ಸಾಮೂಹಿಕ ರಜೆ ಹೋದ ತಪ್ಪಿಗೆ ಕೆಲಸ ಕಳೆದುಕೊಂಡ 236 ಎಂಜಿನಿಯರ್‌ಗಳು

ಪುಣೆ, ಅಕ್ಟೋಬರ್ 30: ಯಾವುದೇ ಪೂರ್ವ ಮಾಹಿತಿ ನೀಡದೆ ಆರು ವಾರ ಸಾಮೂಹಿಕ ರಜೆ ತೆರಳಿದ್ದ ತನ್ನ 236 ಉದ್ಯೋಗಿಗಳನ್ನು ವಾಹನ ಬಿಡಿಭಾಗ ತಯಾರಿಕಾ ಕಂಪೆನಿ ಜೆಡ್‌ಎಫ್ ಸ್ಟೀರಿಂಗ್ ಗೇರ್ ಕೆಲಸದಿಂದ ಕಿತ್ತು ಹಾಕಿದೆ.

ಯಾವುದೇ ಸಮರ್ಪಕ ಕಾರಣ ನೀಡದೆ 2017ರ ಡಿಸೆಂಬರ್‌ 2ರಿಂದ 2018ರ ಜನವರಿ 19ರವರೆಗೆ ಸಾಮೂಹಿಕ ರಜೆ ಮೇಲೆ ತೆರಳಿದ್ದಕ್ಕಾಗಿ 236 ಎಂಜಿನಿಯರ್‌ಗಳ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಜರ್ಮನಿ ಮೂಲಕ ಜೆಡ್‌ಎಫ್ ಸ್ಟೀರಿಂಗ್ ಗೇರ್ ಕಂಪೆನಿಯು ಅಶೋಕ್ ಲೈಲ್ಯಾಂಡ್, ಟಾಟಾ ಮೋಟಾರ್ಸ್, ವೋಲ್ವೋ ಗ್ರೂಪ್, ಎಎಂಡಬ್ಲ್ಯೂ, ಮಹಿಂದ್ರಾ ಆಂಡ್ ಮಹಿಂದ್ರಾ ಸೇರಿದಂತೆ ಅನೇಕ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳಿಗೆ ಬಾಲ್ ಆಂಡ್ ನಟ್ ಇಂಟಿಗ್ರಲ್ ಹೈಡ್ರಾಲಿಕ್ ಪವರ್ ಮತ್ತು ರೋಲರ್ ಮೆಕ್ಯಾನಿಕಲ್ ಸ್ಟೀರಿಂಗ್ ಸಿಸ್ಟಂಗಳನ್ನು ಪುಣೆಯಲ್ಲಿರುವ ಘಟಕದಲ್ಲಿ ತಯಾರಿಸಿ ಪೂರೈಕೆ ಮಾಡುತ್ತದೆ.

ZF Steering Gear terminates 236 engineers for mass leave

ಉದ್ಯೋಗಿಗಳು ತೋರಿದ ಅನುಚಿತ ವರ್ತನೆಯ ವಿರುದ್ಧದ ಆರೋಪಗಳ ತನಿಖೆಗೆ ತನಿಖಾಧಿಕಾರಿಗಳನ್ನು ನೇಮಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಈ ವಿಚಾರಣಾ ಪ್ರಕ್ರಿಯೆಯು ನ್ಯಾಯಸಮ್ಮತವಾಗಿದ್ದು, ಸ್ವಾಭಾವಿಕ ನ್ಯಾಯದ ತತ್ವದ ಅಡಿಯಲ್ಲಿ ನಡೆಸಲಾಗಿದೆ. ಈ ಉದ್ಯೋಗಿಗಳು ವಿಚಾರಣೆ ವೇಳೆ ತಪ್ಪಿತಸ್ಥರು ಎಂಬುದು ಕಂಡುಬಂದಿದೆ ಎಂದು ಕಂಪೆನಿ ಹೇಳಿಕೆ ತಿಳಿಸಿದೆ.

ಈ ಉದ್ಯೋಗಿಗಳ ಜತೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಪರಿಹಾರ ದೊರಕಿಲ್ಲ. ಹೀಗಾಗಿ ಎಲ್ಲ 236 ಉದ್ಯೋಗಿಗಳನ್ನು 2018ರ ಅಕ್ಟೋಬರ್ 26/27ರಿಂದ ಅನ್ವಯವಾಗುವಂತೆ ಕೆಲಸದಿಂದ ವಜಾಗೊಳಿಸಲಾಗಿತ್ತಿದೆ. ಕಾನೂನಿನ ಅಡಿಯಲ್ಲಿ ಅವರಿಗೆ ಬಾಕಿ ಉಳಿದಿರುವ ಹಣವನ್ನು ನೀಡಲಾಗುವುದು ಎಂದು ಅದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+