ವರುಣನ ಕೃಷೆಯಿಂದ ಹಸಿರಾಗುತ್ತಿರುವ ಬಂಡೀಪುರ ಅರಣ್ಯ..ಪ್ರವಾಸಿಗರಿಗೀಗ ರಸದೌತಣ!
ಚಾಮರಾಜನಗರ, ಮೇ 03: ಈ ಬಾರಿ ವರುಣ ಕೃಪೆ ತೋರಿ ಮಳೆ ಸುರಿಸಿದ್ದರಿಂದ ಬಂಡೀಪುರದಲ್ಲಿ ಕಾಡ್ಗಿಚ್ಚಿನ ಭಯ ದೂರವಾಗಿದೆ. ಹಾಗೆಯೇ ಬಿಸಿಲಿಗೆ ಒಣಗಿದ್ದ ಅರಣ್ಯ ನಿಧಾನವಾಗಿ ಹಸಿರಿಗೆ ಮರಳುತ್ತಿದೆ. ಹೀಗಾಗಿ ನಿಸರ್ಗ ಪ್ರೇಮಿಗಳು ಬಂಡೀಪುರದ ಕಡೆಗೆ ಮುಖ ಮಾಡಿದ್ದು, ಸಫಾರಿಗೆ ಮುಗಿ ಬೀಳುತ್ತಿದ್ದಾರೆ. ಸಕಾಲದಲ್ಲಿ ಮಳೆ ಸುರಿದ ಕಾರಣದಿಂದಾಗಿ ನೀರು ಮತ್ತು ಮೇವನ್ನು ಅರಸಿಕೊಂಡು ವನ್ಯಪ್ರಾಣಿಗಳು ದೂರ ಸರಿಯದ ಕಾರಣದಿಂದಾಗಿ ಒಂದಷ್ಟು ಪ್ರಾಣಿಗಳು ಸಫಾರಿಗೆ ತೆರಳುವವರ ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಸೆರೆಯಾಗುತ್ತಿವೆ.
ಇನ್ನೊಂದಷ್ಟು ದಿನ ಕಳೆದರೆ ಮುಂಗಾರು ಆರಂಭವಾಗಲಿದ್ದು, ಈ ಬಾರಿ ಪೂರ್ವ ಮುಂಗಾರು ಚೆನ್ನಾಗಿಯೇ ಸುರಿದಿದೆ. ಪರಿಣಾಮ ನೀರು ಮತ್ತು ಮೇವಿಗೆ ವನ್ಯಪ್ರಾಣಿಗಳಿಗೆ ತೊಂದರೆಯಾಗಲಿಲ್ಲ. ಜತೆಗೆ ಕಾಡ್ಗಿಚ್ಚಿನ ಭಯದಲ್ಲಿದ್ದ ಅರಣ್ಯ ಇಲಾಖೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ. ಈಗೀಗ ಮಳೆ ಸುರಿದ ಮಾರನೆಯ ದಿನ ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡುವುದು ಪ್ರಾಣಿ ಪ್ರಿಯರಿಗೆ ಮಜಾ ನೀಡುತ್ತಿದೆ. ಏಕೆಂದರೆ ಇಲ್ಲಿನ ಸುಂದರತೆಯೇ ಹಾಗಿದೆ. ವನಸಿರಿಯಲ್ಲಿ ವಿಹರಿಸಿದರೆ ನಮ್ಮೆಲ್ಲರ ನೋವು ಮರೆಯಾಗುವುದಲ್ಲದೆ ಉಲ್ಲಾಸ ತುಂಬುತ್ತದೆ.

ಇಲ್ಲಿನ ಅರಣ್ಯದತ್ತ ಕಣ್ಣು ಹಾಯಿಸುತ್ತಾ ಹೋದರೆ ಹಸಿರು ಹಚ್ಚಡದ ನಿಸರ್ಗ.. ಅದರೊಳಗೆ ಓಡಾಡುವ ಕಾಡಾನೆಗಳು.. ಬೇಟೆಯ ಮೂಡ್ ನಲ್ಲಿರುವ ಹುಲಿಗಳು.. ಜಿಂಕೆ, ಸಾರಂಗಗಳು.. ಹಕ್ಕಿಗಳ ಕಲರವ.. ಜೇನಿನ ಝೇಂಕಾರ ಎಲ್ಲವೂ ಕಣ್ಮುಂದೆ ಹಾದು ಹೋಗುತ್ತವೆ. ಈ ಬಾರಿ ಸುರಿದ ಮಳೆ ಅರಣ್ಯಕ್ಕೆ ಜೀವ ತಂದಿದೆ. ಜತೆಗೆ ಬಂಡೀಪುರದ ನಡುವೆಯಿರುವ ನೀರಿನ ಸೆಲೆಗಳಾದ ಕೆರೆಕಟ್ಟೆಗಳು ಆರದಂತೆ ನೋಡಿಕೊಂಡಿದೆ ಹೀಗಾಗಿ ಕಾಡು ಪ್ರಾಣಿಗಳು ನೆಮ್ಮದಿಯಾಗಿವೆ ಅವುಗಳು ಎಲ್ಲೆಂದರಲ್ಲಿ ಸಿಗುತ್ತಿರುವುದರಿಂದ ಸಫಾರಿಗೆ ತೆರಳುವವರಿಗೂ ಖುಷಿಕೊಡುತ್ತಿದೆ.
ಬಂಡೀಪುರ ಹುಲಿಗಳ ಆವಾಸ ಸ್ಥಾನ. ಇವುಗಳನ್ನು ಹೊರತು ಪಡಿಸಿದರೆ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಕಾಣಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಛಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದ ನಂತರ ಇಲ್ಲಿ ಹಲವು ಬಗೆಯ ಪ್ರಾಣಿಗಳು ಕಾಣಸಿಗುತ್ತವೆ. ಸಸ್ಯಹಾರಿಗಳಿಂದ ಹಿಡಿದು ಮಾಂಸ ಹಾರಿ ಪ್ರಾಣಿಗಳ ತನಕ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತವೆ.
ಮುಂಜಾನೆಯ ಚುಮುಚುಮು ಚಳಿಯಲ್ಲಿ ಹಿಮದ ಹಾದಿಯಲ್ಲಿ ಸಾಗುವಾಗಿ ಗಿಡಮರಗಳ ನಡುವೆ ಹಾದು ಹೋಗುವ ಪ್ರಾಣಿಗಳನ್ನು ನೋಡುವುದೇ ಒಂದು ರೀತಿಯ ಮಜಾ.. ಅದರಲ್ಲೂ ಪಕ್ಷಿಗಳ ಕಲರವ, ಜೇನಿನ ಝೇಂಕಾರ, ಮೂಗಿಗೆ ರಾಚುವ ಕಾನನ ಕುಸುಮಗಳ ಸುವಾಸನೆ ಹೊಸದಾದ ಲೋಕವೊಂದನ್ನು ತಮ್ಮ ಮುಂದೆ ತೆರೆದಿಡುತ್ತದೆ. ಇಷ್ಟೇ ಅಲ್ಲದೆ ಅರಣ್ಯದ ನಡುವೆ ಮತ್ತು ಅರಣ್ಯಕ್ಕೆ ಒತ್ತಿಕೊಂಡಂತೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಪರದೆಯನ್ನು ಸರಿಸಿಕೊಂಡು ಸಾಗುವಾಗ ಆಗುವ ಆನಂದ ಹೇಳತೀರದ್ದಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದ್ದು, ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಪ್ರವಾಸಿಗರು ಸಫಾರಿಯಲ್ಲಿ ತೆರಳಿ ಹುಲಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಾರೆ. ಬಂಡೀಪುರವು ರಾಜ್ಯದ ಸಂಪರ್ಕ ಸೇತುವಾಗಿದ್ದು, ದಕ್ಷಿಣಕ್ಕೆ ತಮಿಳುನಾಡು ಮತ್ತು ಪಶ್ಚಿಮಕ್ಕೆ ಕೇರಳದ ಅರಣ್ಯಪ್ರದೇಶಗಳೊಂದಿಗೆ ವಿಲೀನಗೊಂಡಿದೆ.
ಇಲ್ಲಿ ಎಲೆ ಉದುರುವ ಹಾಗೂ ಕುರುಚಲು ಸಸ್ಯ ಪ್ರಭೇದಗಳು ಹೆಚ್ಚಾಗಿರುವುದರಿಂದ ಎಲ್ಲ ಸಮಯದಲ್ಲಿಯೂ ಇಲ್ಲಿ ಹಸಿರನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಇದೀಗ ಮಳೆಗಾಲ ಕಳೆದಿದ್ದರಿಂದಾಗಿ ಎಲ್ಲಿ ನೋಡಿದರಲ್ಲಿ ಹಸಿರ ರಾಶಿ ಕಂಗೊಳಿಸುತ್ತಿದೆ. ಹಾಗಾಗಿ ಈ ಸಮಯವನ್ನು ಕಳೆದುಕೊಂಡರೆ ಮತ್ತೆ ಸದ್ಯಕ್ಕೆ ಇಂತಹ ಸುಂದರ ವಾತಾವರಣ, ನಿಸರ್ಗದ ಚೆಲುವು, ವನ್ಯಪ್ರಾಣಿಗಳ ದರ್ಶನವನ್ನು ಇಷ್ಟು ಸುಲಭವಾಗಿ ಪಡೆಯುವುದು ಕಷ್ಟವೇ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಉತ್ತಮ ಮಳೆಯಾಗದೆ ಗಿಡಮರಗಳು ಒಣಗುವುದು, ನೀರಿನ ಸೆಲೆ ಬರಿದಾಗುವುದು, ಪ್ರಾಣಿಗಳು ನೀರು ಅರಸಿಕೊಂಡು ದೂರ ಹೋಗುವುದು ಹೀಗೆ ಸಮಸ್ಯೆಗಳಾಗುತ್ತಿದ್ದವು. ಆದರೆ ದೇವರ ದಯೆಯಿಂದ ಕಳೆದ ಕೆಲವು ವರ್ಷಗಳಿಂದ ಬಂಡೀಪುರದಲ್ಲಿ ಕಾಡ್ಗಿಚ್ಚು ಕಡಿಮೆಯಾಗಿದೆ. ಮೊದಲೆಲ್ಲ ಸಮರ್ಪಕವಾಗಿ ಮಳೆಯಾಗದ ಕಾರಣದಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗುತ್ತಿರಲಿಲ್ಲ. ಪ್ರಾಣಿಗಳಿಗೆ ಹಸಿರು ಮೇವುಗೂ ತೊಂದರೆಯಾಗಿತ್ತು. ಜತೆಗೆ ಬೇಸಿಗೆಯಲ್ಲಿ ಬಿದ್ದ ಕಾಡ್ಗಿಚ್ಚು ವನ್ಯ ಪ್ರಾಣಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಆದರೆ ಇತ್ತೀಚೆಗೆ ವರುಣ ಕೃಪೆ ತೋರಿರುವುದರಿಂದ ಅರಣ್ಯ ಹಸಿರಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಸಮರ್ಪಕವಾಗಿ ಆಗಿದ್ದೇ ಆದರೆ ಬಂಡೀಪುರದ ಸುಂದರತೆ ಇನ್ನಷ್ಟು ಹೆಚ್ಚಲಿದ್ದು, ಇಲ್ಲಿನ ಸುಂದರ ದೃಶ್ಯಗಳನ್ನು ನೋಡಿದವರು ಮತ್ತು ಅರಣ್ಯದಲ್ಲಿ ರಸಮಯ ಕ್ಷಣಗಳನ್ನು ಕಳೆದವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದರಿಂದಾಗಿ ಜನ ಆಕರ್ಷಣೆಗೊಂಡು ಇತ್ತ ಬರುತ್ತಿದ್ದಾರೆ. ಇವರ ಪೈಕಿ ವಿದೇಶಿಗರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದು ಖುಷಿಕೊಡುವ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications