Get Updates
Get notified of breaking news, exclusive insights, and must-see stories!

ಚಾಮರಾಜನಗರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಬಿಜೆಪಿ, ಕಾಂಗ್ರೆಸ್‌ ನಾಯಕರು: ಎಫ್.ಐ.ಆರ್ ದಾಖಲು

ಚಾಮರಾಜನಗರ, ಏಪ್ರಿಲ್‌, 27: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎರಡು ಪ್ರಕರಣದಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ.

ಏಪ್ರಿಲ್ 17ರಂದು ಮೆರವಣಿಗೆಗೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ.ಮರಿಸ್ವಾಮಿ ಅವರು ಮೆರವಣಿಗೆಗೆ ಅನುಮತಿ ಪಡೆದಿದ್ದರು. ಈ ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್.ಐ.ಆರ್ ದಾಖಲಾಗಿದೆ.

BJP, Congress leaders uses kids for campaigning in Chamarajanagar constituency: FIR register

ಏಪ್ರಿಲ್ 19ರಂದು ಮೆರವಣಿಗೆಗೆ ಚಾಮರಾಜನಗರ ಜಿಲ್ಲೆಯ ಬಿ.ಜೆ.ಪಿ.ಪಾರ್ಟಿಯ ಸಂಚಾಲಕರಾದ ನಾಗೇಂದ್ರ ಆರ್.ಎಲ್.ರವರು ಅನುಮತಿ ಪಡೆದಿದ್ದರು. ಈ ವೇಳೆ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು, ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ ಸೋಮಣ್ಣಗೆ ಸೋಲುವ ಆತಂಕ

ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಇತ್ತೀಗಷ್ಟೇ ವೈರಲ್‌ ಆಗಿತ್ತು. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ ನಾಮಪತ್ರ ವಾಪಸ್‌ ತಗೋ ಎಂದಿದ್ದಾರೆ. ಮಾತ್ರವಲ್ಲದೆ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡಿಸಿ ಪದವಿ ನೀಡುವ ಆಮಿಷವನ್ನು ಒಡಿದ್ದರು.

ಬಿಜೆಪಿಯಲ್ಲಿ ಬಿಎಸ್‌ ಯಡಿಯೂರಪ್ಪ ಅವರ ನಂತರ ತನ್ನದೆ ಆದ ಇಮೇಜ್‌ ಹೊಂದಿರುವ ಲಿಂಗಾಯತ ಸಮುದಾಯದ ನಾಯಕನಿಗೆ ಇಷ್ಟವಿಲ್ಲದಿದ್ದರೂ ಬಿಜೆಪಿ ಹೈಕಮಾಂಡ್‌ ಸಿದ್ದರಾಮಯ್ಯಗೆ ಪ್ರಬಲ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರನ್ನು ನಿಲ್ಲಿಸಿದೆ. ಆದರೆ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಇಲ್ಲಿ ಸೋಮಣ್ಣ ಅವರಿಗೆ ಅಷ್ಟೋಂದು ಹೋಲ್ಡ್‌ ಇಲ್ಲ ಎನ್ನವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಬಹಿರಂಗವಾಗಿರುವ ಆಡಿಯೋದಲ್ಲಿ ವಿ ಸೋಮಣ್ಣ ಅವರು ಜೆಡಿಎಸ್‌ ಅಭ್ಯರ್ಥಿಯಾದ ಮಲ್ಲಿಕಾರ್ಜುನ (ಆಲೂರು ಮಲ್ಲು) ಎಂಬುವವರ ಬಳಿ ನಿನ್ನ ಕೈಮುಗಿತಿನಿ ಕಣಯ್ಯ ನಾಮಪತ್ರ ವಾಪಸ್‌ ತಗೋ. ಜಿಟಿಜಿ ಅವರೊಂದಿಗೆ ನಾನು ಮಾತನಾಡುತ್ತೇನೆ. ನಾವಿಬ್ಬರು ಬಾಲ್ಯ ಸ್ನೇಹಿತರು ಎಂದು ಬೇಡಿಕೊಳ್ಳುವಂತೆ ಕಂಡು ಬರುತ್ತದೆ. ಅಧಿಕಾರವಿದ್ದಾಗ ವಿ ಸೋಮಣ್ಣ ಅವರು ತಮ್ಮದೇ ಬಿಜೆಪಿಯಲ್ಲಿ ಆಲೂರು ಮಲ್ಲು ತರಗಹದ ನಾಯಕರನ್ನು ತನ್ನ ಬಳಿ ಬೆಂಬಲಿಗರಾಗಿ ಹೊಂದಿದ್ದರು, ಆದರೆ ಈಗ ಅಂತಹವರ ಬಳಿ ಹಿರಿಯ ನಾಯಕ ವಿ ಸೋಮಣ್ಣ ಅವರು ಕೇಳಿಕೊಳ್ಳುವುದು ಹೈಕಮಾಂಡ್‌ ಹಿರಿಯನ್ನು ಯಾವ ಮಟ್ಟದಲ್ಲಿ ನೋಡುತ್ತದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಸೋಮಣ್ಣ ಅವರಿಗೆ ವರುಣಾದಲ್ಲಿ ಈಗ ಕಣದಲ್ಲಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಪ್ರಬಲ ಅಭ್ಯರ್ಥಿ ಅವರನ್ನು ಮಣಿಸುವುದು ಕಷ್ಟಸಾಧ್ಯದ ಮಾತು. ಅದಂತೆ ಚಾಮರಾಜನಗರದಲ್ಲಿ ಸೋಮಣ್ಣ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ ಅವರು ನಿಂತಿದ್ದಾರೆ. ಒಂದು ವೇಳೆ ವರುಣಾ ಕೈತಪ್ಪಿದರೂ ಚಾಮರಾಜನಗರದಲ್ಲಿ ಸೋಮಣ್ಣ ಗೆಲ್ಲುವ ಅವಕಾಶವಿತ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನದೆ ಬಲವನ್ನು ಇಂದಿಗೂ ಹೊಂದಿದೆ.

ಹೀಗಾಗಿ ಚಾಮರಾಜನಗರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ನಾಮಪತ್ರ ತೆಗೆಸಿದರೆ ತಾವು ಗೆಲ್ಲಬಹುದು ವಿಧಾನಸೌಧದಲ್ಲಿ ತಮ್ಮ ಸ್ಥಾನ ಭದ್ರಗೊಳಿಸಬಹುದು ಎಂದು ಸೋಮಣ್ಣ ಲೆಕ್ಕಾಚಾರವಾಗಿತ್ತು, ಆದರೆ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಸೋಮಣ್ಣ ಮಾತಿಗೆ ಸೊಪ್ಪು ಹಾಕಿದಂತಿಲ್ಲ. ಈ ಬಗ್ಗೆ ಮಾತನಾಡಿರುವ ಆಲೂಲು ಮಲ್ಲು ಆಡಿಯೋ ಸೋಮಣ್ಣ ಅವರದ್ದೇ. ಅವರು ನನಗೆ ಮಾತನಾಡಿದ್ದು, ಹೌದು ಆದರೆ ನಾನು ನಮ್ಮ ನಾಯಕರ ಅಣತಿಯಂತೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಣೆ ನೀಡಿದ್ದಾರೆ.

ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಬದಿಗೆ ಸರಿಸುವ ಪ್ರಯತ್ನವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕೆಲವು ಕಾರಣಗಳನ್ನು ನೀಡಿ ಕೆಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಇಲ್ಲಿ ಪ್ರಮುಖವಾಗಿ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್‌ ಇವರಲ್ಲದೆ ಇನ್ನು ಕೆಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.
ಅರುಣ್‌ಗೆ ಟಿಕೆಟ್‌ ನೀಡುವಂತೆ ಮನವಿ

ಇಲ್ಲಿ ಜಗದೀಶ್ ಶೆಟ್ಟರ್‌ ಹಾಗೂ ಸವದಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಕ್ಷ ಅವರಿಗೆ ಟಿಕೆಟ್‌ ಕೂಡ ನೀಡಲಾಗಿದೆ. ಆದರೆ ಸೋಮಣ್ಣ ವಿಚಾರ ಹಾಗಗಲಿಲ್ಲ. ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರದಿಂದ ತಮ್ಮ ಪುತ್ರ ಅರುಣ್‌ಗೆ ಟಿಕೆಟ್‌ ನೀಡುವಂತೆ ಕೋರಿದ್ದರು ಎನ್ನಲಾಗಿತ್ತು. ಆದರೆ ಅಲ್ಲೂ ಸೋಮಣ್ಣ ಅವರಿಗೆ ನಿರಾಸೆ ಎದುರಾಗಿತ್ತು. ಸೋಮಣ್ಣ ಪುತ್ರ ಅರುಣ್‌ ಅವರಿಗೆ ಬದಲು ಉಮೇಶ್‌ ಶೆಟ್ಟಿಗೆ ಟಿಕೆಟ್‌ ನೀಡಲಾಯಿತು. ಇಲ್ಲಿ ಹಿರಿಯರಾದ ಸೋಮಣ್ಣ ಅವರನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+