ಪಿವಿಆರ್, ಐನಾಕ್ಸ್ ಗೆ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಲಾಭವೆಷ್ಟು?

ಮುಂಬೈ, ಜುಲೈ 16: ಮಹಾರಾಷ್ಟ್ರ ಸರಕಾರದ ಆದೇಶವು ಮಲ್ಟಿಪ್ಲೆಕ್ಸ್ ಗಳಿಗೆ ಸರಿಯಾದ ಹೊಡೆತ ಕೊಡಲಿದೆ ಎಂಬ ಆತಂಕ ಶುರುವಾಗಿದೆ. ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಕೂಡ ಮಲ್ಟಿಪ್ಲೆಕ್ಸ್ ಗಳೊಳಗೆ ತೆಗೆದುಕೊಂಡು ಹೋಗಬಹುದು ಅಂತ ಮೊನ್ನೆ ನಿಯಮ ಜಾರಿಗೆ ತರುವ ಆಲೋಚನೆ ಇದೆ ಎಂಬ ಘೋಷಣೆ ಮಾಡಿದ ಮೇಲೆ ಪ್ರಮುಖ ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಗುನ್ನ ಬೀಳಲಿದೆ ಎಂಬ ಆತಂಕ ಶುರುವಾಗಿದೆ.

ಇಲ್ಲಿ ಉದಾಹರಣೆ ಸಮೇತ ವಿವರಣೆ ಇದೆ ಗಮನಿಸಿ. ಪಿವಿಆರ್ ನ ಒಟ್ಟು ಲಾಭ 2,265.43 ಕೋಟಿಯಾದರೆ, ಅದರಲ್ಲಿ ಆಹಾರ ಮತ್ತು ಪಾನೀಯದ ಮಾರಾಟದಿಂದ ಬರುವ ಲಾಭ 607.7 ಕೋಟಿ. ಅಂದರೆ ಒಟ್ಟು ಲಾಭದ ಶೇ 26.8ರಷ್ಟು ಆದಾಯ ಬರುವುದು ಆಹಾರ ಮತ್ತು ಪಾನೀಯ ಮಾರಾಟದಿಂದ.

ಇನ್ನು ಐನಾಕ್ಸ್ ಲೀಷರ್ ಗೆ ಆಹಾರ ಮತ್ತು ಪಾನೀಯ ಮಾರಾಟದಿಂದ 306 ಕೋಟಿ ಬರುತ್ತದೆ. ಐನಾಕ್ಸ್ ನ ಒಟ್ಟಾರೆ ಆದಾಯ 1348.1 ಕೋಟಿ ರುಪಾಯಿ. ಅಲ್ಲಿಗೆ ಶೇ 22.7ರಷ್ಟು ಲಾಭವನ್ನು ಆಹಾರ ಮತ್ತು ಪಾನೀಯ ಮಾರಾಟವೇ ತಂದುಕೊಡುತ್ತದೆ. ಈ ಅಂಕಿಯು 2018ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದು.

ದೊಡ್ಡ ಮಟ್ಟದ ಆದಾಯಕ್ಕೆ ಗುನ್ನ

ದೊಡ್ಡ ಮಟ್ಟದ ಆದಾಯಕ್ಕೆ ಗುನ್ನ

ಯಾವಾಗ ಮಹಾರಾಷ್ಟ್ರ ಸರಕಾರ ಹೊಸ ನಿಯಮ ಮಾಡುವ ಸೂಚನೆ ನೀಡಿತೋ ಶುಕ್ರವಾರದಂದು ಷೇರು ಮಾರುಕಟ್ಟೆಯಲ್ಲಿ ಪಿವಿಆರ್ ಷೇರು ಶೇ 13ರಷ್ಟು ಹಾಗೂ ಐನಾಕ್ಸ್ ನ ಷೇರು ಶೇ 5.4ರಷ್ಟು ಕುಸಿತ ಕಂಡಿವೆ. ಹೀಗೆ ಷೇರು ಮೌಲ್ಯ ಕುಸಿತ ಕಾಣುವುದಕ್ಕೆ ಇನ್ನೂ ಒಂದು ಕಾರಣ ಇದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಎಂಆರ್ ಪಿ (ಗರಿಷ್ಠ ಮಾರಾಟ ಬೆಲೆ)ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು ಎಂದು ಮಹಾರಾಷ್ಟ್ರದ ಸಚಿವ ರವೀಂದ್ರ ಚವಾಣ್ ಹೇಳಿದ್ದಾರೆ. ಇದು ಕೂಡ ಜಾರಿಯಾಗಿಬಿಟ್ಟರೆ ಆಹಾರ-ಪಾನೀಯಗಳ ಮಾರಾಟದಿಂದ ಮಲ್ಟಿಪ್ಲೆಕ್ಸ್ ಗಳಿಗೆ ಬರುತ್ತಿರುವ ದೊಡ್ಡ ಪ್ರಮಾಣದ ಆದಾಯ ಹಳ್ಳ ಹಿಡಿಯುತ್ತದೆ. ಏಕೆಂದರೆ ಪಿವಿಆರ್, ಐನಾಕ್ಸ್ ಗೆ ಬರುತ್ತಿರುವ ಎರಡನೇ ಅತಿ ದೊಡ್ಡ ಆದಾಯ ಮೂಲ ಆಹಾರ-ಪಾನೀಯ ಮಾರಾಟ.

ಕನಿಷ್ಠ ಶೇ 20ರಷ್ಟು ಲಾಭಕ್ಕೆ ಹೊಡೆತ

ಕನಿಷ್ಠ ಶೇ 20ರಷ್ಟು ಲಾಭಕ್ಕೆ ಹೊಡೆತ

ದೇಶದಲ್ಲಿ 625 ಸ್ಕ್ರೀನ್ ಗಳು ಪಿವಿಆರ್ ನದು ಇದ್ದು, ಅದರಲ್ಲಿ 157 ಸ್ಕ್ರೀನ್ ಮಹಾರಾಷ್ಟ್ರದಲ್ಲಿದೆ. ಇನ್ನು ಐನಾಕ್ಸ್ ದು ಮಹಾರಾಷ್ಟ್ರದಲ್ಲಿ 118 ಸ್ಕ್ರೀನ್ ಇದ್ದು, ದೇಶದಲ್ಲಿ ಒಟ್ಟಾರೆ 492 ಸ್ಕ್ರೀನ್ ಇದೆ. ಒಂದು ವೇಳೆ ಹೊಸದಾಗಿ ನಿಯಮ ಜಾರಿ ಆಗಿಬಿಟ್ಟರೆ ಲಾಭದ ಪ್ರಮಾಣವು ಕನಿಷ್ಠ ಶೇ 20ರಷ್ಟು ಬಿದ್ದು ಹೋಗುತ್ತದೆ. ಅದನ್ನು ಸರಿ ಮಾಡಿಕೊಳ್ಳಲು ಟಿಕೆಟ್ ಬೆಲೆ ಏರಿಸಿದರೆ ವೀಕ್ಷಕರ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ.

ಮುಂಬೈ ಕೋರ್ಟ್ ನಲ್ಲಿ ಹಾಕಿದ್ದ ಪಿಐಎಲ್ ಪರಿಣಾಮ

ಮುಂಬೈ ಕೋರ್ಟ್ ನಲ್ಲಿ ಹಾಕಿದ್ದ ಪಿಐಎಲ್ ಪರಿಣಾಮ

ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆಯ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ಅವಕಾಶ ನೀಡದೆ, ದುಬಾರಿ ಬೆಲೆ ವಸೂಲಿ ಮಾಡಲಾಗುತ್ತಿದೆ ಎಂದು ಮುಂಬೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಅದರ ಹಿನ್ನೆಲೆಯಲ್ಲಿ ಕೋರ್ಟ್ ನೀಡಿದ ನಿರ್ದೇಶನದ ಅನುಸಾರ ಮಹಾರಾಷ್ಟ್ರ ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಕೋರ್ಟ್ ನಲ್ಲಿ ಮುಂದಿನ ವಿಚಾರಣೆ ಜುಲೈ ಇಪ್ಪತ್ತೈದಕ್ಕೆ ಇದೆ.

ಪಾಪ್ ಕಾರ್ನ್ ನ ನ್ಯಾಯಯುತವಾದ ಬೆಲೆ ಎಷ್ಟು?

ಪಾಪ್ ಕಾರ್ನ್ ನ ನ್ಯಾಯಯುತವಾದ ಬೆಲೆ ಎಷ್ಟು?

ಮಹಾರಾಷ್ಟ್ರ ಸರಕಾರದ ಈ ತೀರ್ಮಾನವು ದೇಶದ ಇತರ ರಾಜ್ಯಗಳಲ್ಲೂ ದೊಡ್ಡ ಮಟ್ಟದ ಸದ್ದು ಮಾಡುವ ಸಾಧ್ಯತೆ ಇದೆ. ಅಂತಿಮವಾಗಿ ಒಂದು ಪಾಕೆಟ್ ಪಾಪ್ ಕಾರ್ನ್ ನ ನ್ಯಾಯವಾದ ಬೆಲೆ ಎಷ್ಟು ಎಂಬುದನ್ನು ಯಾರು ತೀರ್ಮಾನಿಸುತ್ತಾರೆ ಎಂಬುದು ಕೂಡ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+