ಬಾಬಾ ರಾಮ್ ದೇವ್ ಗೆ 10 ಸಾವಿರ ಕೋಟಿ ರು ಗಳಿಕೆ ಗುರಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 27: ಯೋಗ ಗುರು ಬಾಬಾ ರಾಮದೇವ್ ಪಕ್ಕಾ ಉದ್ಯಮಿ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪತಂಜಲಿ ಆಯುರ್ವೇದ ಉತ್ಪನ್ನಗಳನ್ನು ಮಾರಿ ಮುಂದಿನ ಆರ್ಥಿಕ ವರ್ಷದ ಅಂತ್ಯಕ್ಕೆ 10 ಸಾವಿರ ಕೋಟಿ ರು ಆದಾಯ ಗಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

2016ರ ಆರ್ಥಿಕ ವರ್ಷದಲ್ಲಿ 5,000 ಕೋಟಿ ರು ಗಳಿಸಿರುವ ಪತಂಜಲಿ ಸಂಸ್ಥೆ ಮುಂದಿನ ವರ್ಷ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 150ರಷ್ಟು ಪ್ರಗತಿ ಸಾಧಿಸಲಾಗಿದೆ.

Yoga guru Ramdev’s Patanjali to Double revenue to Rs 10,000 cr in 1 year

ಸಂಸ್ಕರಿತ ಆಹಾರ ಉತ್ಪನ್ನ ಕ್ಷೇತ್ರದಲ್ಲಿ ಗುಣಮಟ್ಟದ ಬಗ್ಗೆ ಅಪಸ್ವರಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಸಂಸೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ ಗುಣಮಟ್ಟಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 1,150 ಕೋಟಿ ರು ಹೂಡಿಕೆ ಮಾಡಲು ಸಂಸ್ಥೆ ಮುಂದಾಗಿದೆ.

ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರ್ಯಾಣ ಹಾಗೂ ಉತ್ತರಪ್ರದೇಶಗಳಲ್ಲಿ ಆರ್ ಅಂಡ್ ಡಿ ಕೇಂದ್ರಗಳು ಸ್ಥಾಪನೆಯಾಗುವ ನಿರೀಕ್ಷೆಯಿದೆ.


ಹೋಮ್ ಕೇರ್, ನೈಸರ್ಗಿಕ ಕಾಸ್ಮೆಟಿಕ್, ಹೆಲ್ತ್ ಕೇರ್, ನೈಸರ್ಗಿಕ ಆಹಾರ, ಪಾನೀಯ ಹಾಗೂ ಆರೋಗ್ಯ ವರ್ಧಕ ಪಾನೀಯ ಕ್ಷೇತ್ರಗಳಲ್ಲಿ ಉತ್ಪನ್ನಗಳನ್ನು ಪತಂಜಲಿ ಸಂಸ್ಥೆ ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Patanjali Ayurved, the FMCG venture promoted by yoga guru Baba Ramdev, on Tuesday said that it had clocked a turnover of Rs 5,000 crore during FY16 and aims to double it to Rs 10,000 crore during the current fiscal reports Financial Express.
Please Wait while comments are loading...