ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ಬಗ್ಗೆ ಮಲ್ಯ ನಿರ್ಧಾರ ಏನು?

ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡದ ಮೇಲಿನ ಹಿಡಿತವನ್ನು ಉದ್ಯಮಿ ವಿಜಯ್ ಮಲ್ಯ ಕಳೆದುಕೊಂಡಿದ್ದಾರೆ ಎಂಬ ಮಾತಿಗೆ ಸ್ವಲ್ಪ ವ್ಯತಿರಿಕ್ತ ಎನಿಸುವ ಹೇಳಿಕೆಯೊಂದನ್ನು ಮಲ್ಯ ಆಪ್ತ ಬಾಬ್ ಫೆರ್ನ್ ಲೇ ನೀಡಿದ್ದಾರೆ. ತಂಡದ ಭವಿಷ್ಯದ ಬಗ್ಗೆ ಈಗಲೂ ಅವರು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2007ರಲ್ಲಿ ಖರೀದಿ ಮಾಡಿದ ಫಾರ್ಮುಲಾ ಒನ್ ತಂಡದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಈಗಲೂ ವಿಜಯ್ ಮಲ್ಯ ಉತ್ತಮ ನಿರ್ಧಾರ ಕೈಗೊಳ್ಳಬಹುದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಕೋರ್ಟ್ ನಿಂದ ನೇಮಕ ಮಾಡಿರುವ ಆಡಳಿತಾಧಿಕಾರಿ ಈಚೆಗಷ್ಟೇ ಹುದ್ದೆ ಸ್ವೀಕರಿಸಿದ್ದರು.

ಮಲ್ಯರ ಫಾರ್ಮುಲಾ ಒನ್ ಸಾಹಸ ಇನ್ನೇನು ಕೊನೆಯಾಗಲಿದೆಯೇ ಎಂಬ ಪ್ರಶ್ನೆಗೆ, ನನಗೆ ಗೊತ್ತಿಲ್ಲ, ಇನ್ನಷ್ಟು ಕಾಲ ಮುಂದುವರಿಯಬಹುದು ಎಂದು ಫೆರ್ನ್ ಲೇ ಉತ್ತರಿಸಿದ್ದಾರೆ. ಅಂದ ಹಾಗೆ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ಗೆ ಆರ್ಥಿಕ ಸಂಕಷ್ಟದ ವೇಳೆ ಮರ್ಸಿಡಿಸ್ ಸೇರಿದಂತೆ ವಿವಿಧ ಕಂಪೆನಿಗಳು ನೆರವಾಗಿವೆ. ಜತೆಗೆ ಫೋರ್ಸ್ ಇಂಡಿಯಾದ ನಾನೂರು ಮಂದಿ ಉದ್ಯೋಗ ಹಾಗೂ ಭವಿಷ್ಯದ ವಿಷಯ ಇದಾಗಿದೆ.

What next move by Vijay Mallya about his F1 Team?

ತಂಡದ ಭವಿಷ್ಯದ ಬಗ್ಗೆ ಆಡಳಿತಾಧಿಕಾರಿ ಜತೆಗೆ ಮಲ್ಯ ಅವರು ನೇರವಾಗಿ ಚರ್ಚಿಸಬಹುದು. ತಂಡದ ಬೆಂಬಲಕ್ಕೆ ವಿಜಯ್ ಮಲ್ಯ ಖಂಡಿತಾ ನಿಲ್ಲುತ್ತಾರೆ. ಮತ್ತು ಈ ವ್ಯವಹಾರ ಅಂದರೆ ಅದೇ ಬಹಳ ದೊಡ್ಡ ಮೊತ್ತ ಮಲ್ಯ ಪಾಲಿಗೆ. ಈ ಸಂದರ್ಭದಲ್ಲಿ ಅವರ ಹಿಡಿತ ತಪ್ಪಿರಬಹುದು. ಆದರೆ ಅವರೇ ಅದರ ಮುಖ್ಯ ಭಾಗೀದಾರರು ಆದ್ದರಿಂದ ಸರಿಯಾದವರ ಕೈಗೆ ದಾಟಿಸುವ ಬಗ್ಗೆ ಯೋಚನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಸಿಲ್ವರ್ ಸ್ಟೋನ್ ಮೂಲದ ತಂಡದಲ್ಲಿ ಮಲ್ಯ 42.5% ಪಾಲು ಹೊಂದಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಸಹರಾ ಗುಂಪು ಹಾಗೂ ಬಾಕಿ ಪಾಲು ಡಚ್ ಉದ್ಯಮಿ ಮೈಕೆಲ್ ಮೊಲ್ ಬಳಿಯಿದೆ.

ವಿಜಯ್ ಮಲ್ಯರನ್ನು ತಂಡದ ಒಡೆತನದಿಂದ ತೆಗೆದುಹಾಕಲು ನಡೆಸುತ್ತಿರುವ ಷಡ್ಯಂತ್ರವೇ ಇದು ಎಂಬ ಪ್ರಶ್ನೆಗೆ ಫೆರ್ನ್ ಲೇ, ನಿಮಗೆ ತಿಳಿಸುವಷ್ಟು ಮಾಹಿತಿ ನನ್ನ ಬಳಿ ಇಲ್ಲ. ನನ್ನ ದೃಷ್ಟಿಯಲ್ಲಿ ಇದು ಅನಿರೀಕ್ಷಿತ ನಡೆ. ಇದನ್ನು ವಿಜಯ್ ಮಲ್ಯ ಕೂಡ ನಿರೀಕ್ಷಿಸಿರಲಿಲ್ಲ ಎಂದು ಆಡಳಿತಾಧಿಕಾರಿ ನೇಮಕದ ಬಗ್ಗೆ ಉತ್ತರಿಸಿದ್ದಾರೆ.

ಮರ್ಸಿಡಿಸ್ ನಿಂದ ತಂಡ ಖರೀದಿಗೆ ಆಸಕ್ತಿ ವ್ಯಕ್ತವಾಗಿದೆ. ಇದೇ ರೀತಿ ಐವರು ಆಸಕ್ತರು ಇದ್ದಾರೆ. ಆದರೆ ಮುಂದಿನ ವ್ಯವಹಾರ ಹೇಗೆ ನಡೆಸಬೇಕು ಎಂಬ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲ ಇದೆ. ಏಕೆಂದರೆ ಕೋರ್ಟ್ ಆದೇಶದ ಅನ್ವಯ ವಿಜಯ್ ಮಲ್ಯ ಭಾರತದಲ್ಲಿರುವ ತಮ್ಮ ಆಸ್ತಿಗಳನ್ನು ಮಾರುವಂತಿಲ್ಲ. ಇನ್ನು ಬ್ರಿಟನ್ ನಿಂದ ಭಾರತಕ್ಕೆ ಮಲ್ಯರನ್ನು ಹಸ್ತಾಂತರಿಸುವಂತೆ ಕೋರಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ.

ವಿಜಯ್ ಮಲ್ಯ ಮೇಲೆ ವಂಚನೆ ಆರೋಪಗಳಿದ್ದು, ಅವುಗಳನ್ನು ಅವರು ನಿರಾಕರಿಸುತ್ತಲೇ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+