ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಡಾದ ಬಂಡೀಪುರ ಅರಣ್ಯ;ಎಲ್ಲೆಲ್ಲೂ ಬೆಂಕಿಯಲ್ಲಿ ಬೆಂದ ಪ್ರಾಣಿಗಳ ದರ್ಶನ

|
Google Oneindia Kannada News

ಬಂಡೀಪುರ, ಫೆಬ್ರವರಿ 25: ಬೇಸಿಗೆ ಸಮಯ ಆರಂಭದ ದಿನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದ 20 ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶ ಭಸ್ಮವಾಗಿದ್ದು, ಭಾನುವಾರ (ಫೆ.24) ಕೂಡ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ.

ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಇದೀಗ ಬೆಂಕಿಯ ನರ್ತನ ಅಧಿಕವಾಗಿದೆ. ಕಳೆದ ಮೂರು ದಿನಗಳಿಂದ ನಿರಂತವಾಗಿ ಬೆಂಕಿಯ ಜ್ವಾಲೆ ಹೆಚ್ಚಾಗುತ್ತಲೇ ಇದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

 ಬಂಡೀಪುರ ಕಾಳ್ಗಿಚ್ಚು, ಬೆಂಕಿ ನಂದಿಸಲು ಹರಸಾಹಸ ಬಂಡೀಪುರ ಕಾಳ್ಗಿಚ್ಚು, ಬೆಂಕಿ ನಂದಿಸಲು ಹರಸಾಹಸ

ಬೆಂಕಿಯ ಜ್ವಾಲೆಗೆ ಹೆದರಿದ ಬಂಡೀಪುರದ ವನ್ಯ ಜೀವಿಗಳು ಇದೀಗ ಕಾಡು ತೊರೆದು ಪ್ರಾಣ ಉಳಿಸಿಕೊಳ್ಳುವತ್ತ ಮುಖಮಾಡಿವೆ. ಪ್ರಸ್ತುತ ಬಂಡೀಪುರದಲ್ಲಿ ಶುಕ್ರವಾರ ಕಾಣಿಸಿಕೊಂಡ ಕಾಡ್ಗಿಚ್ಚು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಲಕ್ಕಿ ಗುಡ್ಡ, ಬೋಳಗುಡ್ಡ ಹೀಗೆ ಹಲವಾರು ಕಡೆ ವ್ಯಾಪ್ತಿಸಿಕೊಂಡು ಇಡೀ ಕಾಡನ್ನೇ ಬರಿದಾಗಿಸುತ್ತಿದೆ.

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಅಭಯರಾಣ್ಯವಾಗಿರುವ ಬಂಡೀಪುರದಲ್ಲಿ ಕಾಡಿಗೆ ಬೆಂಕೆ ಕಾಣಿಸಿಕೊಂಡರೆ ಅದನ್ನು ನಿಯಂತ್ರಣ ಮಾಡಲು ಸಾಧ್ಯವಾಗದ ಮಾತಾಗಿದೆ. ಅಗ್ನಿ ಶಾಮಕ ದಳದ ದೊಡ್ಡ ವಾಹನಗಳು ಕಾಡಿನಲ್ಲಿ ಸಂಚಾರ ಮಾಡಲಾಗದ ಸ್ಥಿತಿಯಲ್ಲಿದ್ದರೂ ಸಹ, ಚಿಕ್ಕ ವಾಹನದಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

 ಪ್ರಾಣಿಗಳು ಸಾವನ್ನಪ್ಪಿದ ದರ್ಶನ

ಪ್ರಾಣಿಗಳು ಸಾವನ್ನಪ್ಪಿದ ದರ್ಶನ

ಈ ನಡುವೆ ಅರಣ್ಯ ಇಲಾಖೆಯವರು ತಮ್ಮಲ್ಲಿರುವ ಹಳೇ ಮಾದರಿಯ ಸಾಧನವನ್ನೇ ಬೆಂಕಿ ನಂದಿಸಲು ಯತ್ನಿಸಿದ್ದರೂ ಕೂಡ ಸುಮಾರು 20 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಇದೀಗ ಬರಡಾಗಿದೆ. ಎಲ್ಲಿ ನೋಡಿದರೂ ಬೆಂಕಿಯಲ್ಲಿ ಬೆಂದ ಮರಗಳು, ಬೆಂಕಿಯಕಾವಿಗೆ ಸಾವನ್ನಪ್ಪಿದ ಹೆಬ್ಬಾವು, ಹೀಗೆ ಅನೇಕ ಸಣ್ಣ ಪುಟ್ಟ ಪ್ರಾಣಿಗಳು ಸಾವನ್ನಪ್ಪಿದ ದರ್ಶನವಾಗುತ್ತಿದೆ.

 ಅನೇಕ ಕಡೆಗಳಲ್ಲಿ ಕಾಡ್ಗಿಚ್ಚು

ಅನೇಕ ಕಡೆಗಳಲ್ಲಿ ಕಾಡ್ಗಿಚ್ಚು

ಬಂಡೀಪುರದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೂ ಕಾಣಿಸಿಕೊಂಡು, ಮಸಣಗುಡಿ, ತೆಪ್ಪಕಾಡು ಸೇರಿದಂತೆ ಅನೇಕ ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬಂಡೀಪುರದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಪ್ರಮಾಣ ಮತ್ತು ಸಮಸ್ಯೆಗಳನ್ನು ಆಲಿಸಲು ಪಿಸಿಸಿಎಫ್ ಪುನಾತಿ ಶ್ರೀಧರ್ ಅವರು ಖುದ್ದಾಗಿ ಆಗಮಿಸಿ ಸ್ಥಳ ಪರಿಶೀಲಿಸಿದರು.

 ಬಂಡೀಪುರದಲ್ಲಿ ಆರದ ಬೆಂಕಿ;ವನ್ಯ ಪ್ರಾಣಿಗಳು ಸಾವು, ಸಾವಿರಾರು ಎಕರೆ ಅರಣ್ಯ ನಾಶ ಬಂಡೀಪುರದಲ್ಲಿ ಆರದ ಬೆಂಕಿ;ವನ್ಯ ಪ್ರಾಣಿಗಳು ಸಾವು, ಸಾವಿರಾರು ಎಕರೆ ಅರಣ್ಯ ನಾಶ

 ಕಾಡು ಅಕ್ಷರಶಃ ಬರಿದಾಗಿದೆ

ಕಾಡು ಅಕ್ಷರಶಃ ಬರಿದಾಗಿದೆ

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅಕ್ಷರಶಃ ಬೆಂಕಿಯ ಕೆನ್ನಾಲಿಗೆ ಸಿಲುಕಿ ಬರಡಾಗಿದೆ. ಅರಣ್ಯ ಇಲಾಖೆಯವರು ಅರಣ್ಯವನ್ನು ಯಥಾ ಸ್ಥಿತಿಗೆ ತರಲು ಹಲವಾರು ವರ್ಷಗಳೇ ಶ್ರಮ ವಹಿಸಬೇಕಾಗಿದೆ.

 ಸತೀಶ ಜಾರಕಿಹೊಳಿ ಭೇಟಿ

ಸತೀಶ ಜಾರಕಿಹೊಳಿ ಭೇಟಿ

ಬೆಂಕಿ ಅನಾಹುತ ಸಂಭವಿಸಿದ ಬೆನ್ನಲ್ಲೇ ಬಂಡೀಪುರಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು, ಬಂಡೀಪುರದ ಟೈಗರ್ ರಸ್ತೆ ಬೋಳುಗುಡ್ಡ, ಕುಳ್ಳನಬೆಟ್ಟದಲ್ಲಿ ಬೆಂಕಿ ನಂದಿಸುವ ಕಾರ್ಯ ವೀಕ್ಷಿಸಿದರು. ಅವರೊಂದಿಗೆ ಶಾಸಕ ಸಿ.ಎಸ್.ನಿರಂಜನಕುಮಾರ್, ಪಿಸಿಸಿಎಫ್ ಪುನತಿಶ್ರೀಧರ್, ಎಸಿಸಿಎಫ್ ಜಯರಾಂ, ಸಿಸಿಎಫ್ ಅಂಬಾಡಿಮಾದವ್ ಹಾಗೂ ಅರಣ್ಯಾಧಿಕಾರಿಗಳು ಇದ್ದರು.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು, ಒಂದು ವಾರ ಸಫಾರಿ ಬಂದ್

English summary
A major Fire in Karnataka’s Bandipur Tiger Reserve:Thousands of acres of forest land destroyed. So many small animals died of fire shock. Forest minister Satish Jarakiholi visited to Bandipur and checked out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X