ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಕಂಪನಿಗೆ ಮತ್ತೊಮ್ಮೆ 500 ಕೋಟಿ ರು ಬೆದರಿಕೆ ಇಮೇಲ್

ಪ್ರತಿಷ್ಠಿತ ಐಟಿ ಕಂಪನಿ, ಬೆಂಗಳೂರು ಮೂಲದ ವಿಪ್ರೋಗೆ ಅಜ್ಞಾತರಿಂದ ಮತ್ತೊಮ್ಮೆ ಬೆದರಿಕೆ ಇ-ಮೇಲ್ ಬಂದಿದೆ. ಬಿಟ್ ಕಾಯಿನ್ ಮೂಲಕ 500 ಕೋಟಿ ರು. ನೀಡಬೇಕೆಂದು ಒತ್ತಾಯಿಸಲಾಗಿದೆ.

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜೂನ್ 02: ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋಗೆ ಅಜ್ಞಾತರಿಂದ ಮತ್ತೊಮ್ಮೆ ಬೆದರಿಕೆ ಇ-ಮೇಲ್ ಬಂದಿದೆ. ಬಿಟ್ ಕಾಯಿನ್ ಮೂಲಕ 500 ಕೋಟಿ ರು. ನೀಡಬೇಕೆಂದು ಒತ್ತಾಯಿಸಲಾಗಿದೆ.

ಡಿಜಿಟಲ್ ವ್ಯವಹಾರಗಳಿಗಾಗಿ ಬಳಸುವ ಹಣದ ವ್ಯವಸ್ಥೆ ಬಿಟ್ ಕಾಯಿನ್ ಮೂಲಕ ಹಣ ವರ್ಗಾಯಿಸುವಂತೆ ಇಮೇಲ್ ನಲ್ಲಿ ಬರೆಯಲಾಗಿದೆ. ಈ ಹಿಂದೆ ಬಂದಿದ್ದ ಇದೇ ರೀತಿ ಇಮೇಲ್ ನಲ್ಲಿ ಮೇ 25ರ ಗಡುವು ನೀಡಲಾಗಿತ್ತು. ಬೆಂಗಳೂರಿನಲ್ಲಿರುವ ಎಲ್ಲಾ ವಿಪ್ರೋ ಕಂಪನಿಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಬಾರಿ 72 ಗಂಟೆಗಳ ಗಡುವು ನೀಡಲಾಗಿದೆ.

ಎರಡು ಬಾರಿಯೂ [email protected] ಎಂಬ ಐಡಿಯಿಂದ ಇಮೇಲ್ ಬಂದಿದೆ. ಐಪಿ ಟ್ರ್ಯಾಕ್ ಮಾಡಿದರೆ ಸ್ವಿಟ್ಜರ್ಲೆಂಡ್ ಎಂದು ತೋರಿಸುತ್ತಿದೆ.

Wipro receives threat e-mail once again seeking Rs 500 crore in bitcoin

ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಸಿಐಡಿ ಸೈಬರ್ ಐಟಿ ವಿಂಗ್ ನ ನೆರವು ಕೋರಿದ್ದಾರೆ. ಎರಡನೇ ಬಾರಿಗೆ ಬೆದರಿಕೆ ಬಂದಿರುವುದರಿಂದ ಈಗ ಇಂಟರ್ ಪೋಲ್ ನೆರವು ಪಡೆದು ಇಮೇಲ್ ಕಳಿಸಿದ ವ್ಯಕ್ತಿ ಹಾಗೂ ಸ್ಥಳವನ್ನು ಗುರುತಿಸುವ ಯತ್ನ ಮಾಡಲಾಗುವುದು ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್ , ರೂಪಾಯಿ) ಪರ್ಯಾಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿಯಾಗಿದೆ. ಎಲ್ಲವೂ ಅಂತರ್ಜಾಲದಲ್ಲೇ ವ್ಯವಹಾರ ನಡೆಯುತ್ತದೆ. ಬಿಟ್ ಕಾಯಿನ್ ಪೂರೈಸುವ ಕಂಪನಿಗೆ ಹಣ ನೀಡಿದರೆ ಆ ಕಂಪನಿಗಳು ಗ್ರಾಹಕನಿಗೆ ಅದರ ಮೌಲ್ಯದ ಕಾಯಿನ್ (ಡಿಜಿಟಲ್ ಮಾದರಿಯ) ನೀಡುತ್ತವೆ.

English summary
IT giant Wipro said that it had received a threat mail for the second time in less than a month. Security has been beefed up following the threat. In a threat e-mail, blackmailers demanded that Rs 500 crore be paid in bitcoins failing which the company may have to face 'dire consequences'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X