ಮೊಬಿಕ್ವಿಕ್ ವ್ಯಾಲೆಟ್ ಅಂದ್ರೇನು, ರಿಚಾರ್ಜ್, ಹಣ ವರ್ಗಾವಣೆ ಹೇಗೆ?

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 07 : 'ದೇಶ್ ಕಾ ವ್ಯಾಲೆಟ್' ಮೊಬಿಕ್ವಿಕ್ ವ್ಯಾಲೆಟ್ ನ್ನು ಬಳಸಿ ಕೈಯಲ್ಲಿ ಹಣವಿಲ್ಲದೆ ಎಲ್ಲಾದರೂ ಸಂಚರಿಸಿ, ಏನಾದರೂ ಖರೀದಿಸಿ.

ಮೊಬಿಕ್ವಿಕ್ ಕೂಪನ್ಸ್ ನೊಂದಿಗೆ, ರೀಜಾರ್ಚ್, ಬಿಲ್ ಪಾವತಿ ಮಾಡಲು ಇಲ್ಲಿ ಕ್ಲಿಕ್ಕಿಸಿ

ಹಾಗಿದ್ರೆ ಈ ಮೊಬಿಕ್ವಿಕ್ ಏನು? ಇದು ಹೇಗೆ ಕೆಲಸ ಮಾಡುತ್ತದೆ? ಮೊಬಿಕ್ವಿಕ್ ಖಾತೆಯನ್ನು ಹೊಂದಲು ಏನು ಮಾಡಬೇಕು? ಎನ್ನುವ ಕುತೂಹಲ ನಿಮ್ಮಲ್ಲಿದ್ದರೇ ಸಂಪೂರ್ಣ ವಿವರ ತಿಳಿಯಲು ಮುಂದೆ ಓದಿ. [ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?]

What is Mobikwik Wallet? How To Transfer Money, Recharge Mobile, Book Bus Tickets Via Mobikwik

ಮೊಬಿಕ್ವಿಕ್ ವ್ಯಾಲೆಟ್ ಅಂದ್ರೇನು? ಅದನ್ನು ಹೇಗೆ ಉಯೋಗಿಸಬೇಕು?
* ಮೊಬಿಕ್ವಿಕ್ ವ್ಯಾಲೆಟ್ ಎನ್ನುವುದು ಆನ್ ಲೈನ್ ಪೇಮೆಂಟ್ ವ್ಯಾಲೆಟ್ ಸಿಸ್ಟಮ್ ಆಗಿದ್ದು. ಮೊದಲಿಗೆ ಇದಕ್ಕೆ ಲಾಗ್ ಇನ್ ಆಗಿ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬಿಕ್ವಿಕ್ ವ್ಯಾಲೆಟ್ ಗೆ ಹಣ ಜಮೆ ಮಾಡಬೇಕು.
* ಹಣ ನಿಮ್ಮ ಮೊಬಿಕ್ವಿಕ್ ವ್ಯಾಲೆಟ್ ಗೆ ಹಣ ಜಮವಾದ ನಂತರ ಮೊಬೈಲ್ ಮೂಲಕ ಡಿಟಿಎಚ್, ಇಂಟರ್ನೆಟ್ ರಿಚಾರ್ಜ್, ವಿದ್ಯುತ್ ಬಿಲ್ ಮತ್ತಿತರ ಬಿಲ್ ಹಣವನ್ನು ವರ್ಗಾವಣೆ ಮಾಡಬಹುದು.
* ಮೇಲಿನ ಬಿಲ್ ಪಾವತಿಸಲು ಜೇಬಿನಲ್ಲಿ ಹಣ ಇರಬೇಕೆಂದೇನಿಲ್ಲ. ಮೊಬಿಕ್ವಿಕ್ ವ್ಯಾಲೆಟ್ ಮುಖಾಂತರ ಮೇಲಿನ ಎಲ್ಲಾ ಬಿಲ್ ಗಳನ್ನು ಪಾವತಿಸಬಹುದು.

ಏಕೆ ಮೊಬಿಕ್ವಿಕ್ ವ್ಯಾಲೆಟ್ ಆಯ್ಕೆ ಮಾಡಬೇಕು?
* ಮೊಬಿಕ್ವಿಕ್ ವ್ಯಾಲೆಟ್ ಸುರಕ್ಷಿತ ಪಾವತಿ ವ್ಯವಸ್ಥೆ ಇದಾಗಿದ್ದು. ಇದರೊಂದಿಗೆ ಮೊಬೈಲ್ ರಿಚಾರ್ಜ್, ಹಣ ವರ್ಗಾವಣೆ ಸೇರಿದಂತೆ ಅನೇಕ ಹಣ ಪಾವತಿಗಳಿಗೆ ಇದನ್ನು ಬಳಸಬಹುದಾಗಿದೆ.
* ಈ ಮೊಬಿಕ್ವಿಕ್ ವ್ಯಾಲೆಟ್ ಭಾರತದ ತ್ವರಿತ ಮತ್ತು ಅತ್ಯಂತ ಅನುಕೂಲಕರ ವ್ಯಾಲೆಟ್ ಆಗಿದೆ.
* ಮೊಬಿಕ್ವಿಕ್ ವ್ಯಾಲೆಟ್ ನ್ನು ಈಗಾಗಲೇ ದೇಶದಾದ್ಯಂತ 25 ಮಿಲಿಯನ್ ಉಪಯೋಸಗಿಸುತ್ತಿದ್ದಾರೆ.

ನಿಮ್ಮ ಹಣವನ್ನು ಮೊಬಿಕ್ವಿಕ್ ವ್ಯಾಲೆಟ್ ಸೇರಿಸುವುದು ಹೇಗೆ?
* ನಿಮ್ಮ ಹಣವನ್ನು ಈ ಮೊಬಿಕ್ವಿಕ್ ವ್ಯಾಲೆಟ್ ಸೇರಿಸುವುದು ತುಂಬ ಸುಲಭವಾಗಿದ್ದು. ಮೊದಲಿಗೆ ನೀವು ಮೊಬಿಕ್ವಿಕ್ ವ್ಯಾಲೆಟ್ ಗೆ ಲಾಗ್ ಅಥವಾ ಆಗಬೇಕು ಇಲ್ಲ ಸೈನ್ ಇನ್ ಆಗಬೇಕು.
* ನಂತರ Add Money ಎನ್ನುವ ಬಟನ್ ಮೇಲೆ ಕ್ಲಿಕ್ಕಿಸಿ. ನಂತರ ಪಾವತಿ ಆಯ್ಕೆಗಳು ಪುಟ(Payment Options page) ತೆರೆದುಕೊಳ್ಳತ್ತದೆ.
* ಅಲ್ಲಿ ನೀವು ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕೆಡಿಟ್ ಕಾರ್ಡ್ ಮೂಲಕ ಹಣವನ್ನು ಈ ಮೊಬಿಕ್ವಿಕ್ ವ್ಯಾಲೆಟ್ ಗೆ ವರ್ಗಾವಣೆ ಮಾಡಿಕೊಳ್ಳಬೇಕು.

ಮೊಬಿಕ್ವಿಕ್ ವ್ಯಾಲೆಟ್ ಮೂಲಕ ಹಣ ವರ್ಗಾವಣೆ ಮಾಡುವುದು ಹೇಗೆ?
* ಮೊಬಿಕ್ವಿಕ್ ವ್ಯಾಲೆಟ್ ಗೆ ಲಾಗ್ ಇನ್ ಆಗಿ.
* Transfer Money Option ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
* Wallet to Bank Transfer ಆಯ್ಕೆ ಮಾಡಿಕೊಳ್ಳಿ.
* ನಂತರ ಬ್ಯಾಂಕ್ ವಿವರಗಳು ಮತ್ತು ಹಣವನ್ನು ನಮೂದಿಸಬೇಕು (Beneficiary ಯಲ್ಲಿ).
* ಎಲ್ಲಾ ಮುಗಿದ ನಂತರ Send money Option ಕ್ಲಿಕ್ ಮಾಡಿ.
* Send money ಕ್ಲಿಕ್ ಮಾಡಿದ ನಂತರ ನೀವು ಕೊಟ್ಟಿರುವ ಮೊಬೈಲ್ ಗೆ OTP ಕೋಡ್ ಬರುತ್ತದೆ.
* ಬಂದ OTP ಕೋಡ್ ನ್ನು ಅಲ್ಲಿ ನಮೂದಿಸಿದರೆ ನೀವು ನಮೂದಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
what is this Mobikwik wallet? How does it work? How to have a Mobikwik account? Are there any registration fees? lets get to know in detail.
Please Wait while comments are loading...