ಗುಣಮಟ್ಟ ಪರೀಕ್ಷೆ : ನೀರಿನಲ್ಲಿ ಹೊಸ ನೋಟು ತೊಳೆದು ನೋಡಿ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 14: ಹೊಸ 500 ರೂಪಾಯಿ ಮತ್ತು 2000 ರೂಪಾಯಿಗಳ ನೋಟುಗಳು ದೇಶದೆಲ್ಲೆಡೆ ಹೊಸ ಕ್ರೇಜ್ ಹುಟ್ಟಿ ಹಾಕಿದೆ. ಹೊಸ ನೋಟು ಹಿಡಿದು ಸೆಲ್ಫಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಈ ಮಧ್ಯೆ ಹೊಸ 2000 ರೂಪಾಯಿ ನೋಟನ್ನು ಮುದ್ದೆ ಮಾಡಿದರೆ ಏನಾಗುತ್ತದೆ. ಹೊಸ ನೋಟಿನ ಗುಣಮಟ್ಟ ಪರೀಕ್ಷೆ ಹೀಗೂ ಮಾಡಬಹುದು ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

VIDEO: Rs 2,000 note Quality Test: Dip new note in water for 30 minutes

ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಂಡು ಹೊಸ ನೋಟು ಪಡೆಯುವುದೇ ಕಷ್ಟದ ಕೆಲಸ. ಇನ್ನು ಸಿಕ್ಕ ಹೊಸ ನೋಟನ್ನು ನೀರಿಗೆ ಹಾಕುವುದೇ? ಎಂದು ಪ್ರಶ್ನಿಸಿದವರೂ ಇದ್ದಾರೆ.

ಹೊಸ ನೋಟನ್ನು ಬಳಕೆ ಮಾಡುವ ಮೊದಲು ಹೇಗೆಲ್ಲ ಪರೀಕ್ಷಿಸಬೇಕು ಎಂಬುದರ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ, ನೋಟಿನ ಗುಣಮಟ್ಟದ ಬಗ್ಗೆ ಪರೀಕ್ಷಿಸುವ ವಿಧಾನ ಎಲ್ಲೂ ಹೇಳಿಲ್ಲ.


ಆದರೆ, ನೋಟನ್ನು ಮುದ್ದೆ ಮಾಡಿ, ನೀರಿಗೆ ಹಾಕಿದರೆ, ನೀರಿನಲ್ಲಿ 30 ನಿಮಿಷಕ್ಕೂ ಅಧಿಕ ಕಾಲ ನೆನಸಿಟ್ಟರೆ ಬಣ್ಣ ಉಳಿಯುತ್ತದೆಯೇ? ಹೀಗೆ ಒದ್ದೆಯಾಗಿ ಒಣಗಿದ ನೋಟನ್ನು ಮತ್ತೆ ಬಳಸಬಹುದೇ ಎಂಬುದರ ಬಗ್ಗೆ ಕುತೂಹಲವಿದ್ದವರು ಈ ವಿಡಿಯೋ ತಪ್ಪದೇ ನೋಡಿ.. ಇದೇ ರೀತಿ ಇನ್ನೂ ಅನೇಕ ವಿಡಿಯೋಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
VIDEO: Rs 2,000 note Quality Test by dipping new note in water for 30 minutes. Many video has gone viral showing a new Rs 2,000 note undergoing a quality test.
Please Wait while comments are loading...