600 ಕೋಟಿ ಕಟ್ಟದ ಮಲ್ಯ ಕೋರ್ಟ್ ಕಟಕಟೆಗೆ
ಮುಂಬೈ, ಸೆ. 16: ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆ ಹಾಗೂ ಯುಬಿ ಸಮೂಹದ ಒಡೆಯ ವಿಜಯ್ ಮಲ್ಯ ಅವರು ಮಂಗಳವಾರ ಖುದ್ದು ಕಟಕಟೆಯಲ್ಲಿ ಹಾಜರಿರತಕ್ಕದ್ದು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಕೋರ್ಟ್ ಆದೇಶದಂತೆ ಮಂಗಳವಾರ(ಸೆ.17) ವಿಚಾರಣೆಗೆ ಹಾಜರಿರಬೇಕಿದೆ.
ಯುಬಿ ಸಮೂಹಗೆ ಸಾಲ ಕೊಟ್ಟಿರುವ ಆರು ಸಂಸ್ಥೆಗಳು ಕೋರ್ಟಿನಲ್ಲಿ ದಾವೆ ಹೂಡಿದ್ದು ಪ್ರಕರಣದ ವಿಚಾರಣೆ ಸೋಮವಾರ ನಡೆಸಲಾಯಿತು. ಯುಬಿ ಸಮೂಹ ಸಂಸ್ಥೆ ಮಾಲೀಕ ವಿಜಯ್ ಮಲ್ಯ ಅವರು ಪಾಸ್ ಪೋರ್ಟ್ ಸಮೇತ ನಾಳೆ ಕೋರ್ಟಿಗೆ ಹಾಜರಾಗಬೇಕು ಎಂದು ಕೋರ್ಟ್ ಆದೇಶಿದೆ.
ಡಿಯಾಜಿಯೋ ಸಂಸ್ಥೆ ಜತೆ ಆಗಿರುವ ಒಪ್ಪಂದ, ಷೇರು ಮಾರಾಟ ವರದಿಯನ್ನು ಯುಬಿ ಹೋಲ್ಡಿಂಗ್ಸ್ ಸಂಸ್ಥೆ ಕೋರ್ಟಿಗೆ ಸಲ್ಲಿಸುವಲ್ಲಿ ವಿಫಲವಾಗಿತ್ತು. ಯುನೈಟೆಡ್ ಸ್ಪಿರಿಟ್ಸ್ ನ ಷೇರುಗಳನ್ನು ಡಿಯಾಜಿಯೋಗೆ ಮಾರಾಟ ಮಾಡಲಾಗಿದೆ.
ಇದಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡಾ ಒಪ್ಪಿಗೆ ಸೂಚಿಸಿ 250 ಕೋಟಿ ರು ಗ್ಯಾರಂಟಿ ಮೊತ್ತ ಪಾವತಿಸುವಂತೆ ಯುಬಿ ಸಮೂಹಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಗ್ಯಾರಂಟಿ ಮೊತ್ತ ಸಲ್ಲಿಸಿದ್ದ ಯುಬಿ ಸಮೂಹ, ಅರ್ಜಿದಾರರ ಬಾಕಿ ಮೊತ್ತ ಪಾವತಿಸುವಲ್ಲಿ ವಿಫಲವಾಗಿತ್ತು.
ಅರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಲದ ಹೊರೆ ತಾಳಲಾರದೆ ಸಂಸ್ಥೆಯ ಸಿಬ್ಬಂದಿ,ಬ್ಯಾಂಕ್ ಹಾಗೂ ತೆರಿಗೆ ಇಲಾಖೆಯನ್ನು ದೂಷಿಸುತ್ತಿದ್ದ ಕಿಂಗ್ ಕೊನೆಗೂ ತಪ್ಪೊಪ್ಪಿಕೊಂಡಿದ್ದರು. ಮಲ್ಯ ಅವರಿಗೆ ಬಂದಿರುವ ಹೊಸ ಸಂಕಷ್ಟಗಳ ಸರಮಾಲೆ ಮುಂದೆ ಓದಿ..

ಉಪವಾಸ ಸತ್ಯಾಗ್ರಹ ಭೀತಿ
ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳು ಬಾಕಿ ವೇತನ ಪಾವತಿಸುವಂತೆ ಬೇಡಿಕೆಯಿರಿಸಿದ್ದು, ವೇತನ ಪಾವತಿ ಮಾಡದಿದ್ದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ನೋಟಿಸ್ ನೀಡಿದೆ.
ವಿಮಾನವನ್ನು ಪುನರ್ ಕಾರ್ಯಾಚರಿಸುವಂತೆ ಮಾಡಲು ಬೇಕಾದ ಎಲ್ಲಾ ಯತ್ನಗಳನ್ನು ನಡೆಸುತ್ತಿರುವುದಾಗಿ ವಿಜಯ್ ಮಲ್ಯ ಈ ಹಿಂದೆ ಭರವಸೆ ನೀಡಿದ್ದರು. ಜುಲೈ 2012ರವರೆಗಿನ ವೇತನವನ್ನು ಇದೇ ಎಪ್ರಿಲ್ ತಿಂಗಳಿನಲ್ಲಿ ಉದ್ಯೋಗಿಗಳು ಪಡೆದಿದ್ದರು.
ನಗರ ಆಧಾರಿತ ಉದ್ಯೋಗಿಗಳು ಶಾಂತಿಯುತ ಚಳವಳಿಯನ್ನು ಇದೀಗಲೇ ಆರಂಭಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ವಿಮಾನ ಕಂಪೆನಿ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದ ವೇಳೆ ಸುಮಾರು 2,851 ಉದ್ಯೋಗಿಗಳು ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು.

ಇಂಜಿನ್ ದೋಷ ಕಾರಣ
ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಅಂಗವಾದ ಯುನೈಟೆಡ್ ಬ್ರೂವರೀಸ್ (ಹೋಲ್ಡಿಂಗ್ಸ್) ಲಿ. ಸಂಸ್ಥೆ ಈಗ ವಿಮಾನಗಳಿಗೆ ದೋಷ ಪೂರಿತ ಇಂಜಿನ್ ಒದಗಿಸಿದ ಇಂಟರ್ ನ್ಯಾಷನಲ್ ಏರೋ ಇಂಜಿನ್ಸ್ ಎಜಿ ವಿರುದ್ಧ ಹೈಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಒಟ್ಟಾರೆ 1477 ಕೋಟಿ ರು ಪರಿಹಾರ ಧನ ಕೋರಲಾಗಿದೆ.
ವಿಮಾನ ಹಾರಾಟದ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಲ್ಯ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದರು. ವಿಮಾನ ಯಾನ ಪುನರ್ ಆರಂಭಕ್ಕೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಇತ್ತೀಚೆಗೆ ಷೇರುದಾರರಿಗೆ ತಿಳಿಸಿದ್ದರು.ಮುಂಬೈ ಉದ್ಯೋಗಿಗಳ ತಂಡವು ವ್ಯವಸ್ಥಾಪಕರ ಜೊತೆ ಕೆಲವು ಸಭೆಗಳನ್ನು ನಡೆಸಿದ್ದಾರಾದರೂ ಕಂಪೆನಿ ನೀಡಿರುವ ಆಶ್ವಾಸನೆಯನ್ನು ಈಡೇರಿಸಿರಲಿಲ್ಲ.

ಮತ್ತೆ ಕಾಡುವ ನಿರಶನ
ವಾರ್ಷಿಕ ವರದಿಯಲ್ಲಿ ಹೇಳಿರುವಂತೆ ನಿರಂತರವಾಗಿ ಕೆಲಸ ನಿಂತಿದ್ದು ಸಂಸ್ಥೆಯ ನಿರ್ವಹಣೆ ವೆಚ್ಚ ಏರಲು ಕಾರಣವಾಯಿತು. ಅನಗತ್ಯವಾಗಿ ಸಿಬ್ಬಂದಿಗಳು ಮುಷ್ಕರ ಹೂಡಿದ್ದು ಕಾರಣ ಎಂದಿದ್ದರು.
ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ 8,000 ಕೋಟಿ ರು ಗೂ ಅಧಿಕ ಸಾಲದ ಹೊರೆಯನ್ನು ಮಲ್ಯ ಹೊತ್ತಿದ್ದು ಈ ಪೈಕಿ 1000 ಕೋಟಿ ರು ಮಾತ್ರ ಚುಕ್ತಾ ಮಾಡಿದ್ದರು. ಆದರೆ, ತಿಂಗಳುಗಳಿಂದ ಸಂಬಳ ಸಿಗದೆ ಒದ್ದಾಡುತ್ತಿದ್ದ ಸಿಬ್ಬಂದಿಗೆ ಬರಿ ಗೈ ತೋರಿಸಿದ್ದರು. ಸಂಬಳ ಸಿಗದೆ ಸಿಬ್ಬಂದಿಗಳು ನಿರಶನ ಮುಂದುವರೆಸಿದ್ದರು.ಈಗಲೂ ನಿರಶನ ಕಾಡಲಿದೆ.

ಯುಬಿ ಸಮೂಹದ ನೆರವು
ಮೊದಲ ಹಂತದ ಪುನಶ್ಚೇತನಕ್ಕೆ ಯುಬಿ ಸಮೂಹ ಸುಮಾರು 650 ಕೋಟಿ ರು ನೀಡುವ ಭರವಸೆ ಕೊಟ್ಟಿತ್ತು. ಎರಡನೇ ಹಂತದಲ್ಲಿ ಹೊಸ ಹೂಡಿಕೆದಾರರನ್ನು ಹುಡುಕುವುದು, ಸಾಲ ಪಾವತಿ, ಸೇವೆ ಹಾಗೂ ರೀ ಪೆಮೆಂಟ್ ಬಗ್ಗೆ ಯೋಜನೆ ಇತ್ತು. ಎಲ್ಲವೂ ಮಲ್ಯ ಅವರ ಆತುರದಿಂದ ವಿಫಲವಾಯಿತು.
ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿರುವುದರಿಂದ ಆಸ್ತಿ ಮಾರಾಟ ಹಾಗೂ ಹೊಸ ಹೂಡಿಕೆದಾರರನ್ನು ಸೆಳೆಯಬೇಕು. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಷೇರುದಾರರು ಸುಮ್ಮನೆ ಕೂರುವುದು ಕಷ್ಟ











Click it and Unblock the Notifications