ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ನಲ್ಲಿ 678 ಕೋಟಿಗೆ ಹೆಚ್ಚಿದ ಯುಪಿಐ ವಹಿವಾಟುಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 3: ಯುಪಿಐ ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 3 ಪ್ರತಿಶತದಷ್ಟು ಹೆಚ್ಚಾಗಿದ್ದು, 6.78 ಶತಕೋಟಿಗೆ ಮುಟ್ಟಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಆಗಸ್ಟ್ 2020ರಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಹಣಕಾಸು ವಹಿವಾಟುಗಳ ಒಟ್ಟು ಸಂಖ್ಯೆ 6.57 ಶತಕೋಟಿ (657 ಕೋಟಿ) ಆಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ದತ್ತಾಂಶದ ಮೌಲ್ಯದ ಪರಿಭಾಷೆಯ ಪ್ರಕಾರ, ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ 6.78 ಶತಕೋಟಿ (678 ಕೋಟಿ) ವಹಿವಾಟುಗಳು ನಡೆದು 11.16 ಲಕ್ಷ ಕೋಟಿ ಮೌಲ್ಯದ ವಹಿವಾಟುಗ ನಡೆದಿದೆ. ಇದು ಆಗಸ್ಟ್‌ನಲ್ಲಿ 10.73 ಲಕ್ಷ ಕೋಟಿ ರೂ. ಆಗಿತ್ತು.

ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸಲು ಇದು ಸಮಯವಲ್ಲ: ನಿರ್ಮಲಾ ಸೀತಾರಾಮನ್ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸಲು ಇದು ಸಮಯವಲ್ಲ: ನಿರ್ಮಲಾ ಸೀತಾರಾಮನ್

ಜುಲೈನಲ್ಲಿ ಭಾರತವು 10.62 ಲಕ್ಷ ಕೋಟಿ ಮೌಲ್ಯದ 6.28 ಬಿಲಿಯನ್ ಯುಪಿಐ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. ಯುಪಿಐ ಬಳಕೆದಾರರಲ್ಲಿ ಆದ್ಯತೆಯ ಪಾವತಿಯ ವಿಧಾನವಾಗುತ್ತಿದೆ. ಏಕೆಂದರೆ ಇದು ಬಳಸಲು ಸರಳ ಹಾಗೂ ವೇಗದ ಮತ್ತು ಸುರಕ್ಷಿತ ಪಾವತಿ ವಿಧಾನವಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿಯಲ್ಲಿ ಇತರ ಪಾವತಿ ವಿಧಾನಗಳಲ್ಲಿ ಐಎಂಪಿಎಸ್‌ ಮೂಲಕ ತ್ವರಿತ ಅಂತರ ಬ್ಯಾಂಕ್ ಪಾವತಿಗಳು ಸೆಪ್ಟೆಂಬರ್‌ನಲ್ಲಿ 462.69 ಮಿಲಿಯನ್ (46.27 ಕೋಟಿ) ಗೆ ಹಿಂದಿನ ತಿಂಗಳಲ್ಲಿ 466.91 ಮಿಲಿಯನ್ (46.69 ಕೋಟಿ) ಗಿಂತ ಸ್ವಲ್ಪ ಕಡಿಮೆಯಾಗಿದೆ. ಜುಲೈನಲ್ಲಿ ಇದು 460.83 ಮಿಲಿಯನ್ (46.03 ಕೋಟಿ) ಆಗಿತ್ತು.

UPI Transactions in September 2022: UPI Clocks Over 6.57 Billion Transactions in September Month

ಆಧಾರ್ ಸಂಖ್ಯೆ ಆಧಾರಿತ ಎಇಪಿಎಸ್‌ ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 102.66 ಮಿಲಿಯನ್ ಆಗಿತ್ತು. ಒಂದು ತಿಂಗಳ ಹಿಂದೆ 105.65 ಮಿಲಿಯನ್ ಆಗಿತ್ತು. ಜುಲೈನಲ್ಲಿ, 110.48 ಮಿಲಿಯನ್ ಎಇಪಿಎಸ್ ವಹಿವಾಟುಗಳು ನಡೆದಿವೆ. ಒಮಾನ್, ನವದೆಹಲಿ ಮತ್ತು ಮಸ್ಕತ್‌ನೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಲ್ಲಿ ಡಿಜಿಟಲ್ ಹಣಕಾಸು ಮತ್ತು ಪಾವತಿಗಳಲ್ಲಿ ಸಹಕಾರಕ್ಕಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಓಮನ್ ನಡುವಿನ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಿದೆ.

ಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಾ ಆರ್‌ಬಿಐ: ಹಣಕಾಸು ಸಚಿವಾಲಯ ಹೇಳಿದ್ದೇನು?ಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಾ ಆರ್‌ಬಿಐ: ಹಣಕಾಸು ಸಚಿವಾಲಯ ಹೇಳಿದ್ದೇನು?

ಮಹತ್ವದ ಈ ಒಪ್ಪಂದವು ಒಮಾನ್‌ನಲ್ಲಿ ರುಪೇ ಕಾರ್ಡ್‌ಗಳು ಮತ್ತು ಯುಪಿಐ ಪ್ಲಾಟ್‌ಫಾರ್ಮ್‌ನ ಬಳಕೆಯನ್ನು ಸುಗಮಗೊಳಿಸುತ್ತದೆ. ಭಾರತೀಯ ಕಾರ್ಮಿಕರು ಮತ್ತು ವೃತ್ತಿಪರರಿಗೆ ಅನುಕೂಲವಾಗುವಂತೆ ತಡೆರಹಿತ ಡಿಜಿಟಲ್ ರವಾನೆಗಾಗಿ ಸಹಯೋಗವನ್ನು ನೀಡುತ್ತದೆ.

English summary
UPI Transactions in September 2022: Unified Payments Interface (UPI) clocked over Rs 678 crore transactions in September. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X