ಕಾಡಾನೆ ಕಾಲಿನ ತುಳಿತಕ್ಕೆ 45 ವರ್ಷದ ಅರಣ್ಯ ಅಧಿಕಾರಿ ಸಾವು

ಚಾಮರಾಜನಗರ, ಜುಲೈ, 27: ಯಳಂದೂರು ತಾಲೂಕಿನ ಸಿಮೇಟಿ ಕ್ಯಾಂಪ್ ಬಳಿ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆ ವಾಚರ್ 45 ವರ್ಷದ ಕಿಶೋರ್ ಕುಮಾರ್‌ ಮೃತಟ್ಟಿದ್ದು, ಅವರ ಮಗನಿಗೆ ಗಂಭೀರ ಗಾಯವಾಗಿದೆ ಎಂದು ಅಲ್ಲಿನ ಅಧಿಕಾರಿಗಳಿಂದ ತಿಳಿದುಬಂದಿದೆ.

ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ವಾಚರ್ ಕಿಶೋರ್ ಕುಮಾರ್ ಮೃತಪಟ್ಟಿದ್ದು, ಅವರ ಮಗನಿಗೆ ಸೊಂಟಕ್ಕೆ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಮೇಟಿ ಕ್ಯಾಂಪ್‌ಗೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆ ದಾಳಿ ಮಾಡಿದೆ. ನಂತರ ಬೈಕ್ ಹಾಗೂ ಕಿಶೋರ್ ಕುಮಾರ್ ಅವರನ್ನು ಕಾಲಿನಿಂದ ತುಳಿದು ಹಾಕಿದೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ. ಬೈಕಿನಲ್ಲಿ ತೆರಳುವಾ ಏಕಾಏಕಿ ಕಾಡಾನೆ ಆಗಮಿಸಿ ಬೈಕ್ ಸಮೇತ ವಾಚರ್ ಅವರನ್ನು ಎತ್ತಿ ಬಿಸಾಡಿದೆ ಎನ್ನಲಾಗಿದೆ. ಯಳಂದೂರು ಮೊರಾರ್ಜಿ ಶಾಲೆಗೆ ಆಗಮನ ಕೊಟ್ಟ ಆನೆಯನ್ನು ಪಟಾಕಿ ಸಿಡಿಸಿ ಕಾಡಿಗೆ ಅಟ್ಟಿದರು.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಂದು ಮುಂಜಾನೆ ಕಾಡಾನೆಯೊಂದು ನುಗ್ಗಿ ಅವಂತಾರ ಸೃಷ್ಟಿಸಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು, ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಅಟ್ಟಿದ್ದಾರೆ‌‌.‌ ಆನೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.

A 45-year-old Forest Officer Dies Trampled By Wild Elephant

ಸಾಮಾನ್ಯವಾಗಿ ಕಾಡಿನ ಪ್ರದೇಶಗಳು ಅಂದಮೇಲೆ ಪ್ರಾಣಿಗಳ ಹಾವಳಿ ಹೆಚ್ಚಾಗಿಯೇ ಇರುತ್ತದೆ. ಇನ್ನು ಆನೆಗಳಂತೂ ರೊಚ್ಚಿಗೆದ್ದರೆ ಸಾಕು ಎದುರಿಗೆ ಯಾರೇ ಬಂದರೂ ಸುಮ್ಮನಿರುವುದಿಲ್ಲ. ಮನುಷ್ಯರನ್ನು ಅಟ್ಟಾಡಿಸಿಕೊಂಡು ಹೋದ ಹಲವಾರು ಉದಾಹರಣರಗಳು ಇವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಎಷ್ಟೇ ಎಚ್ಚರವಾಗಿದ್ದರೂ ಕೂಡ ಕೆಲವೊಮ್ಮೆ ದುರ್ಘಟನೆಗಳು ನಡೆದೇ ಹೋಗಿಬಿಡುತ್ತವೆ ಅನ್ನೋದಕ್ಕೆ ಯಳಂದೂರಿನಲ್ಲಿ ನಡೆದ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.

ಇನ್ನು ಕೆಲವೆಡೆ ಅರಣ್ಯ ಇಲಾಖೆಯವರು ಕೂಡ ಬೇಜವಾಬ್ದಾರಿ ತನದಿಂದಲೂ ಇಂತಹ ಘಟನೆಗಳು ನಡೆದುಹೋಗಿವೆ. ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಬರುವುದಕ್ಕೆ ಪ್ರಮುಖ ಕಾರಣ ಅವುಗಳಿಗೆ ಆಹಾರ ಸಿಗದೆ ಇರುವುದು. ಆಗ ಅವುಗಳು ನಾಡಿಗೆ ಲಗ್ಗೆ ಇಟ್ಟು ಇಂತಹ ಅನಾಹುತಗಳನ್ನು ಸೃಷ್ಟಿಸಿ ಮನುಷ್ಯರಿಗೆ ಅಗಾದ ನೋವುಂಟು ಮಾಡಿ ಕೊಲ್ಲುವ ಹಂತಕ್ಕೂ ಹೋಗಿಬಿಡುತ್ತವೆ.

A 45-year-old Forest Officer Dies Trampled By Wild Elephant

ಅರಣ್ಯ ಇಲಖೆ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳ ಕಡೆಗೆ ಎಚ್ಚರವಹಿಸಬೇಕು ಎನ್ನುವ ಕೂಗುಗಳು ಈಗಾಗಲೇ ಹಲವೆಡೆ ವ್ಯಕ್ತವಾಗುತ್ತಿವೆ. ಅರಣ್ಯ ಸಿಬ್ಬಂದಿಗೆ ಹೀಗೆ ತಿವಿದಿದೆ ಎಂದರೆ ಇನ್ನು ನಾಡಿನಲ್ಲಿರುವವರ ಗತಿಯೇನು ಎನ್ನುವ ಭಯವೊಂದು ಈಗ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+