ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಸಿರಿಧಾನ್ಯದಲ್ಲಿ ಅಪ್ಪು, ಒಡೆಯರ್‌, ಪುಷ್ಪಗಳಲ್ಲಿ ಅರಳಿದ ಬಿಳಿಗಿರಿ ದೇಗುಲ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್‌, 28: ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಅಪ್ಪು ಇದೀಗ ಸಿರಿಧಾನ್ಯದಲ್ಲಿ ಅರಳಿದ್ದಾರೆ. ಚಾಮರಾಜನಗರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅಪ್ಪು ಜೊತೆ ಸಿರಿದಾನ್ಯಗಳಲ್ಲಿ ಅಪ್ಪು ಮೂಡಿಬಂದಿರುವುದು ಎಲ್ಲರ ಗಮನ ಸೆಳೆದಿದೆ.

ಚಾಮರಾಜನಗರ ಜಿಲ್ಲಾ ದಸರಾದ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ನವರಾತ್ರಿ ಸಂಭ್ರಮಕ್ಕೆ ಪುನೀತ್ ರಾಜ್‌ಕುಮಾರ್‌ ಮತ್ತು ಮಹಾರಾಜ ಜಯಚಾಮರಾಜ ಒಡೆಯರ್ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾರೆ. 13.5 ಲಕ್ಷ ರೂಪಾಯಿ ಅನುದಾನದಲ್ಲಿ 27ಕ್ಕೂ ಹೆಚ್ಚು ಮಳಿಗೆಗಳ ಮೂಲಕ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಂಡೋಪತಂಡವಾಗಿ ಫಲಪುಷ್ಪ ಪ್ರದರ್ಶನವನ್ನು ನೋಡಲು ಆಗಮಿಸಿದ್ದಾರೆ. ಸೈಕಲ್, ಮ್ಯಾಂಗೋ ಸೇರಿದಂತೆ ವಿನೂತನವಾಗಿ ಮಾಡಿರುವ ಸೆಲ್ಫೀ ಪಾಯಿಂಟ್‌ಗಳಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಚಾಮರಾಜನಗರ ದಸರಾಗೆ ಚಾಲನೆ; ಇಂದು ಸಂಜೆಯಿಂದ ಸಾಂಸ್ಕೃತಿಕ‌ ಕಲರವಚಾಮರಾಜನಗರ ದಸರಾಗೆ ಚಾಲನೆ; ಇಂದು ಸಂಜೆಯಿಂದ ಸಾಂಸ್ಕೃತಿಕ‌ ಕಲರವ

ಸಿರಿಧಾನ್ಯದಲ್ಲಿ ಅರಳಿದ ಅಪ್ಪು
ಸಿರಿಧಾನ್ಯದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್‌, ಜಯಚಾಮರಾಜ ಒಡೆಯರ್ ಅವರ ಆಕೃತಿಯನ್ನು ನಿರ್ಮಿಸಿದ್ದು, ಇದು ನೋಡುಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ. ಮತ್ತೊಂದೆಡೆ ಕಲ್ಲಂಗಡಿಗಳಲ್ಲಿ ಜನಪ್ರಿಯ ವ್ಯಕ್ತಿಗಳ ಚಿತ್ರಗಳು ಅರಳಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್‌, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ದರ್ಶನ್ ಚಿತ್ರಗಳು ಕಲ್ಲಂಗಡಿಯಲ್ಲಿ ಕಂಗೊಳಿಸುತ್ತಿದೆ. ಇನ್ನು ಚಾಮರಾಜನಗರ ಜನರ ಆರಾಧ್ಯ ದೈವ, ಹಸಿರಿನ ಐಸಿರಿಯಲ್ಲಿ ನೆಲೆಸಿರುವ ಬಿಳಿಗಿರಿರಂಗನಾಥ ದೇವಾಲಯ ಹೂವುಗಳಲ್ಲಿ ಅರಳಿದ್ದು, ಭಕ್ತಿಭಾವ ಮೂಡಿಸುವಂತಿದೆ.

Chamarajanagar: Appu, Jayachamaraja Wodeyar in Millets

ಬಾಯಲ್ಲಿ ನೀರೂರಿಸಿದ ವಿವಿಧ ಬಗೆಯ ತಿಂಡಿಗಳು
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಒಲವು ತೋರಿದ್ದಾರೆ. ಪ್ರಗತಿಪರ ಕೃಷಿಕರು ಬೆಳೆದಿರುವ ವಿವಿಧ ಬೆಳೆಗಳ ಪ್ರದರ್ಶನ, ಮನೆಯ ಚಿಕ್ಕ ಖಾಲಿ ಜಾಗದಲ್ಲೂ ಗಾರ್ಡನ್ ಮಾಡುವ ಉಪಾಯಗಳು, ಟೆರೆಸ್ ಗಾರ್ಡನ್ ಉಪಯೋಗಗಳ ಬಗ್ಗೆ ಪ್ರತಿಕೃತಿ ಮೂಲಕ ತೋರಿಸಿ ಕೊಡಲಾಗಿದೆ. ಫಲಪುಷ್ಪ ಪ್ರದರ್ಶನ ಸ್ಥಳದಲ್ಲಿ ತಿಂಡಿ ಪ್ರಿಯರಿಗೆ ಬಗೆ ಬಗೆಯ ಆಹಾರಗಳನ್ನು ತಯಾರಿಸಿದ್ದಾರೆ. ವಿವಿಧ ಜ್ಯೂಸ್‌ಗಳು, ಸಾವಯವ ತಿನಿಸುಗಳು, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿರುವ ಆಹಾರ ಪದಾರ್ಥಗಳು ಬಾಯಲಿ ನೀರೂರಿವಂತಿದ್ದವು.

ಒಟ್ಟಿನಲ್ಲಿ ಮೈಸೂರಿಗೆ ತೆರಳಿ ದಸರಾ ವೈಭವ ಕಾಣಲಾಗದವರು ಚಾಮರಾಜನಗರದಲ್ಲೇ ಮಿನಿ ದಸರಾ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿವೆ.

Chamarajanagar: Appu, Jayachamaraja Wodeyar in Millets

ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ
ಚಾಮರಾಜನಗರ ಜಿಲ್ಲೆಯ ದಸರಾಗೆ ಸಾಂಪ್ರದಾಯಿಕವಾಗಿ ನಿನ್ನೆ ಚಾಲನೆ ಕೊಡಲಾಗಿತ್ತು. ಈಗಾಗಲೇ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಮೇಳೈಸಿದೆ. ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದರು. ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತಿ ಸಿಇಒ ಕೆ.ಎಂ.ಗಾಯತ್ರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಇದ್ದರು.

ದಸರಾ ಉತ್ಸವ ಅಂಗವಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿರುವ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಿದ್ದರು. ಬಳಿಕ ಜೆ.ಎಚ್.ಪಟೇಲ್ ಸಭಾಂಗಣ ಹಾಗೂ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದ್ದು, ‌ಸಚಿವ ಸೋಮಣ್ಣ ಪ್ರಧಾನ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದರು. ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಪ್ರತಿ ದಿನ ಜಿಲ್ಲೆಯ ಜಾನಪದ ಕಲೆಗಳು ಪ್ರದರ್ಶನ ಕಾಣಲಿವೆ. ಪ್ರತಿ ದಿನವೂ 20ಕ್ಕೂ ಹೆಚ್ಚು ಜಾನಪದ ತಂಡಗಳು ಕಲೆಯನ್ನು ಪ್ರದರ್ಶಿಸಲಿವೆ. ಸೋಬಾನೆ ಪದ, ಗೊರವರ ಕುಣಿತ, ಕಂಸಾಳೆ, ನೀಲಗಾರರ ಪದ, ತಂಬೂರಿ ಪದ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ, ಭಜನೆ, ನೃತ್ಯ ರೂಪಕ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ. ಇನ್ನು ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಕಲಾವಿದರು ಜನರನ್ನು ರಂಜಿಸಲಿದ್ದಾರೆ.

English summary
Puneeth Rajkumar and Jayachamaraja Wodeyar are center of attraction fruit flower show celebration in chamarajanagar, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X