ರಾಜ್ಯ ಬಿಜೆಪಿ ನಾಯಕರಿಗೆ ಭಯ, ಅದಕ್ಕೆ ಮೋದಿಯವರನ್ನು ಪದೇ ಪದೇ ಕರೆಸುತ್ತಿದ್ದಾರೆ: ಸಿ.ಪುಟ್ಟರಂಗಶೆಟ್ಟಿ
chamarajanagar, karnataka assembly elections 2023, congress, bjp, politics, ಚಾಮರಾಜನಗರ, ಕರ್ನಾಟಕ ವಿಧಾನಸಭಾ ಚುನಾವಣೆ 2023, ಕಾಂಗ್ರೆಸ್, ಬಿಜೆಪಿ, ರಾಜಕೀಯ,
ಚಾಮರಾಜನಗರ, ಫೆಬ್ರವರಿ, 27: ಬಿಜೆಪಿಗೆ ನಿಜಕ್ಕೂ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ, ಅಮಿತ್ ಶಾ ಅವರನ್ನು ಯಾಕೆ ಇಷ್ಟು ಬಾರಿ ಕರೆಸಿಕೊಳ್ಳುತ್ತಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ವ್ಯಾಂಗ್ಯವಾಡಿದರು. ಹಾಗೆಯೇ ಬಿಜೆಪಿ ಸರ್ಕಾರದಿಂದ ಕ್ಷೇತ್ರಕ್ಕೆ ಯಾವ ಹೊಸ ಅನುದಾನ ಬಂದಿಲ್ಲ. ಅನುದಾನ ಕೊಡುವುದಾಗಿ ಚಾಮರಾಜನಗರದಲ್ಲಿ ಹೇಳಿದ ಸಿಎಂ ಬೆಂಗಳೂರಿಗೆ ಹೋಗಿ ರಿಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಇಷ್ಟು ಬಾರಿ ಬರುತ್ತಾ ಇದಾರಲ್ಲ, ರಾಜ್ಯವೇ ಮಳೆಯಿಂದ ಮುಳುಗಿದಾಗ ಏಕೆ ಬರಲಿಲ್ಲ. ಮಹಾಮಾರಿ ಕೊರೊನಾ ಅವಾಂತದಿಂದ ಜನರು ಸಂಕಷ್ಟಕ್ಕೆ ಒಳಗಾದಾಗ ಯಾಕೆ ಬರಲಿಲ್ಲ? ವಿಶೇಷ ಅನುದಾನ ಏಕೆ ಕೊಡಲಿಲ್ಲ? ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡೆಲ್ಲಿಯಲ್ಲೇ ಕುಳಿತು "ಕೈ" ಅಲ್ಲಾಡಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.

ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ
ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನೆಡೆ ಆಗಲಿದೆ. ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ. ಜನರು ಅವರನ್ನು ಬೈದು ಕಳುಹಿಸುತ್ತಾರೆ, ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲ ಎಂದರು. ಬಿಜೆಪಿಯೇ ಭರವಸೆ ಎಂದು ಗೋಡೆಗಳಲ್ಲಿ ಬರೆದುಕೊಂಡಿದ್ದಾತರೆ ಅಷ್ಟೇ. 100ಕ್ಕೆ 100ರಷ್ಟು ಸುಳ್ಳು ಹೇಳುವ ಸರ್ಕಾರ ಇದ್ದರೇ ಅದು ಬಿಜೆಪಿ ಮಾತ್ರ. ಒಂದಾದರೂ ಸತ್ಯ ಹೇಳಲಿ ನೋಡೋಣ. ಚಾಮರಾಜನಗರ ಅಭಿವೃದ್ಧಿಯಾಗಿದ್ದು ಸಿದ್ದರಾಮಯ್ಯನವರ ಅವಧಿಯಲ್ಲಿ. ಬಿಜೆಪಿ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಯಾವ ಹೊಸ ಅನುದಾನವೂ ಬಂದಿಲ್ಲ
ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯನವರು ಆರಂಭಿಸಿದ್ದ ಯೋಜನೆಗಳಿಗೆ ಮುಂದುವರಿದ ಭಾಗವಾಗಿ ಹಣ ಕೊಟ್ಟಿದ್ದಾರೆ ಅಷ್ಟೇ. ಇದನ್ನು ಹೊರತುಪಡಿಸಿ ಹೊಸ ಅನುದಾನ ಯಾವುದು ಬಂದಿಲ್ಲ. ಅನುದಾನ ಕೊಡುವುದಾಗಿ ಚಾಮರಾಜನಗರದಲ್ಲಿ ಹೇಳಿದ ಸಿಎಂ ಬೆಂಗಳೂರಿಗೆ ಹೋಗಿ ರಿಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಚಾಮರಾಜನಗರಕ್ಕೆ ಬಿ.ಎಲ್.ಸಂತೋಷ್ ಭೇಟಿ
ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದಿತ್ತು. ಬಳಿಕ ಚಾಮರಾಜನಗರಕ್ಕೆ ರಾಜಕೀಯ ಚಾಣಕ್ಯ ಬಿ.ಎಲ್.ಸಂತೋಷ್ ಎಂಟ್ರಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ್ದರು.

ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ್ದರು.












Click it and Unblock the Notifications