ಇಪಿಎಫ್‍ಓ ವ್ಯವಹಾರಕ್ಕೆ ಇಸಿಆರ್ ಭರ್ತಿ ಸೌಲಭ್ಯ ಬಳಸಿ
ಬಳ್ಳಾರಿ,ಮೇ 3: ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಲಾಕ್‍ಡೌನ್ ಘೋಷಿಸಿರುವುದರಿಂದ ವ್ಯವಹಾರಗಳು ಮತ್ತು ಉದ್ಯಮಗಳು ಸಾಮಾನ್ಯವಾಗಿ ಕಾರ್ಯನಿರ್ವಾಹಿಸಲು ಸಾಧ್ಯವಾಗುತ್ತಿಲ್ಲ. ಬಾಕಿ ಪಾವತಿಸಲು ನಗದು ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಭವಿಷ್ಯನಿಧಿಯ ವ್ಯವಹಾರಕ್ಕಾಗಿ ಎಲೆಕ್ಟ್ರೋನಿಕ್ ಚಲನ್ ಕಂ ರಿಟರ್ನ್ (ಇಸಿಆರ್) ನಲ್ಲಿ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಭವಿಷ್ಯ ನಿಧಿ ಸಹಾಯಕ ಆಯುಕ್ತರು ಸಂದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಪಿಎಫ್ ಮತ್ತು ಎಂಪಿ ಆಕ್ಟ್ 1952 ಅಡಿಯಲ್ಲಿ ಅನುಸರಣೆ ಕಾರ್ಯವಿಧಾನವನ್ನು ಇನ್ನಷ್ಟು ಸುಲಭಗೊಳಿಸಲು ಮಾಸಿಕ ಎಲೆಕ್ಟ್ರೋನಿಕ್ ಚಲನ್ ಕಮ್ ರಿಟರ್ನ್(ಇಸಿಆರ್) ಸಲ್ಲಿಸುವಿಕೆಯು ಇಸಿಆರ್ ನಲ್ಲಿ ವರದಿಯಾದ ಶಾಸನ ಬದ್ಧ ಕೊಡುಗೆಗಳು ಪಾವತಿಯಿಂದ ಬೇರ್ಪಟ್ಟಿವೆ. ಈ ಬದಲಾವಣೆಯು ಉದ್ಯೋಗದಾತರಿಗೆ ಮತ್ತು ಕಾಯ್ದೆ ಯೋಜನೆಗಳ ವ್ಯಾಪ್ತಿಗೆ ಬರುವ ನೌಕರರಿಗೆ ಅನುಕೂಲವಾಗಲಿದೆ. ಸಕಾಲದಲ್ಲಿ ಉದ್ಯೋಗದಾತರಿಂದ ಇಸಿಆರ್ ಅನ್ನು ಸಲ್ಲಿಸುವುದು ಸರ್ಕಾರವು ಘೋಷಿಸಿದಂತೆ ವಿಸ್ತೃತ ಸಮಯದೊಳಗೆ ಬಾಕಿ ಪಾವತಿಸಿದರೆ ದಂಡದ ಪರಿಣಾಮಗಳು ಇರುವುದಿಲ್ಲ.
ಸಮಯಕ್ಕೆ ಇಸಿಆರ್ ಸಲ್ಲಿಸುವುದು ಉದ್ಯೋಗದಾತ ಮತ್ತು ಉದ್ಯೋಗಿಗಳ ಕೊಡುಗೆಗಳ ಸಾಲಕ್ಕೆ ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಶೇ.24 ರಷ್ಟು ವೇತನ ಸಂಸ್ಥೆಗಳ ಇಪಿಎಫ್ ಖಾತೆಗಳಲ್ಲಿ ಬರುವ ಕನಿಷ್ಠ ವೇತನಗಳಿಸುವವರು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅರ್ಹರಾಗಿರುತ್ತಾರೆ.

ಕೊವಿಡ್-19 ಸಾಂಕ್ರಮಿಕ ರೋಗದಿಂದ ಪ್ರತಿಕೂಲ ಪರಿಣಾಮ ಬೀರುವ ವ್ಯವಹಾರಗಳು ಮತ್ತು ಇಪಿಎಫ್ ಸದಸ್ಯರಿಗೆ ಹೆಚ್ಚಿನ ಪರಿಹಾರಕ್ಕಾಗಿ ನೀತಿ ಯೋಜನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಸ್ತುತ ಇಸಿಆರ್ ಡೇಟಾ ಸಹಾಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications