'ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಂಚಿರುವ ಮಲ್ಯ'
ನವದೆಹಲಿ, ಜನವರಿ 11: ನಮ್ಮ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ಅವರು ಸರಿ ಸುಮಾರು 40 ಮಿಲಿಯನ್ ಡಾಲರ್ ಮೊತ್ತವನ್ನು ತಮ್ಮ ಮಕ್ಕಳಿಗೆ ಕಾನೂನು ಬಾಹಿರವಾಗಿ ಹಂಚಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ಬುಧವಾರ ಬ್ಯಾಂಕುಗಳ ಒಕ್ಕೂಟ ಮಾಹಿತಿ ನೀಡಿದೆ.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಮಲ್ಯ ಅವರು ಬ್ಯಾಂಕುಗಳಿಗೆ ಹಿಂತಿರುಗಿಸಬೇಕಿದ್ದ ಮೊತ್ತವನ್ನು ಮಕ್ಕಳಿಗೆ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಉತ್ತರ ನೀಡಲು ಮಲ್ಯರಿಗೆ ಫೆಬ್ರವರಿ 02ರ ತನಕ ಗಡುವು ನೀಡಲಾಗಿದೆ.

ಡಿಯಾಜಿಯೋ ಸಂಸ್ಥೆಯಿಂದ ಗಳಿಸಿದ 40 ಮಿಲಿಯನ್ ಡಾಲರ್ ಮೊತ್ತವನ್ನು ಬ್ಯಾಂಕುಗಳ ಸಾಲ ತೀರಿಸಲು ಬಳಸದೆ ಮಕ್ಕಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು 9 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಮಲ್ಯ ವಿರುದ್ಧ ಆರೋಪ ಮಾಡಲಾಗಿದೆ.












Click it and Unblock the Notifications