Elephant Census: ಗಡಿಜಿಲ್ಲೆಯಲ್ಲಿ ಎರಡನೇ ದಿನ "ಗಜ"ಗಣತಿ-ಮಾಹಿತಿ
ಚಾಮರಾಜನಗರ, ಮೇ, 24: ಗಡಿಜಿಲ್ಲೆಯಲ್ಲಿ "ಗಜ"ಗಣತಿ ಎರಡನೇ ದಿನವೂ ಮುಂದುವರೆದಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ, ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಗಜ ಗಣತಿ ನಡೆದಿದೆ.
ಮೊದಲ ದಿನ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ (ಮೇ 24) ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.

ಪ್ರತಿ ಬೀಟ್‌ನ ಎರಡು ಕಿಲೋ ಮೀಟರ್‌ಗಳ ವ್ಯಾಪ್ತಿಯಲ್ಲಿ ಆನೆ ಹಾಕಿರುವ ಲದ್ದಿ ಪರಿಶೀಲಿಸಿ ಆನೆಯ ಗಾತ್ರ, ಮರಿಯಾನೆಯಾ, ಗುಂಪಿನಲ್ಲಿರುವ ಆನೆಗಳಾ ಎಂಬುದರ ಅಂದಾಜನ್ನು ಮಾಡಲಾಗಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‌ಗಳು, ಕಾವೇರಿ ವನ್ಯಜೀವಿಧಾಮದ 43 ಬೀಟ್‌ಗಳು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಮಂದಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಶನಿವಾರದಂದು ಅಂತ್ಯವಾಗಲಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ 3 ದಿನದಲ್ಲಿ ಕಂಡ ಆನೆಯ ಲೆಕ್ಕವನ್ನು ತುಲನಾತ್ಮಕವಾಗಿ ಪರಿಶೀಲಿಸಿ ಅಂದಾಜು ಲೆಕ್ಕವನ್ನು ಹಾಕಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮೊದಲ ದಿನ ಆನೆಗಳ ಲೆಕ್ಕ ಹಾಕಿದ ಸಿಬ್ಬಂದಿ: ನಿನ್ನೆಯಿಂದ ಗಜ ಗಣತಿ ಆರಂಭವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದರು.
ಗಜ ಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6 ತನಕ ನಡೆಯಲಿದ್ದು, ಮೊದಲ ದಿನವಾದ ಗುರುವಾರದಂದು 15 ಕಿಮೀ ನಡೆಸು ಆನೆ ಗುಂಪುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ. ಆನೆ ಗುಂಪಿನಲ್ಲಿ ಎಷ್ಟು ಹೆಣ್ಣಾನೆಗಳಿವೆ, ಎಷ್ಟು ಮರಿಗಳಿವೆ, ಗುಂಪಿನಲ್ಲಿ ಎಷ್ಟು ಆನೆಗಳಿವೆ ಎಂಬುದನ್ನು ಗುರುತು ಮಾಡಿಕೊಳ್ಳಲಾಗುತ್ತದೆ. ಪ್ರತಿ ಬೀಟ್‌ನಲ್ಲೂ ಮೂವರು ಸಿಬ್ಬಂದಿ ನಡೆದುಕೊಂಡು ಆನೆ ಗುಂಪುಗಳನ್ನು ಕಂಡು ಈ ಲೆಕ್ಕ ಹಾಕಿದ್ದಾರೆ.












Click it and Unblock the Notifications