ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ದೊಡ್ಡ ಡೀಲ್ : ವಾಲ್ಮಾರ್ಟ್ ಪಾಲಾದ ಬೆಂಗಳೂರಿನ ಫ್ಲಿಪ್ ಕಾರ್ಟ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮೇ 09: ಇ ಕಾಮರ್ಸ್ ಕ್ಷೇತ್ರದ ಬಹುದೊಡ್ಡ ಡೀಲ್ ಕೊನೆಗೂ ಖಚಿತವಾಗಿದೆ. ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸರಿ ಸುಮಾರು 16 ಬಿಲಿಯನ್ ಯುಎಸ್ ಡಾಲರ್ ನೀಡಿ, ಅಮೆರಿಕದ ವಾಲ್ ಮಾರ್ಟ್ ಸಂಸ್ಥೆ ಖರೀದಿಸಿದೆ.

  ದೇಶದ ಅತಿದೊಡ್ಡ ಇ-ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಖರೀದಿಯ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಒಪ್ಪಂದ ಆಗಿದೆ ಎಂದು ಸಾಫ್ಟ್‌ಬ್ಯಾಂಕ್ ಸಿಇಒ ಮಸಯೋಶಿ ಸನ್‌ ಹೇಳಿದ್ದಾರೆ. ಖರೀದಿ ಮೌಲ್ಯ 16 ಬಿಲಿಯನ್ ಡಾಲರ್ ನಿಂದ 20 ಬಿಲಿಯನ್ ಡಾಲರ್ ಗೇರಬಹುದು.

  ಫ್ಲಿಪ್ ಕಾರ್ಟ್ ನಲ್ಲಿ 13,341 ಕೋಟಿ ರೂ. ಹೂಡಿಕೆಗೆ ಮುಂದಾದ ಅಮೆಜಾನ್

  ಉಳಿದ ಶೇ 23 ಪಾಲುದಾರಿಕೆಯನ್ನು ಫ್ಲಿಪ್‌ಕಾರ್ಟ್‌ನ ಷೇರುದಾರರು, ಸಂಸ್ಥೆಯ ಸಹ-ಸಂಸ್ಥಾಪಕ ಬಿನ್ನಿ ಬನ್ಸಲ್‌, ಚೀನಾದ ಟೆನ್‌ಸೆಂಟ್‌, ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಮೈಕ್ರೊಸಾಫ್ಟ್ ಕಾರ್ಪೊರೇಷನ್‌ ಪಡೆಯಲಿದೆ ಎಂದು ವಾಲ್‌ಮಾರ್ಟ್‌ ಇಂಡಿಯಾದ ಅಧ್ಯಕ್ಷ ಕ್ರಿಷ್‌ ಅಯ್ಯರ್‌ ಹೇಳಿದರು. ಫ್ಲಿಪ್ ಕಾರ್ಟ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಸ್ಥೆಯ ವಾಣಿಜ್ಯ ಚಟುವಟಿಕೆಯ ಜವಾಬ್ದಾರಿಯನ್ನು ಅಯ್ಯರ್ ವಹಿಸಿಕೊಳ್ಳಲಿದ್ದಾರೆ.

  Walmart buys major stake in Flipkart a 16 USD buy deal

  ಈ ಒಪ್ಪಂದದ ಬಳಿಕ ಅಮೆರಿಕದ ರೀಟೈಲ್ ಕ್ಷೇತ್ರದ ದಿಗ್ಗಜ ವಾಲ್ ಮಾರ್ಟ್ ಸುಮಾರು 2 ಬಿಲಿಯನ್ ಡಾಲರ್ (ಸುಮಾರು 13000 ಕೋಟಿ ರು) ಈಕ್ವಿಟಿಯನ್ನು ಫ್ಲಿಪ್ ಕಾರ್ಟಿಗೆ ಸೇರಿಸಿ ಇಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ.

  ಫ್ಲಿಪ್ ಕಾರ್ಟಿನ ಸಹ ಸ್ಥಾಪಕ, ಹಾಲಿ ಸಿಇಒ ಸಚಿನ್ ಬನ್ಸಾಲ್ ಅವರು 9ವರ್ಷಗಳ ಬಳಿಕ ಸಿಇಒ ಹುದ್ದೆ ತೊರೆಯಲಿದ್ದಾರೆ. ತಮ್ಮ ಬಳಿಯಿದ್ದ 5.5 % ಷೇರುಗಳನ್ನು ವಾಲ್ ಮಾರ್ಟ್ ಗೆ ಮಾರಿದ್ದಾರೆ.

  ಆದರೆ, ಮತ್ತೊಬ್ಬ ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಮೂಹ ಸಂಸ್ಥೆ ಸಿಇಒ ಆಗಿ ಮುಂದುವರೆಯಲಿದ್ದಾರೆ. ಕಾರ್ಯಕಾರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Walmart has wrapped up Flipkart acquisition for $16 billion, a valuation of over $20 billion, which makes it the world's biggest ecommerce deal. Walmart will own around 77% of the Bengaluru-based company in what is also being seen as the largest buyout for the US firm.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more