ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮಾಡಿದಾಗ ಜಾಣತನದಿಂದ ನಿಭಾಯಿಸುವುದು ಹೇಗೆ?

|
Google Oneindia Kannada News

ನಿರೀಕ್ಷೆಯೇ ಮಾಡಿರದ ಖರ್ಚುಗಳು ಎದುರಾಗುತ್ತಿವೆಯಾ ಮತ್ತು ಅದನ್ನು ಸಂಭಾಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದೀರಾ? ಪರ್ಸನಲ್ ಲೋನ್ ತೆಗೆದುಕೊಳ್ಳೋಣ ಅಂದುಕೊಂಡಿದ್ದು, ಅದು ನೀವಂದುಕೊಂಡಂತೆ ಸಿಗಲಿ ಅನ್ನೋದು ನಿಮ್ಮ ಮನಸ್ಸಿನ ಆಸೆಯಲ್ಲವಾ?

ಹಾಗಿದ್ದರೆ ಲೈನ್ ಆಫ್ ಕ್ರೆಡಿಟ್ ನ ಪ್ರಯತ್ನ ಪಡುವುದು ಒಳ್ಳೆ ಆಲೋಚನೆ ಆಗಲಿದೆ. ಈ ಸಾಲ ಸೌಲಭ್ಯ ನಿಮಗಾಗಿಯೇ ರೂಪಿಸಲಾಗಿದೆ. ಲೈನ್ ಆಫ್ ಕ್ರೆಡಿಟ್ ನಲ್ಲಿ ನಿಮಗೊಂದು ಸ್ವಾತಂತ್ರ್ಯ ಇದೆ. ಸಾಲದ ಒಟ್ಟು ಮೊತ್ತದಲ್ಲಿ ನಿಮಗೆಷ್ಟು ಅಗತ್ಯವಿದೆಯೋ ಮತ್ತು ಯಾವಾಗ ಅಗತ್ಯವಿದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬಹುದು.

ಲೈನ್ ಆಫ್ ಕ್ರೆಡಿಟ್ ಅಂದರೇನು?

ನೀವು ಆಯ್ದುಕೊಂಡ ಅವಧಿಗೆ ನಿರ್ದಿಷ್ಟ ಮೊತ್ತದ ಸಾಲ ಒದಗಿಸುವುದಕ್ಕೆ ಲೈನ್ ಆಫ್ ಕ್ರೆಡಿಟ್ ಅಂತಾರೆ. ನಿಮಗೆ ಬೇಕಾದಷ್ಟು ಮೊತ್ತ ಮಾತ್ರ ತೆಗೆದುಕೊಂಡು, ಅಷ್ಟಕ್ಕೆ ಮಾತ್ರ ಬಡ್ಡಿ ಪಾವತಿಸುತ್ತೀರಾ. ನೀವು ಒಟ್ಟಾರೆ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಬೇಕು ಅಂತೇನಿಲ್ಲ.

Why Should You Manage Your Expenses With A Line Of Credit?

ನಿಮಗೆ ಬೇಕೆನಿಸಿದಾಗ ಹೆಚ್ಚಿನ ಮೊತ್ತ ತೆಗೆದುಕೊಳ್ಳಬಹುದು. ಅದನ್ನು ನಿಮಗೆ ಸಾಲ ನೀಡಿದವರಿಗೆ ತಿಳಿಸಬೇಕು ಅಂತೇನಿಲ್ಲ. ನಿಮ್ಮ ಬಳಿ ಹೆಚ್ಚಿನ ಹಣ ಇದ್ದಾಗ ಸಾಲದ ಮೊತ್ತ ಅವಧಿಗೆ ಮುನ್ನವೇ ಮರುಪಾವತಿಸಬಹುದು. ಒಂದು ವೇಳೆ ಮತ್ತೆ ಹಣದ ಅಗತ್ಯ ಕಂಡುಬಂದಲ್ಲಿ ಪಾವತಿಸಿದ ಮೊತ್ತವನ್ನು ಪಡೆಯಬಹುದು.

ಈ ವಿಧಾನ ತುಂಬ ಸರಳವಾಗಿರುವುದು ಮಾತ್ರವಲ್ಲ, ವಾಪಸ್ ಪಾವತಿಸುವುದು ಕೂಡ ಅಷ್ಟೇ ಅನುಕೂಲಕರವಾಗಿದೆ- ಇಎಂಐಗಳಲ್ಲಿ ಬಡ್ಡಿಯ ಭಾಗವನ್ನು ಮಾತ್ರ ಹಾಕಲಾಗುತ್ತದೆ. ಸಾಲದ ಅಸಲು ಮೊತ್ತವನ್ನು ಮರುಪಾವತಿ ಅವಧಿಯ ಕೊನೆಯಲ್ಲಿ ನೀಡಬಹುದು.

ನಿಮ್ಮ ಕ್ರೆಡಿಟ್ ರೇಟಿಂಗ್ ಚೆನ್ನಾಗಿದ್ದು, ಪರ್ಸನಲ್ ಲೋನ್ ಅರ್ಹತಾ ಮಾನದಂಡ ಗಳನ್ನು ಪೂರೈಸಿದರೆ ಲೈನ್ ಆಫ್ ಕ್ರೆಡಿಟ್ ಅನುಕೂಲವನ್ನು ಪಡೆಯಬಹುದು. ಅದೂ ಕಡಿಮೆ ಬಡ್ಡಿ ದರದಲ್ಲಿ.

ಒಂದು ವೇಳೆ ನೀವು ಈಗಾಗಲೇ ಲೈನ್ ಆಫ್ ಕ್ರೆಡಿಟ್ ತೆಗೆದುಕೊಂಡಿದ್ದು ಮತ್ತು ಅದನ್ನು ಪರ್ಸನಲ್ ಟರ್ಮ್ ಲೋನ್ ಆಗಿ ಪರಿವರ್ತನೆ ಮಾಡಿಸಲು ಬಯಸಿದರೆ ಅದಕ್ಕೆ ಕೂಡ ಅವಕಾಶ ಇದೆ.

ಈ ಅನುಕೂಲದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಿರಿ ಮತ್ತು ಪರ್ಸನಲ್ ಫೈನಾನ್ಸ್ ವಿಚಾರಕ್ಕೆ ಬಂದರೆ ಏನೇನು ಅನುಕೂಲಗಳು ತಿಳಿದುಕೊಳ್ಳಿ.

ಹೆಚ್ಚಿನ ಓದಿಗೆ: ಲೈನ್ ಆಫ್ ಕ್ರೆಡಿಟ್ ಬಗ್ಗೆ ಸಂಪೂರ್ಣ ಮಾರ್ಗದರ್ಶಿ

ನಿಮ್ಮ ಖರ್ಚುಗಳನ್ನು ಸಂಭಾಳಿಸಲು ಲೈನ್ ಆಫ್ ಕ್ರೆಡಿಟ್ ಹೇಗೆ ಸಹಕಾರಿ?

ಈ ವ್ಯವಸ್ಥೆ ತೀರಾ ಸಲೀಸಾದದ್ದು ಮತ್ತು ಎಷ್ಟು ಸಲ ಬೇಕಾದರೂ ಡ್ರಾ ಮಾಡಬಹುದು. ಅಂದರೆ ನಿಮಗೆ ಮಂಜೂರಾದ ಸಾಲದ ಮೊತ್ತವನ್ನು ಅಗತ್ಯ ಇದ್ದಂತೆಲ್ಲ ಡ್ರಾ ಮಾಡಬಹುದು. ಅನಿರೀಕ್ಷಿತವಾಗಿ ಎದುರಾಗುವ ಹಾಗೂ ತುರ್ತು ಖರ್ಚುಗಳನ್ನು ನಿಭಾಯಿಸಲು ಸರಿಯಾದ ಸಾಲದ ಮೂಲ.

ಲೈನ್ ಆಫ್ ಕ್ರೆಡಿಟ್ ನ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ. ಇದರಿಂದ ಖರ್ಚುಗಳನ್ನು ನಿರ್ವಹಿಸಲು ನೆರವಾಗುತ್ತದೆ:

  • ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣ ವಿಥ್ ಡ್ರಾ ಮಾಡಬಹುದು: ಪ್ರತಿ ಪೈಸೆಯ ಖರ್ಚನ್ನು ನಿರೀಕ್ಷೆಯಂತೆಯೇ ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಕೆಲವು ಸಲ ಅನಿರೀಕ್ಷಿತ ತುರ್ತು ಪರಿಸ್ಥಿತಿಗೆ ಹಣ ಬೇಕಾಗುತ್ತದೆ. ಅಂಥ ಸನ್ನಿವೇಶದಲ್ಲಿ ಲೈನ್ ಆಫ್ ಕ್ರೆಡಿಟ್ ಮೂಲಕ ನಗದು ಪಡೆದು ಅನಿರೀಕ್ಷಿತ ಖರ್ಚನ್ನು ಸಂಭಾಳಿಸಬಹುದು. ನೀವು ಡ್ರಾ ಮಾಡಿದಷ್ಟೇ ಹಣಕ್ಕೆ ಬಡ್ಡಿ ಪಾವತಿಸಿದರೆ ಆಯಿತು. ನೀವು ಬಳಸದ ಮೊತ್ತಕ್ಕೆ ಬಡ್ಡಿ ಕೊಡುವ ಅಗತ್ಯ ಇಲ್ಲ. ನೀವು ಪರ್ಸನಲ್ ಲೈನ್ ಆಫ್ ಕ್ರೆಡಿಟ್ ಬಳಸುವುದಕ್ಕೆ ಯಾವುದೇ ನಿಬಂಧನೆಗಳಿಲ್ಲ: ನಿಮ್ಮ ನಿತ್ಯದ ಖರ್ಚಿಗೆ ಬಳಸಬಹುದು, ಮದುವೆ ಖರ್ಚಿಗೆ, ಕಾರಿನಂಥ ಆಸ್ತಿ ಖರೀದಿಗೆ, ನಿಮ್ಮ ಮಕ್ಕಳ ಉನ್ನತಾಭ್ಯಾಸಕ್ಕೆ, ಮನೆ ದುರಸ್ತಿಗೆ ಇತರೆ ಉದ್ದೇಶಕ್ಕೆ ಬಳಸಬಹುದು.
  • ಕಡಿಮೆ ಮೊತ್ತದ ಇಎಂಐ: ಇಎಂಐ ಅಂದರೆ ಅದರಲ್ಲಿ ಬಡ್ಡಿ ಮಾತ್ರ ಒಳಗೊಂಡಿರುತ್ತದೆ. ನಿಮ್ಮ ತಿಂಗಳ ಇಎಂಐ 45%* ಕಡಿಮೆ ಇರುತ್ತದೆ.
  • ಪ್ರತ್ಯೇಕ ಅರ್ಜಿ ಪ್ರಕ್ರಿಯೆ ಅಂತಿಲ್ಲ: ನೀವು ಪರ್ಸನಲ್ ಲೋನ್ ಪಡೆಯಲು ಅರ್ಹರಿದ್ದೀರಿ ಅಂತಾದರೆ ಈ ಅನುಕೂಲ ಪಡೆಯಲು ನೀವು ಸುಲಭವಾಗಿ ಹಾಗೂ ತಕ್ಷಣವೇ ಮನವಿ ಮಾಡಿಕೊಳ್ಳಬಹುದು. ಕಾಗದ ವ್ಯವಹಾರಗಳು ಅಂತ ದೊಡ್ಡ ನಿಯಮಾವಳಿಗಳು ಇರುವುದಿಲ್ಲ. ನೀವು ಏನು ಮಾಡಬೇಕು ಅಂದರೆ, ಸಾಲ ಪಡೆದ ಕಂಪೆನಿ ಅಥವಾ ಸಂಸ್ಥೆಗೆ ಕರೆ ಮಾಡಿ, ಲೈನ್ ಆಫ್ ಕ್ರೆಡಿಟ್ ಗೆ ಮನವಿ ಮಾಡಿದರಾಯಿತು. ಇದು ಅಷ್ಟು ಸಲೀಸಾಗಿದೆ!
  • ಭಾಗಶಃ ಮರುಪಾವತಿಗೆ ನಿಬಂಧನೆಗಳಿಲ್ಲ: ನಿಮ್ಮ ಹತ್ತಿರ ಹೆಚ್ಚಿನ ಮೊತ್ತ ಇದೆ ಎಂದಾಗ ಇಎಂಐ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಲದ ಒಟ್ಟು ಮೊತ್ತದ ಪೈಕಿ ಸ್ವಲ್ಪ ಭಾಗವನ್ನು ಮರುಪಾವತಿಸಬಹುದು. ಈ ರೀತಿ ಸ್ವಲ್ಪ ಸ್ವಲ್ಪ ಮೊತ್ತವನ್ನು ನೀವೆಷ್ಟು ಸಲ ಬೇಕಾದರೂ ಮುಂಚಿತವಾಗಿ ಪಾವತಿಸಬಹುದು. ಮುಂಚಿತವಾಗಿ ಪಾವತಿಸುವ ಮೊತ್ತಕ್ಕೆ ಯಾವುದೇ ಶುಲ್ಕ ಅಥವಾ ದಂಡ ಇರುವುದಿಲ್ಲ. ಇದರಿಂದ ಸಾಲದ ಮೂಲ ಮೊತ್ತವನ್ನು ತೀರಿಸುವುದು ತುಂಬ ಸಲೀಸಾಗಿ ಆಗುತ್ತದೆ ಮತ್ತು ನಿರಾತಂಕವಾಗಿ ಆಗುತ್ತದೆ.
  • ಆಕರ್ಷಕ ಬಡ್ಡಿ ದರ: ಇತರ ಸಾಲಗಳಂತೆಯೇ ಲೈನ್ ಆಫ್ ಕ್ರೆಡಿಟ್ ನಲ್ಲಿ ಕೂಡ ಬಡ್ಡಿ ಹಾಕಲಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಬಡ್ಡಿದರ ತೀರಾ ದುಬಾರಿಯಲ್ಲ. ನಿಮ್ಮ ಜೇಬಿನ ಮೇಲೆ ಸಾಲದ ಹೊರೆ ಅಷ್ಟಾಗಿ ಬೀಳುವುದಿಲ್ಲ.
  • ಯಾವುದೇ ಸೆಕ್ಯೂರಿಟಿ ಅಥವಾ ಜಾಮೀನು ಬೇಡ: ಈ ಸಾಲ ಪಡೆಯುವುದಕ್ಕೆ ಬೆಲೆಬಾಳುವ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿಲ್ಲ. ಆದ್ದರಿಂದ ಆಸ್ತಿಯನ್ನು ಜೋಡಣೆ ಮಾಡಿಕೊಡಬೇಕು ಅಥವಾ ಬೇರೆ ಏನಾದರೂ ಜಾಮೀನು ನೀಡಬೇಕು ಎಂಬ ಆತಂಕದ ಅಗತ್ಯವಿಲ್ಲ.
  • ಆನ್ ಲೈನ್ ಪಾವತಿ ಹಾಗೂ ವಿಥ್ ಡ್ರಾ ಅನುಕೂಲ: ಸಾಲ ಮರುಪಾವತಿಸುವಾಗ ಇಷ್ಟುದ್ದ ನಿಯಮಗಳನ್ನು ಅನುಸರಿಸಬೇಕು ಎಂದಿಲ್ಲ. ಉದಾಹರಣೆಗೆ ಚೆಕ್ ಕೊಡುವಂಥದ್ದು ಇಲ್ಲ. ಗ್ರಾಹಕರ ಪೋರ್ಟಲ್ ನಿಂದ ಆನ್ ಲೈನ್ ಮೂಲಕವೇ ಮುಂಚಿತವಾಗಿ ಪಾವತಿಸಬಹುದು. ಅದೇ ರೀತಿ ಎಷ್ಟು ಮೊತ್ತ ಬೇಕೋ ಅಷ್ಟನ್ನು ಆನ್ ಲೈನ್ ಮೂಲಕವೇ ವಿಥ್ ಡ್ರಾ ಮಾಡಬಹುದು.
  • ವಿಥ್ ಡ್ರಾಗೆ ಹೆಚ್ಚುವರಿ ಶುಲ್ಕವಿಲ್ಲ: ಸಾಲದ ಹಣ ಡ್ರಾ ಮಾಡುವುದಕ್ಕೆ ಈ ವ್ಯವಸ್ಥೆಯಲ್ಲಿ ಹೆಚ್ಚುವರಿ ಶುಲ್ಕ ಅಂತೇನೂ ಇರುವುದಿಲ್ಲ. ಪ್ರೊಸೆಸಿಂಗ್ ಫೀ ಮತ್ತು ಇತರ ಶುಲ್ಕಗಳು ಇರುವುದಿಲ್ಲ. ಇದರಿಂದ ಲೈನ್ ಆಫ್ ಕ್ರೆಡಿಟ್ ಕೈಗೆಟುಕುವಂತಿದೆ.

ನಿಮ್ಮ ಎಲ್ಲ ವೈಯಕ್ತಿಕ ಖರ್ಚುಗಳನ್ನು ಲೈನ್ ಆಫ್ ಕ್ರೆಡಿಟ್ ಮೂಲಕ ಸುಲಭವಾಗಿ ಪಾವತಿಸಿ. ಉದಾಹರಣೆಗೆ ಬಜಾಜ್ ಫೈನಾನ್ಸ್ ಸರ್ವೀಸಸ್. ಭಾರತದಲ್ಲಿ ವಿವಿಧ ರೀತಿಯ ಸಾಲಗಳನ್ನು ಕೊಡಮಾಡುವ ಬ್ಯಾಂಕಿಂಗೇತರ ಫೈನಾನ್ಸ್ ಕಂಪೆನಿ (NBFC). ಈ ಕಂಪೆನಿ ಲೈನ್ ಆಫ್ ಕ್ರೆಡಿಟ್ ನೀಡುತ್ತದೆ.

80,000 ರುಪಾಯಿಯಿಂದ 15 ಲಕ್ಷದವರೆಗೆ ಕನಿಷ್ಠ 1 ವರ್ಷದ ಅವಧಿಗೆ ದೊರೆಯುತ್ತದೆ. ನೀವು ಪರ್ಸನಲ್ ಲೈನ್ ಆಫ್ ಕ್ರೆಡಿಟ್ ಬಗ್ಗೆ ಎಲ್ಲ ಮಾಹಿತಿಯನ್ನು ಆನ್ ಲೈನ್ ನಲ್ಲಿ ನೋಡಬಹುದು.

* ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.

English summary
Are you facing unplanned expenses and wondering how to meet them? Are you considering a personal loan but wished it brought you more flexibility? It is perhaps a good idea to consider a line of credit. As a credit facility customized for you, a line of credit allows you the freedom to use a portion of the loan as you want and when you want it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X