬದಿ ನಿಂತಿದ್ದರು. ಈ ವೇಳೆ ಭೀಮನಬೀಡು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿ ಮೂವರ ಸ್ಥತಿ ಗಂಭೀರವಾಗಿತ್ತು. ಬಳಿಕ ಸುತ್ತಲಿದ್ದವರು ರಕ್ಷಣೆಗೆ ಧಾವಿಸಿದ್ದು, ತುರ್ ತುಚಿಕಿತ್ಸಾ ವಾಹನದಲ್ಲಿ ಮೂವರನ್ನು ಮೈಸೂರಿಗೆ ಕರೆದುಕೊಂಡು ಹೋಗುವಾಗ ತೀವ್ರವಾಗಿ ಗಾಯಗೊಂಡಿದ್ದ ನಿಂಗಶೆಟ್ಟಿ ಮೃತಪಟ್ಟಿದ್ದಾರೆ.
ಇನ್ನು ಕಾರು ಚಾಲಕ, ಕಾರು ಮತ್ತು ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಭೀಮನಬೀಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿತ್ತು. ಚಾಲಕ ಮದ್ಯಪಾನ ಮಾಡಿದ್ದ ಕಾರಣ ರಸ್ತೆಯ ಬಲಭಾಗದಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಶೆಡ್‌ಗೆ ನುಗ್ಗಿದ ಕಾರು ಕೊನೆಗೆ ಜಮೀನೊಳಗೆ ಬಂದು ನಿಂತಿದೆ.
ಇದರಿಂದ ಶೆಡ್ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಕೂಡ ನಜ್ಜುಗುಜ್ಜಾಗಿದೆ. ಆದ್ದರಿಂದ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೂತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದ್ದು, ಸದ್ಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications