600 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ವಿಪ್ರೋ
ಸದ್ಯಕ್ಕೆ 600 ಉದ್ಯೋಗಿಗಳನ್ನು ಮಾತ್ರ ತಗೆಯಲಾಗಿದ್ದು, ಮುಂದಿನ ದಿನಗಳಲ್ಲಿ ವಿಪ್ರೋದಲ್ಲಿ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 2000ಕ್ಕೆ ಏರಬಹುದೆಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಏಪ್ರಿಲ್ 20: ದೇಶದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ಕಂಪನಿಯೆಂದು ಹೆಸರು ಗಳಿಸಿರುವ ವಿಪ್ರೋ, ತನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಮಾರು 600 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಮೂಲಗಳು ತಿಳಿಸಿವೆ.
ವಾರ್ಷಿಕವಾಗಿ ನಡೆಯುವ 'ಪರ್ಫಾಮನ್ಸ್ ಅಪ್ ರೈಸಲ್' ಪ್ರಕ್ರಿಯೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಪ್ರೋ ತಿಳಿಸಿದೆ.

ಮತ್ತೆ ಕೆಲವು ಮೂಲಗಳ ಪ್ರಕಾರ, ಸದ್ಯಕ್ಕೆ 600 ಉದ್ಯೋಗಿಗಳನ್ನು ಮಾತ್ರ ತಗೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 2000ಕ್ಕೆ ಏರಬಹುದು.
ಕಳೆದ ವರ್ಷ ಡಿಸೆಂಬರ್ ವೇಳೆಗೆ, ವಿಪ್ರೋದಲ್ಲಿ 1.79 ಲಕ್ಷ ಸಿಬ್ಬಂದಿಯಿದ್ದರು. ವರ್ಷ ವರ್ಷಕ್ಕೂ ಬದಲಾಗುವ ಕಂಪನಿಯ ಅಗತ್ಯಗಳಿಗೆ ತಕ್ಕಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.












Click it and Unblock the Notifications