ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಕಳ್ಳರ ಮಾಹಿತಿ ನೀಡಿ, ಬಹುಮಾನ ಗಳಿಸಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 07: ಸರ್ಕಾರ ಮತ್ತು ಪೊಲೀಸರಿಗೆ ಬೇಕಾದ ವ್ಯಕ್ತಿ ತಲೆಮರೆಸಿಕೊಂಡಾಗ ಆತನ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡುತ್ತೇವೆ ಎಂದು ಪ್ರಕಟಣೆ ಮಾಡುತ್ತಿದ್ದದ್ದು ಹಳೆ ಶೈಲಿ. ಇದೀಗ ತೆರಿಗೆ ವಂಚಕರ ಬಗ್ಗೆ ಮಾಹಿತಿ ನೀಡಿದರೆ ಕೈ ತುಂಬಾ ಬಹುಮಾನ ಪಡೆದುಕೊಳ್ಳಹುದು.

ತೆರಿಗೆ ವಂಚಕರ ಕುರಿತು ದಾಖಲೆ ಸಮೇತ ರಹಸ್ಯವಾಗಿ ಮಾಹಿತಿ ನೀಡುವ ವ್ಯಕ್ತಿಗಳಿಗೆ 15 ಲಕ್ಷ ರೂ.ವರೆಗೂ ಬಹುಮಾನ ನೀಡುವ ಯೋಜನೆಯೊಂದನ್ನು ಆದಾಯ ತೆರಿಗೆ ಇಲಾಖೆ ಜಾರಿಗೆ ತಂದಿದೆ.

Upto Rs 15 lakh award for information against tax defaulters

ದೇಶದ ಎಲ್ಲ ಶಾಖಾ ಕಚೇರಿಗಳಿಗೂ ಮಾರ್ಗಸೂಚಿ ಕಳುಹಿಸಿಕೊಡಲಾಗಿದೆ. ಟಿಡಿಎಸ್‌ ಹಾಗೂ ಸ್ವಯಂ ಘೋಷಿತ ತೆರಿಗೆ ಸೇರಿದಂತೆ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳ ಕುರಿತು ಯಾರಾದರೂ ರಹಸ್ಯವಾಗಿ ದಾಖಲೆ ಸಮೇತ, ವಿಶ್ವಾಸಾರ್ಹ ಮಾಹಿತಿ ನೀಡಿದರೆ ತೆರಿಗೆ ಮೊತ್ತದ ಶೇ.10ರಷ್ಟನ್ನು ಬಹುಮಾನ ರೂಪದಲ್ಲಿ ನೀಡಲಾಗುವ [ಆನ್ ಲೈನ್ ನಲ್ಲಿ ತೆರಿಗೆ ಕಟ್ಟುವುದು ಹೇಗೆ?]

ನಿಬಂಧನೆಗಳೂ: ದುರುದ್ದೇಶಪೂರಿತ, ಉಹಾತ್ಮಕ ಮತ್ತು ಅಂದಾಜಿನ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ವೆಬ್ ತಾಣ ಅಥವಾ ಸಮೀಪದ ಶಾಖಾ ಕಚೇರಿಯನ್ನು ಸಂಪರ್ಕ ಮಾಡಬಹುದು.[ಆದಾಯ ತೆರಿಗೆ ಪಾವತಿ ಕೊನೆ ದಿನಾಂಕ ಮತ್ತೆ ವಿಸ್ತರಣೆ]

ಆದಾಯ ತೆರಿಗೆ ರಿಟರ್ನ್ಸ್ ಮರುಪಾವತಿ ಅವಧಿಯನ್ನು ಆಗಸ್ಟ್ 7 ರವರೆಗೂ ವಿಸ್ತರಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದನ್ನು ಮರೆತಿದ್ದರೆ ಕೊನೆ ಅವಕಾಶ ಬಳಸಿಕೊಳ್ಳಿ.

English summary
The Income Tax department has brought out guidelines to award secret informers providing actionable clue about "untraceable" assesses who owe huge taxes and money to government including in TDS and self assessment Tax category. The department issued a set of new instructions to all its offices in the country stating any person who provides credible inputs against a declared defaulter would be rewarded a 10 per cent booty of tax realised from such an entity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X